ಡಾಕ್ಟರ್ ಧನ್ಯತಾ ಕೈ ಹಿಡಿಯೋದಕ್ಕೆ ಸಜ್ಜಾಗಿರುವ ಧನಂಜಯ ಇಂದು ಆರತಕ್ಷತೆಯ ಅಂಗಳದಲ್ಲಿ ಸಂಭ್ರಮಿಸಲಿದ್ದಾರೆ. ಇದಕ್ಕೂ ಮುನ್ನ ಹಳದಿ ಶಾಸ್ತ್ರ ಸಂಭ್ರಮ ಮನೆ ಮಾಡಿತು.
ಡಾಲಿ ಧನಂಜಯ ಮದುವೆಗೆ ಮೈಸೂರಲ್ಲಿ ಸಿದ್ಧತೆ ಜೋರಾಗಿ ನಡೆಯುತ್ತಿದೆ. ಮೈಸೂರಿನಲ್ಲಿ ನಡೆದ ಹಳದಿ ಸಮಾರಂಭದಲ್ಲಿ ಕುಟುಂಬಸ್ಥರು ಹಾಗೂ ಗೆಳೆಯರು ಭಾಗಿಯಾಗಿದ್ದರು.
ಸಂಭ್ರಮದಿಂದ ನೆರವೇರಿದ ಹಳದಿ ಶಾಸ್ತ್ರದಲ್ಲಿ ಡಾಲಿ ಧನಂಜಯ ಮತ್ತು ಧನ್ಯತಾ ಹೊಸ ಬದುಕಿಗೆ ಹೆಜ್ಜೆ ಇಟ್ಟಿದ್ದಾರೆ. ಹೊಸ ಜೋಡಿಗೆ ಸಪ್ತಮಿ ಗೌಡ, ಕಾರ್ತಿಕ್ ಗೌಡ, ಬಿ.ಸಿ. ಪಾಟೀಲ್ ಸೇರಿದಂತೆ ಆಪ್ತಬಳಗ ಶುಭ ಹಾರೈಸಿತು.
ಮೈಸೂರು ವಸ್ತು ಸಂಗ್ರಹಾಲಯ ಮೈದಾನದಲ್ಲಿಂದು ಡಾಲಿ ಧನಂಜಯ ಮತ್ತು ಧನ್ಯತಾ ಆರತಕ್ಷತೆ ನಡೆಯಲಿದೆ. ಮೊದಲಿಗೆ ಬೆಳಗ್ಗೆ 10 ಗಂಟೆಗೆ ಮದುವೆ ಸಿದ್ಧತೆ ಬಗ್ಗೆ ಮಾಹಿತಿ ನೀಡಲಿದ್ದಾರೆ. ಬಹುಕಾಲದ ಗೆಳತಿ ಜೊತೆಗೆ ಸಂಜೆ ಗ್ರ್ಯಾಂಡ್ ರಿಸೆಪ್ಶನ್ ನಡೆಯಲಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4