ಸಾಮಾನ್ಯವಾಗಿ ಪ್ರಪಂಚದ ಯಾವುದೇ ಮೂಲೆಗೆ ಹೋದರೂ ಆಂಜನೇಯಸ್ವಾಮಿ ನಿಂತಿರುತ್ತಾನೆ ಇಲ್ಲ ಕುಳಿತಿರುತ್ತಾನೆ. ಈ ಪ್ರದೇಶದಲ್ಲಿರುವ ಆಂಜನೇಯಸ್ವಾಮಿ ಮಲಗಿದ ಭಂಗಿಯಲ್ಲಿ ಇದ್ದಾನೆ. ಇಲ್ಲಿಯ ಆಂಜನೇಯ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತದೆ. ಹಾಗಾದರೆ ಈ ದೇವಸ್ಥಾನ ಇರುವುದಾದರೂ ಎಲ್ಲಿ? ಇದರ ವಿಶೇಷತೆ ಏನು?
ಇಂದಿಗೂ ಮಕ್ಕಳಿಲ್ಲದವರು ಇಲ್ಲಿ ಬಂದು ಹರಕೆ ಹೊರುತ್ತಾರೆ ಅಪರೂಪದಲ್ಲಿ ಅಪರೂಪ ಆಂಜನೇಯ ಭಂಗಿ. ಈ ದೇವಸ್ಥಾನವು ಅಷ್ಟೇ ವಿಶೇಷತೇಗಳಿಂದ ಕುಡಿದೆ. ಈ ಪಡೆ ಹನುಮಾನ್ ಬಲ ಪಾದದ ಕೆಳಗೆ ಐರಾವಣ ಪ್ರತಿಮೆ ಇದೆ.ಹನುಮಾನ್ ಈತನ ಕೆಟ್ಟ ಕಾರ್ಯ ಮತ್ತು ಗುಣಗಳನ್ನು ಮೆಟ್ಟಿ ನಿಂತಿರುವ ಸಂಕೇತವಾಗಿದೆ.ಹಾಗೆ ಎಡ ಕಾಲದ ಬಳಿ ಇಚ್ಚಾಶಕ್ತಿ ದೇವಿ ಕಾಮದೇವಿ ಪ್ರತಿಮೆಯಿದೆ.
ಒಬ್ಬ ವ್ಯಾಪಾರಿ ಈ ಮೂರ್ತಿಯನ್ನು ತನ್ನ ಊರಲ್ಲಿ ಸ್ಥಾಪಿಸಲು ದೋಣಿಯಲ್ಲಿ ತೆಗೆದುಕೊಂಡು ಹೋಗುತ್ತಿರುವಾಗ ದೋಣಿ ಪ್ರಯಾಗದ ಬಳಿಬಂದು ಮುಳುಗಿದಂತೆ. ಮೇಲೆತ್ತಲು ವ್ಯಾಪಾರಿ ಎಷ್ಟೇ ಪ್ರಯತ್ನಿಸಿದರೂ ಆಗಲಿಲ್ಲವಂತೆ.
ಕೊನೆಗೆ ಆ ವ್ಯಾಪಾರಿ ಆಂಜನೇಯನಿಗೆ ಇಲ್ಲಿ ನೆಲೆಸಲು ಮನಸಿಗೆ ಎಂದು ತಿಳಿದು ಅಲ್ಲಿಯೇ ಬಿಟ್ಟರಂತೆ. ಆಂಜನೇಯಸ್ವಾಮಿ ಪ್ರಯಾಗದ ನೀರಿನ ಆಳದಲ್ಲಿ ಹೇಗೆ ಮಲಗಿದನು ಅದೇ ರೂಪದಲ್ಲಿ ಮೇಲೆ ವಿಗ್ರಹವನ್ನು ಸ್ಥಾಪಿಸಿ, ಸುಂದರ ದೇವಸ್ಥಾನವನ್ನು ಕಟ್ಟಿಸಿದರೆಂದು ಇದು ಹೇಳಲಾಗುತ್ತಿದೆ. ಈ ದೇವರ ದರ್ಶನ ಪಡೆಯಲು ಭೂಮಿಯಿಂದ 15 ಮೀಟರ್ ಕೆಳಗಿಳಿದು ದರ್ಶನ ಪಡೆಯಬೇಕು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA