ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಅವರ ಪತ್ನಿ ಜಿಲ್ ಗೆ ಹಲವಾರು ಜಾಗತಿಕ ನಾಯಕರು ಉಡುಗೊರೆ ನೀಡಿದ್ದಾರೆ. ಈ ಪೈಕಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಉಡುಗೊರೆ ಅತ್ಯಂತ ದುಬಾರಿ ಉಡುಗೊರೆಯಾಗಿ ಹೊರಹೊಮ್ಮಿದೆ.
ಪ್ರಧಾನಿ ನರೇಂದ್ರ ಮೋದಿ 17 ಲಕ್ಷ ರೂಪಾಯಿ ಮೌಲ್ಯದ ವಜ್ರವನ್ನು ಉಡುಗೊರೆಯಾಗಿ ನೀಡಿದ್ದರು. ಇದರ ಬೆಲೆ ಇದೀಗ ಬಹಿರಂಗಗೊಂಡಿದೆ. ಅಮೆರಿಕದ ಕಾನೂನಿನ ಪ್ರಕಾರ, 41 ಸಾವಿರ ರೂಪಾಯಿಗಿಂತ ಹೆಚ್ಚಿನ ಉಡುಗೊರೆ ಪಡೆದರೆ ಅದರ ಮೌಲ್ಯವನ್ನು ಬಹಿರಂಗಪಡಿಸುವುದು ಕಡ್ಡಾಯವಾಗಿದೆ, ಹೀಗಾಗಿ ಇದೀಗ ಪ್ರಧಾನಿ ನೀಡಿದ ಉಡುಗೊರೆಯ ಬೆಲೆ ತಿಳಿದು ಬಂದಿದೆ.
ಅಮೆರಿಕದ ಅಧ್ಯಕ್ಷ ಹಾಗೂ ಅವರ ಪತ್ನಿಗೆ ವಿದೇಶಿ ನಾಯಕರು ನೀಡುವ ಉಡುಗೊರೆಗಳನ್ನು ಸಂಗ್ರಹಾಲಯಗಳಲ್ಲಿ ಇಡಲಾಗುತ್ತದೆ. ಪ್ರಧಾನಿ ಮೋದಿ ನೀಡಿದ್ದ 7.5 ಕ್ಯಾರೆಟ್ ನ ವಜ್ರವನ್ನು ವೈಟ್ ಹೌಸ್ ನ ಈಸ್ಟ್ ವಿಂಗ್ ನಲ್ಲಿ ಉಳಿಸಿಕೊಳ್ಳಲಾಗಿದೆಯಂತೆ.
ಈ ದುಬಾರಿ ಉಡುಗೊರೆಗಳನ್ನು ರಾಷ್ಟ್ರೀಯ ಸಂಗ್ರಹಾಗಾರದಲ್ಲಿ ಇಡಲಾಗುತ್ತದೆ. ಅಥವಾ ಪ್ರದರ್ಶನಕ್ಕಿಡಲಾಗುತ್ತದೆ. ಒಂದು ವೇಳೆ ಉಡುಗೊರೆ ಪಡೆದವರು ಅದನ್ನು ಪಡೆಯಬೇಕಾದರೆ, ಅದರ ಮೊತ್ತವನ್ನು ಸರ್ಕಾರಕ್ಕೆ ಪಾವತಿಸಿ ಪಡೆಯಬಹುದಂತೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx