ದೇಶಿ ಷೇರುಪೇಟೆ ಸೂಚ್ಯಂಕ ಬುಧವಾರ ಲಾಭದೊಂದಿಗೆ ಆರಂಭಗೊಂಡಿದ್ದು, ಸೆನ್ಸೆಕ್ಸ್ 257.25 ಅಂಕ ಏರಿಕೆಯೊಂದಿಗೆ 66,336ಕ್ಕೆ ವಹಿವಾಟು ನಡೆಸುತ್ತಿದೆ. ನಿಫ್ಟಿ 79.80 ಅಂಕ ಏರಿಕೆಯೊಂದಿಗೆ 19,769.60 ರಲ್ಲಿ ವಹಿವಾಟು ನಡೆಸುತ್ತಿದೆ.
ಬೆಳಗಿನ ಅವಧಿಯಲ್ಲಿ ಎಚ್ ಡಿಎಫ್ ಸಿ ಬ್ಯಾಂಕ್, ಟಿಸಿಎಸ್, ಎಲ್ ಆಂಡ್ ಟಿ, ಎಸ್ ಬಿಐ, ಮಹೀಂದ್ರಾ ಮತ್ತು ಮಹೀಂದ್ರಾ ಟಾಪ್ ಗೇನರ್ ಎನಿಸಿಕೊಂಡಿವೆ. ಟಿಸಿಎಸ್, ಡೆಲ್ಟಾ ಕಾರ್ಪ್ & ಇತರ ಕಂಪನಿ ಈ ಹಣಕಾಸು ವರ್ಷದ 2ನೇ ತ್ರೈಮಾಸಿಕ ಗಳಿಕೆ ಪ್ರಕಟಿಸುವ ಸಾಧ್ಯತೆ ಇದೆ.


