ಹುಬ್ಬಳ್ಳಿ: PFI, SDPI ಜೊತೆ ಬಜರಂಗದಳ, ಆರ್ಎಸ್ಎಸ್ ಹೋಲಿಸಿ ಅನಗತ್ಯವಾಗಿ ಮೈಮೇಲೆ ಸಮಸ್ಯೆ ಎಳೆದುಕೊಳ್ಳಬೇಡಿ ಎಂದು ಹುಬ್ಬಳ್ಳಿ ಧಾರವಾಡ ಕೇಂದ್ರ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಹೇಳಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆಗೆ ವಿರುದ್ಧ ಶಾಸಕರು ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕ ರಾಜ್ಯದ ಜನತೆ ನಿಮಗೆ ಬಹುಮತ ಕೊಟ್ಟಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನೀವು ನೀಡಿರುವ ಗ್ಯಾರಂಟಿ ಬಗ್ಗೆ ಮಾತಾಡಿ. 10 ಕೆಜಿ ಅಥವಾ 15 ಕೆಜಿ ಅಕ್ಕಿ ಕೊಡುತ್ತೀರೋ, ವಿದ್ಯುತ್ ಕೊಡುತ್ತೀರೋ ಹೇಳಿ. ಗ್ಯಾರಂಟಿ ಜಾರಿ ಮಾಡದೆ ವಿಷಯಾಂತರ ಮಾಡಲು ಪ್ರಯತ್ನಿಸಬೇಡಿ.
ಬಜರಂಗದಳ ನಿಷೇಧಿಸುತ್ತೇವೆ ಅನ್ನೋದು ಸರಿಯಲ್ಲ. ರಾಜ್ಯದ ಜನ ನಿಮಗೆ ನೀಡಿರುವ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಿ ಎಂದು ತರಾಟೆಗೆ ತೆಗೆದುಕೊಂಡರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


