ಪ್ರಧಾನ ಮಂತ್ರಿಯ ಎಷ್ಟು ಸಂಬಳ ಪಡೆಯುತ್ತಾರೆ ಎಂಬ ಕುತೂಹಲ ಹಲವರಲ್ಲಿ ಇರುತ್ತದೆ. ಭಾರತದ ಪ್ರಧಾನ ಮಂತ್ರಿ ದೇಶದ ಅತ್ಯುನ್ನತ ಕಾರ್ಯನಿರ್ವಾಹಕ ಹುದ್ದೆ ಹೊಂದಿದ್ದಾರೆ. ಸರ್ಕಾರದ ಮುಖ್ಯಸ್ಥರಾಗಿರುವ ಇವರು ಮಹತ್ವದ ಅಧಿಕಾರ ಮತ್ತು ಜವಾಬ್ದಾರಿ ಹೊಂದಿದ್ದಾರೆ. ಪ್ರಧಾನ ಮಂತ್ರಿಯನ್ನು ಭಾರತದ ರಾಷ್ಟ್ರಪತಿ ನೇಮಕ ಮಾಡುತ್ತಾರೆ. ಇವರು ಲೋಕಸಭೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಹೊಂದಿರುವ ಪಕ್ಷದ ಮುಖ್ಯಸ್ಥರಾಗಿರುತ್ತಾರೆ.
ಪ್ರಧಾನ ಮಂತ್ರಿ ಮತ್ತು ಸಂಸದರು ಸಂಬಳದ ಜೊತೆಗೆ ಹಲವು ಸವಲತ್ತುಗಳು ಮತ್ತು ವಿಶೇಷ ಭತ್ಯೆಗಳನ್ನು ಪಡೆಯುತ್ತಾರೆ. ಪ್ರಧಾನಿ ಅಧಿಕೃತ ನಿವಾಸವನ್ನು ಬಾಡಿಗೆ ಅಥವಾ ಇತರ ವಸತಿ ವೆಚ್ಚಗಳಿಲ್ಲದೆ ಪಡೆಯುತ್ತಾರೆ. ಪ್ರಧಾನಿ ಭದ್ರತೆಯ ಹೊಣೆಯನ್ನು ವಿಶೇಷ ರಕ್ಷಣಾ ಗುಂಪು (SPG) ತೆಗೆದುಕೊಳ್ಳುತ್ತದೆ.
ಪ್ರಧಾನಿ ವಿದೇಶಕ್ಕೆ ಹೋದಾಗ ಅವರ ವಾಸ್ತವ್ಯ, ಆಹಾರ ಮತ್ತು ಪ್ರಯಾಣ ವೆಚ್ಚವನ್ನು ಸರ್ಕಾರ ಭರಿಸುತ್ತದೆ. ಪ್ರಧಾನಿ ತಮ್ಮ ಪ್ರಯಾಣದ ಅವಶ್ಯಕತೆಗಳನ್ನು ಪೂರೈಸಲು ಸರ್ಕಾರಿ ವಾಹನಗಳು ಮತ್ತು ವಿಮಾನಗಳನ್ನು ಬಳಸುತ್ತಾರೆ.
ನಿವೃತ್ತಿಯ ನಂತರ, ಅವರು ಉಚಿತ ವಸತಿ, ವಿದ್ಯುತ್, ಜೀವನಕ್ಕಾಗಿ ನೀರು ಮತ್ತು ನಿವೃತ್ತಿಯ ನಂತರ 5 ವರ್ಷಗಳವರೆಗೆ ಎಸ್ ಪಿಜಿ ಭದ್ರತೆಯನ್ನು ಪಡೆಯುತ್ತಾರೆ. ಭಾರತದ ಪ್ರಧಾನಿ ತಿಂಗಳಿಗೆ 1.66 ಲಕ್ಷ ರೂಪಾಯಿ ಪಡೆಯುತ್ತಾರೆ. 50,000 ಮೂಲ ವೇತನ ಹೊಂದಿರುತ್ತಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA