2025 ಇಸವಿಯ ಮೊದಲ ಸೂರ್ಯಗ್ರಹಣ ಮಾರ್ಚ್ 29ರಂದು ಸಂಭವಿಸಲಿದೆ. ಆದ್ರೆ ಈ ಗ್ರಹಣವು ಭಾರತದಲ್ಲಿ ಕಾಣಿಸಲ್ಲ. ಗ್ರಹ ಅಥವಾ ಉಪಗ್ರಹದ ನೆರಳು ಭಾಗಶಃ ಅಥವಾ ಸಂಪೂರ್ಣ ಇನ್ನೊಂದರ ಮೇಲೆ ಬಿದ್ದಾಗ ಗ್ರಹಣ ನಡೆಯುತ್ತದೆ.
ಸೂರ್ಯ, ಚಂದ್ರ ಮತ್ತು ಭೂಮಿ ಒಂದು ಸರಳ ರೇಖೆಯಲ್ಲಿ ಬಂದಾಗ ಸೂರ್ಯಗ್ರಹಣ ನಡೆಯುತ್ತದೆ. ಈ ಬಾರಿಯ ಸೂರ್ಯ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ, ಏಷ್ಯಾ, ಆಫ್ರಿಕಾ, ಯುರೋಪ್, ಅಟ್ಲಾಂಟಿಕ್ ಸಾಗರ, ಅಮೆರಿಕ, ಸೈಬೇರಿಯಾ, ರಷ್ಯಾ, ಗ್ರೀನ್ಲ್ಯಾಂಡ್, ವೆಸ್ಟರ್ಟ್ ಯುರೋಪ್ ನಲ್ಲಿ ಈ ಗ್ರಹಣ ಕಾಣಿಸಿಕೊಳ್ಳಲಿದೆ.
ಗ್ರಹಣ ಅನ್ನೋದು ಪ್ರಕೃತಿಯ ವಿಸ್ಮಯವಾಗಿದೆ. ಇದರಲ್ಲಿ ಯಾವುದೇ ಮೌಢ್ಯತೆಗಳನ್ನು ಆಚರಿಸದೇ ಸಾರ್ವಜನಿಕರು ವಿಜ್ಞಾನಕ್ಕೆ ಹೆಚ್ಚಿನ ಮಹತ್ವವನ್ನು ನೀಡಬೇಕಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4