ಎಲ್ಲರಿಗೂ ಟರ್ಮ್ ಡೆಪಾಸಿಟ್ ಬಗ್ಗೆ ತಿಳಿದಿರುತ್ತದೆ. ಆದರೆ ನಿಮಗೆ ಗ್ರೀನ್ ಟರ್ಮ್ ಡೆಪಾಸಿಟ್ ಅಥವಾ ಗ್ರೀನ್ ಎಫ್ ಡಿ ಬಗ್ಗೆ ಗೊತ್ತಿದೆಯೇ? ಹಾಗೆಂದರೆ ಏನು? ರೆಗ್ಯುಲರ್ ಎಫ್ ಡಿ ಗೂ ಇದಕ್ಕೂ ಏನು ವ್ಯತ್ಯಾಸ? ಗ್ರೀನ್ ಮತ್ತು ನಾರ್ಮಲ್ ಎಫ್ ಡಿ ಗೂ ಬಡ್ಡಿ ದರದಲ್ಲಿ ವ್ಯತ್ಯಾಸ ಇದೆಯೇ? ಇದನ್ನು ಸಹ ನಾವು ತಿಳಿದುಕೊಳ್ಳಬೇಕು.
ಗ್ರೀನ್ ಎಫ್ ಡಿಯನ್ನು ಪರಿಸರ ಸ್ನೇಹಿ ಫಿಕ್ಸೆಡ್ ಡೆಪಾಸಿಟ್ ಎಂದೂ ಕರೆಯಲಾಗುತ್ತದೆ. ಇದರಿಂದ ಸಂಗ್ರಹವಾದ ಹಣವನ್ನು ಪರಿಸರಕ್ಕೆ ಅನುಕೂಲಕರವಾದ ಪ್ರಾಜೆ ಕ್ಟ್ ನಲ್ಲಿ ಹೂಡಿಕೆ ಮಾಡಲಾಗುತ್ತದೆ. ಉದಾಹರಣೆಗೆ ಸೋಲಾರ್ ಪವರ್, ವಿಂಡ್ ಫಾರ್ಮ್, ತ್ಯಾಜ್ಯ ನಿರ್ವಹಣೆ ಮತ್ತು ಇಂಧನ ರಕ್ಷಾ ಮೂಲಸೌಕರ್ಯ ಯೋಜನೆಗಳಲ್ಲಿ ಹೂಡಿಕೆ ಮಾಡಲಾಗುತ್ತದೆ.
ಒಂದು ಸಾಮಾನ್ಯ ಬ್ಯಾಂಕ್ ಎಫ್‌ಡಿ ರೀತಿಯಲ್ಲೇ, ಗ್ರಾಹಕರು ಗ್ರೀನ್ ಫಿಕ್ಸೆಡ್ ಡೆಪಾಸಿಟ್ ನಲ್ಲೂ ಕೂಡ ಫಿಕ್ಸೆಡ್ ಟೈಮಿಗೆ ಹೂಡಿಕೆ ಮಾಡಬಹುದು. ಆದರೆ ಇದರಲ್ಲಿರುವ ವ್ಯತ್ಯಾಸ ಏನೆಂದರೆ ಫಂಡ್ ಅಲೊಕೇಶನ್. ಗ್ರೀನ್ ಎಫ್ ಡಿ ಯಲ್ಲಿ ಸಂಗ್ರಹವಾದ ಹಣವನ್ನು ಎಕೋ ಫ್ರೆಂಡ್ಲಿ ಪ್ರಾಜೆಕ್ಟ್ ಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಆದರೆ ಸಾಮಾನ್ಯ ಡಿಪೋಸಿಟ್ ಗಳಲ್ಲಿ ಯಾವುದೇ ನಿರ್ದಿಷ್ಟ ಪ್ರಾಜೆಕ್ಟ್ ಗಳಿಗೆ ಹಣ ಹಾಕಲಾಗುವುದಿಲ್ಲ. ಇದು ಒಂದು ಸಾಮಾನ್ಯ ಹೂಡಿಕೆ ನಿಧಿಗೆ ಹೋಗುತ್ತದೆ. ಈ ನಿಧಿಯನ್ನು ವ್ಯಾಪಾರ, ಮನೆ, ವಾಹನ ಮತ್ತು ವೈಯಕ್ತಿಕ ಸಾಲಗಳಿಗೆ ಬಳಸಲಾಗುತ್ತದೆ.
ಗ್ರೀನ್ ಫಿಕ್ಸೆಡ್ ಡೆಪಾಸಿಟ್ ಅನ್ನು ಜನಸಾಮಾನ್ಯರು, ಹಿರಿಯ ನಾಗರಿಕರು, ಅನಿವಾಸಿ ಭಾರತೀಯರು ಅಥವಾ ಎನ್ ಆರ್ ಐ ಗಳು ಹಾಗೂ ಅಧಿಕ ಸಂಪತ್ತು ಇರುವ ವ್ಯಕ್ತಿಗಳು ಕೂಡ ತೆರೆಯಬಹುದು.
ಗ್ರೀನ್ ಫಿಕ್ಸೆಡ್ ಡೆಪಾಸಿಟ್ ಗಳ ಬಡ್ಡಿ ದರ ಸಾಮಾನ್ಯ ಫಿಕ್ಸೆಡ್ ಡೆಪಾಸಿಟ್ ಗಳಿಗೆ ಹೋಲಿಸಿದರೆ ಹೆಚ್ಚು ಅಥವಾ ಕಡಿಮೆ ಇರಬಹುದು. ಏಕೆಂದರೆ ಇದು ಬ್ಯಾಂಕ್ ನಿಗದಿ ಮಾಡಿದ ನೀತಿಗಳನ್ನು ಆಧರಿಸಿರುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡ, ಎಚ್ ಡಿ ಎಫ್ ಸಿ ಬ್ಯಾಂಕ್, ಎ ಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ ಇತ್ಯಾದಿ ಸಂಸ್ಥೆಗಳು ಗ್ರೀನ್ ಎಫ್ ಡಿ ಗಳನ್ನು ವಿತರಿಸುತ್ತವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA