ನಟ ಸಲ್ಮಾನ್ ಖಾನ್ ನಿವಾಸದ ಮೇಲೆ ಗುಂಡಿನ ದಾಳಿ ನಡೆಸಿರುವುದು ನಟನಿಗೆ ಅಪಾಯ ತರುವುದು ಆಗಿರಲಿಲ್ಲ ಅಲ್ಲ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನ ಉದ್ದೇಶ ಬಾಲಿವುಡ್ ನಲ್ಲಿ ಭಯವನ್ನು ಹರಡುವುದಾಗಿತ್ತು ಎಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಮಹತ್ವದ ಮಾಹಿತಿ ಇದೆ.
ಒಂದು ಕಾಲದಲ್ಲಿ ಬಾಲಿವುಡ್ ನಲ್ಲಿ ಭಯವನ್ನು ಬಿತ್ತಿದ್ದ ಡಿ ಕಂಪನಿಯಂತಹ ಮಾಫಿಯಾ ಗ್ಯಾಂಗ್ ಗಳು ಈಗಿಲ್ಲ. ಮುಂಬೈ ಪೊಲೀಸರ ಅಪರಾಧ ವಿಭಾಗವು ಬಿಷ್ಣೋಯ್ ಗ್ಯಾಂಗ್ ಈ ಅಂತರವನ್ನು ಒಂದು ಅವಕಾಶವಾಗಿ ನೋಡುತ್ತಿದೆ ಎಂದು ಕಂಡುಹಿಡಿದಿದೆ.
ಸಲ್ಮಾನ್ ಮೇಲೆ ಗುಂಡು ಹಾರಿಸಿ ಬಾಲಿವುಡ್ ನಲ್ಲಿ ಭಯ ಹುಟ್ಟಿಸಿ ಮತ್ತಷ್ಟು ಜನರನ್ನು ಬೆದರಿಸಿ ಹಣ ವಸೂಲಿ ಮಾಡಬಹುದು ಎಂಬುದು ಬಿಷ್ಣೋಯ್ ಗ್ಯಾಂಗ್ ಲೆಕ್ಕಾಚಾರ. ಚಾರ್ಜ್ ಶೀಟ್ ನಲ್ಲಿ ಕುಖ್ಯಾತ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಸೇರಿದಂತೆ 9 ಜನರನ್ನು ಆರೋಪಿಗಳೆಂದು ಹೆಸರಿಸಲಾಗಿದೆ.
ಆರೋಪಿಗಳಲ್ಲಿ ಒಬ್ಬನಾದ ಅನುಜ್ ಥಾಪನ್ ಪೊಲೀಸ್ ಕಸ್ಟಡಿಯಲ್ಲಿದ್ದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದಕ್ಕೂ ಮುನ್ನ ನವಿ ಮುಂಬೈ ಪೊಲೀಸರು ಪನ್ವೇಲ್ ನಲ್ಲಿರುವ ಅವರ ಫಾರ್ಮ್‌ಹೌಸ್ ನಲ್ಲಿ ಸಲ್ಮಾನ್ ಅವರನ್ನು ಕೊಲ್ಲಲು ಸಂಚು ರೂಪಿಸಿದ ಪ್ರಕರಣದಲ್ಲಿ ಚಾರ್ಜ್‌ಶೀಟ್ ಸಲ್ಲಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA