nammatumakuru

    Subscribe to Updates

    Get the latest creative news from FooBar about art, design and business.

    What's Hot

    ಸಿದ್ದಗಂಗಾ ಮಠವು ಕರುಣಾ ಗಂಗೆಯಾಗಿ ಹರಿಯುತ್ತಿದೆ: ರಾಷ್ಟ್ರಪತಿ ದ್ರೌಪದಿ ಮುರ್ಮು

    April 1, 2026

    ತುಮಕೂರು: ಅಂತರಸನಹಳ್ಳಿ ಸೇತುವೆ ಬಳಿ ರಸ್ತೆಯಲ್ಲೇ ಹರಿಯುತ್ತಿದೆ ಕೊಳಚೆ ನೀರು; ವಾಹನ ಸವಾರರ ಪರದಾಟ

    April 1, 2026

    ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

    April 1, 2026
    Facebook Twitter Instagram
    ಟ್ರೆಂಡಿಂಗ್
    • ಸಿದ್ದಗಂಗಾ ಮಠವು ಕರುಣಾ ಗಂಗೆಯಾಗಿ ಹರಿಯುತ್ತಿದೆ: ರಾಷ್ಟ್ರಪತಿ ದ್ರೌಪದಿ ಮುರ್ಮು
    • ತುಮಕೂರು: ಅಂತರಸನಹಳ್ಳಿ ಸೇತುವೆ ಬಳಿ ರಸ್ತೆಯಲ್ಲೇ ಹರಿಯುತ್ತಿದೆ ಕೊಳಚೆ ನೀರು; ವಾಹನ ಸವಾರರ ಪರದಾಟ
    • ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು
    • ನಡೆಯುವ ದೇವರು, ತ್ರಿವಿಧ ದಾಸೋಹಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ 119ನೇ ಜನ್ಮದಿನದ ಹಾರ್ದಿಕ ಶುಭಾಶಯಗಳು
    • ಇಂದು ಸಿದ್ದಗಂಗಾ ಮಠದಲ್ಲಿ ಶಿವಕುಮಾರ ಸ್ವಾಮೀಜಿ 119ನೇ ಜನ್ಮದಿನೋತ್ಸವ ಸಂಭ್ರಮ: ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗಿ
    • ಕೊರಟಗೆರೆ: ಪರವಾನಗಿ ಭೂಮಾಪಕರ ಭದ್ರತೆ ಮತ್ತು ಸೌಲಭ್ಯಕ್ಕೆ ಒತ್ತಾಯಿಸಿ ಪ್ರತಿಭಟನೆ
    • ಎಚ್.ವೈ.ಮೇಟಿ ಆತ್ಮಕ್ಕೆ ಶಾಂತಿ ಸಿಗಬೇಕೆಂದರೆ ಅವರ ಮಗನನ್ನು ಗೆಲ್ಲಿಸಿ: ಉಮೇಶ್ ಮೇಟಿ ಪರ ಸಿಎಂ ಸಿದ್ದರಾಮಯ್ಯ ಅಬ್ಬರದ ಪ್ರಚಾರ
    • ಮಂಡ್ಯದಲ್ಲಿ ಟ್ರಂಪ್ ವಿರುದ್ಧ ಗುಡುಗಿದ ವಾಟಾಳ್ ನಾಗರಾಜ್!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಹಿಟ್ಲರ್ ರಾಜಕಾರಣ ಮಾಡಬೇಡಿ, ನಿಮ್ಮ ದರ್ಪಕ್ಕೆ, ಧಮ್ಕಿಗೆ ಯಾರು ಹೆದರುವುದಿಲ್ಲ: ಸಚಿವ ಕೆ.ಎನ್.ರಾಜಣ್ಣ ವಿರುದ್ಧ  ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ
    ಮಧುಗಿರಿ June 19, 2025

    ಹಿಟ್ಲರ್ ರಾಜಕಾರಣ ಮಾಡಬೇಡಿ, ನಿಮ್ಮ ದರ್ಪಕ್ಕೆ, ಧಮ್ಕಿಗೆ ಯಾರು ಹೆದರುವುದಿಲ್ಲ: ಸಚಿವ ಕೆ.ಎನ್.ರಾಜಣ್ಣ ವಿರುದ್ಧ  ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ

    By adminJune 19, 2025No Comments2 Mins Read
    nikhil kumaraswamy

    ತುಮಕೂರು, ಮಧುಗಿರಿ: ಸಚಿವ ರಾಜಣ್ಣ ಅವರೇ ನೀವೂ ಹಿರಿಯರು ಗೌರವವಿದೆ, ನಿಮ್ಮ ಹಿರಿತನಕ್ಕೆ ನಾನು ಬೆಲೆ ಕೊಡುತ್ತೇನೆ. ಆದರೆ ಹಿಟ್ಲರ್ ಕಾಲದ ರಾಜಕಾರಣ ಮಾಡಬೇಡಿ, ಇಲ್ಲಿ ಯಾರು ಕೂಡಾ ನಿಮ್ಮ ದರ್ಪಕ್ಕೆ, ಧಮ್ಕಿಗೆ, ಟಾರ್ಗೆಟ್ ರಾಜಕಾರಣಕ್ಕೆ ಕೈ ಕಟ್ಟಿಕೊಂಡು ಕೂರಲ್ಲ ರಾಜಣ್ಣ ವಿರುದ್ಧ  ನಿಖಿಲ್ ಕುಮಾರಸ್ವಾಮಿ  ವಾಗ್ದಾಳಿ ನಡೆಸಿದರು

    ತುಮಕೂರಿನ ಮಧುಗಿರಿಯಲ್ಲಿ ಆಯೋಜಿಸಲಾಗಿದ್ದ ಮೂರನೇ ದಿನದ ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಸಭೆಯನ್ನ ಉದ್ದೇಶಿಸಿ ಮಾತನಾಡಿದರು.


    Provided by
    Provided by

    ತಾಲ್ಲೂಕಿನಲ್ಲಿ ಟಾರ್ಗೆಟ್ ರಾಜಕಾರಣ ಮಾಡುತ್ತಿದ್ದಾರೆ. ಕೃಷಿ ಇಲಾಖೆಯಲ್ಲಿ ಡಿ ಗ್ರೂಪ್ ನೌಕರ ನರಸಿಂಹಮೂರ್ತಿ ಜೆಡಿಎಸ್ ಪಕ್ಷದ ಅಭಿಮಾನಿಯಾಗಿದ್ದು ತಪ್ಪಾ.? ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡ ಅನ್ನೋ ಕಾರಣಕ್ಕೆ ಅಮಾಯಕ ನನ್ನ ಟಾರ್ಗೆಟ್ ಮಾಡಿ ಬಲಿಪಶು ಮಾಡಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಆ ಅಭಿಮಾನಿ ಪಕ್ಷದ ಮೇಲೆ ಅಭಿಮಾನ ಇಡುವುದು ತಪ್ಪಾ.? ಅಂತಹ ಮುಗ್ಧ ವ್ಯಕ್ತಿಯ ಮೇಲೆ ಟಾರ್ಗೆಟ್ ಮಾಡಿ ಕಿತ್ತು ಬಿಸಾಕಿದ್ದಾರೆ. ಇಲ್ಲಿರುವ ಶಾಸಕರು ಹಿರಿಯರಿದ್ದಾರೆ. ಅವರು ಹಿರಿಯ ತನಕ್ಕೆ ನಾನು ಬೆಲೆ ಕೊಡುತ್ತೇನೆ. ಈ ರೀತಿ ದಬ್ಬಾಳಿಕೆ ದೌರ್ಜನ್ಯ, ಅಹಂಕಾರ ಎಷ್ಟು ದಿನ ಮಾಡ್ತೀರಿ ಎಂದು ಕಿಡಿಕಾರಿದರು.

    ಪ್ರಜಾಪ್ರಭುತ್ವದ ಚುನಾವಣೆಯಲ್ಲಿ ಎಂತ ಬಲಿಷ್ಠ ನಾಯಕರನ್ನು ಸೋಲಿಸುವ ಹಾಗೂ ಉಲ್ಟಾ ಸೀದಾ ಮಾಡುವ ಶಕ್ತಿ, ಸಾಮರ್ಥ್ಯ ತಾಲ್ಲೂಕಿನ ಜನತೆಗೆ ಇದೆ. ಅಧಿಕಾರ ಶಾಶ್ವತ ಅಲ್ಲ ಕಾಲ ಚಕ್ರ ಬದಲಾಗುತ್ತೆ ಎಂದು ಹೀಗೆ ಇರುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

    2008ರಲ್ಲಿ ಅನಿತಾ ಕುಮಾರಸ್ವಾಮಿ ಅವರು ಮಧುಗಿರಿ ಶಾಸಕರಾಗಿದ್ದಾಗ ಕ್ಷೇತ್ರದಲ್ಲಿ ಯಾವುದೇ ಸಂಘರ್ಷಕ್ಕೆ ಎಡೆ ಮಾಡಿಕೊಳ್ಳದೆ ಆರೋಗ್ಯಕರವಾಗಿ ಅಧಿಕಾರ ನಡೆಸಿದರು. ಆದರೆ ಮಧುಗಿರಿಗೆ ಕ್ಷೇತ್ರದಲ್ಲಿ ಈಗ ಪರಿಸ್ಥಿತಿ ಏನಾಗಿದೆ ಎಂದರು.

    ಮಾಜಿ ಶಾಸಕ ವೀರಭದ್ರಯ್ಯ ಅವರು ಮೂರು ಬಾರಿ ಚುನಾವಣೆಯಲ್ಲಿ ಒಂದು ಬಾರೀ ಗೆದ್ದಿದ್ದಾರೆ. ಆದರೆ ರಾಜಕೀಯ ಷಡ್ಯಂತರದಲ್ಲಿ ನನ್ನ ಬಲಿಪಶು ಮಾಡಿದ್ದಾರೆ. ನಾನು ಸೋತಿದೀನಿ ಅನ್ನೋ ಕಾರಣಕ್ಕೆ ಮನೆಯಲ್ಲಿ ಕೂತ್ತಿಲ್ಲ, ಪಕ್ಷ ಸಂಘಟನೆ ಮಾಡ್ಬೇಕು ಅಂತ ರಾಜ್ಯ ಪ್ರವಾಸ ಮಾಡುತ್ತಿದ್ದೇನೆ ಎಂದರು.

    ದಯವಿಟ್ಟು ಛಲ ಕಳೆದುಕೊಳ್ಳಬೇಡಿ, ಈ ಪಕ್ಷವನ್ನ ಕಟ್ಟಿ ಬೆಳೆಸಿದಂತಹ ನಿಷ್ಠಾವಂತ ಕಾರ್ಯಕರ್ತರ ಪ್ರಶ್ನೆ ಇದು. ಅವರಿಗೆ ನಾವು ರಕ್ಷಣೆ ಕೊಡಬೇಕು. ಅವರ  ಬೆನ್ನೆಲುಬಾಗಿ ನಿಲ್ಲಬೇಕು. ಏನು ತಪ್ಪೇ ಮಾಡದಿರುವ ಅಮಾಯಕರ ಮೇಲೆ ಈ ರೀತಿ ದೌರ್ಜನ್ಯ ಆದಂತ ಸಂದರ್ಭದಲ್ಲಿ ನಾವು ನಿಮ್ಮ ಜೊತೆಗೆ ಇದ್ದೇವೆ ಎಂದು ಧೈರ್ಯ ತುಂಬಿದರು.

    ಯಾವುದೇ ಕಾರಣಕ್ಕೂ ಕಾರ್ಯಕರ್ತರನ್ನ ಬಿಟ್ಟುಕೊಡುವ ಪ್ರಶ್ನೆ ಇಲ್ಲ. ನೀವು ಯಾರು ಕೂಡ ಆತಂಕಕ್ಕೆ ಒಳಗಾಗಬೇಡಿ ನಾನಿದ್ದೇನೆ, ಪಕ್ಷ ಇದೆ ನಾನು ರಾಜ್ಯ ಪ್ರವಾಸ ಮಾಡುತ್ತಿರುವ ಉದ್ದೇಶವೇ ನಿಮ್ಮ ಜೊತೆ ನಾನಿದ್ದೇನೆ ಎಂದು ತಿಳಿಸುವುದಕ್ಕೆ ನಿಮ್ಮ ಸಂಬಂಧ ಪ್ರೀತಿ ಸಹಕಾರ ನನ್ನ ಮೇಲೆ ಇರಲಿ ಎಂದು ಮನವಿ ಮಾಡಿದರು.

    ಈ ಸಂದರ್ಭದಲ್ಲಿ ಮಾಜಿ ವಿಧಾನಪರಿಷತ್ ಸದಸ್ಯರಾದ ತಿಪ್ಪೇಸ್ವಾಮಿ, ಮಾಜಿ ಶಾಸಕ ವೀರಭದ್ರಪ್ಪ, ತಿಮ್ಮರಾಯಪ್ಪ , ಜಿಲ್ಲಾಧ್ಯಕ್ಷರಾದ ಆರ್.ಸಿ ಆಂಜಿನಪ್ಪ, ತಾಲ್ಲೂಕು ಅಧ್ಯಕ್ಷರಾದ ಬಸವರಾಜ್ , ಮುಖಂಡರಾದ ಗೋವಿಂದರಾಜ್ , ಕೊಂಡವಾಡಿ ಚಂದ್ರಶೇಖರ್ ಸೇರಿದಂತೆ ಪ್ರಮುಖ ಮುಖಂಡರು ಹಾಗೂ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW

    admin
    • Website

    Related Posts

    ಪವಿತ್ರ ರಂಜಾನ್ ಹಬ್ಬ ಸಹೋದರತೆಯ ಸಂಕೇತ: ಶಾಸಕ ಕೆ.ಎನ್.ರಾಜಣ್ಣ

    March 22, 2026

    ಮಧುಗಿರಿ: ಒಳ ಮೀಸಲಾತಿ ಅನ್ವಯ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಆಗ್ರಹಿಸಿ ಪ್ರತಿಭಟನೆ

    March 12, 2026

    ಮಧುಗಿರಿ: ಅಪ್ರಾಪ್ತೆಯ ಮದುವೆಗೆ ಬ್ರೇಕ್: ಪೊಲೀಸರು ಬರುವಷ್ಟರಲ್ಲಿ ವಧು-ವರ ಎಸ್ಕೇಪ್!

    March 10, 2026

    Comments are closed.

    Our Picks

    ವರ್ಷಾಂತ್ಯಕ್ಕೆ ಮೋದಿ ಆಡಳಿತ ಅಂತ್ಯ: ಅರವಿಂದ ಕೇಜ್ರಿವಾಲ್ ಭವಿಷ್ಯ

    March 24, 2026

    ದಾಖಲೆ ಬರೆದ ನರೇಂದ್ರ ಮೋದಿ: ಮುಖ್ಯಮಂತ್ರಿ, ಪ್ರಧಾನಿಯಾಗಿ ದೀರ್ಘಾವಧಿ ಆಡಳಿತ ನಡೆಸಿದ ನಾಯಕ

    March 23, 2026

    ದೇವೇಗೌಡರು ಹಾಗೂ ಕುಮಾರಸ್ವಾಮಿಯವರಿಗೆ ವಿಶಾಲ ಹೃದಯವಿರಲಿಲ್ಲ: ಡಿ.ಕೆ.ಶಿವಕುಮಾರ್ ವಾಗ್ದಾಳಿ

    March 20, 2026

    ನಮ್ಮೊಂದಿಗೆ ಪ್ರೇಮ, ಆದ್ರೆ ಮದುವೆಯಾಗಿದ್ದು ಮೋದಿಯವರನ್ನು: ದೇವೇಗೌಡರ ಕಾಲೆಳೆದ ಮಲ್ಲಿಕಾರ್ಜುನ ಖರ್ಗೆ

    March 18, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಸಿದ್ದಗಂಗಾ ಮಠವು ಕರುಣಾ ಗಂಗೆಯಾಗಿ ಹರಿಯುತ್ತಿದೆ: ರಾಷ್ಟ್ರಪತಿ ದ್ರೌಪದಿ ಮುರ್ಮು

    April 1, 2026

    ನಮ್ಮ ತುಮಕೂರು: ಶ್ರೀ ಶಿವಕುಮಾರ್ ಸ್ವಾಮೀಜಿಯವರು ಕೇವಲ ಒಬ್ಬ ಸಂತನಲ್ಲ, ಬದಲಾಗಿ ನಮ್ಮ ರಾಷ್ಟ್ರದ ಆತ್ಮಕ್ಕೆ ಸ್ವರೂಪ ನೀಡಿದ ಮಹಾನ್…

    ತುಮಕೂರು: ಅಂತರಸನಹಳ್ಳಿ ಸೇತುವೆ ಬಳಿ ರಸ್ತೆಯಲ್ಲೇ ಹರಿಯುತ್ತಿದೆ ಕೊಳಚೆ ನೀರು; ವಾಹನ ಸವಾರರ ಪರದಾಟ

    April 1, 2026

    ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

    April 1, 2026

    ನಡೆಯುವ ದೇವರು, ತ್ರಿವಿಧ ದಾಸೋಹಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ 119ನೇ ಜನ್ಮದಿನದ ಹಾರ್ದಿಕ ಶುಭಾಶಯಗಳು

    April 1, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.