ರೈಲ್ವೆ ಹಳಿಗಳ ಪಕ್ಕದಲ್ಲಿ ಅಲ್ಲಲ್ಲಿ ಕಂಡುಬರುವ ಅಲ್ಯೂಮಿನಿಯಂ ಬಾಕ್ಸ್ ಅನ್ನು ಆಕ್ಸಲ್ ಕೌಂಟರ್ ಬಾಕ್ಸ್ ಎಂದು ಕರೆಯುತ್ತಾರೆ. ಈ ಅಲ್ಯೂಮಿನಿಯಂ ಬಾಕ್ಸ್ ರೈಲಿನ ಕೋಚ್ ಗಳ ಸಂಖ್ಯೆಯನ್ನು ಎಣಿಸುತ್ತದೆ.
ಹಾಗೆಯೇ ರೈಲು ಯಾವ ದಿಕ್ಕಿನಲ್ಲಿ ಚಲಿಸುತ್ತದೆ? ಅದು ಎಷ್ಟು ವೇಗವಾಗಿ ಚಲಿಸುತ್ತಿದೆ? ಮುಂತಾದ ವಿವರಗಳನ್ನು ಮೌಲ್ಯಮಾಪನ ಮಾಡುತ್ತದೆ. ಅಪಘಾತಗಳನ್ನು ತಡೆಗಟ್ಟಲು ಈ ಆಕ್ಸಲ್ ಕೌಂಟರ್ ಬಾಕ್ಸ್ ಗಳನ್ನು ಬಳಸಲಾಗುತ್ತದೆ.
ಈ ಪೆಟ್ಟಿಗೆಗಳು ಪ್ರತಿ ಮೂರರಿಂದ ಐದು ಕಿ.ಮೀ. ಅಂತರದಲ್ಲಿ ಸ್ಥಾಪನೆಗೊಂಡಿರುತ್ತವೆ. ಈ ಪೆಟ್ಟಿಗೆಗಳು ರೈಲ್ವೆ ಹಳಿಗಳಿಗೆ ಸಂಪರ್ಕ ಹೊಂದಿವೆ.