ತುಮಕೂರು: “ದಾಸ್ಯದಲ್ಲಿ ಹುಟ್ಟಿ ದಾಸ್ಯದಲ್ಲಿ ಜನ ಸಾಯುತ್ತಿದ್ದ ಕಾಲ ಹಿಂದಿತ್ತು. ನಾವೆಲ್ಲರೂ ಭಾಗ್ಯವಂತರು ಇಂದು ಪ್ರಜಾತಂತ್ರ, ಗಣರಾಜ್ಯ, ಜನಗಳಿಂದ, ಜನಗಳಿಗಾಗಿ, ಜನಗಳಿಗೋಸ್ಕರ ನಡೆಯುವ ಒಂದು ಆಡಳಿತ. ನಾವೇ ಆಯ್ಕೆ ಮಾಡಿರುವ ಪ್ರತಿನಿಧಿಗಳು. ಹಾಗಾಗಿ ಬಹಳ ಹೆಮ್ಮೆಯಿಂದ ಗಣರಾಜ್ಯೋತ್ಸವವನ್ನು ಆಚರಿಸಬೇಕು ಎಂದು ಸರ್ವೋದಯ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಪ್ರೊ. ರವಿವರ್ಮ ಕುಮಾರ್ ಹೇಳಿದರು.
ಸರ್ವೋದಯ ಶಿಕ್ಷಣ ಸಂಸ್ಥೆಯ ಶಾಲಾ ಕಾಲೇಜುಗಳ ವತಿಯಿಂದ ಆಚರಿಸಲಾದ ಗಣರಾಜ್ಯೋತ್ಸವದ ಸಮಾರಂಭದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ, ಗೌರವ ವಂದನೆಯನ್ನು ಸ್ವೀಕರಿಸಿ ಮಾತನಾಡಿದ ಅವರು, ದಾಸ್ಯದಲ್ಲಿ ಹುಟ್ಟಿ ದಾಸ್ಯದಲ್ಲಿ ಜನ ಸಾಯುತ್ತಿದ್ದ ಕಾಲ ಹಿಂದಿತ್ತು. ನಾವೆಲ್ಲರೂ ಭಾಗ್ಯವಂತರು ಇಂದು ಪ್ರಜಾತಂತ್ರ, ಗಣರಾಜ್ಯ, ಜನಗಳಿಂದ, ಜನಗಳಿಗಾಗಿ, ಜನಗಳಿಗೋಸ್ಕರ ನಡೆಯುವ ಒಂದು ಆಡಳಿತ. ನಾವೇ ಆಯ್ಕೆ ಮಾಡಿರುವ ಪ್ರತಿನಿಧಿಗಳು. ಹಾಗಾಗಿ ಬಹಳ ಹೆಮ್ಮೆಯಿಂದ ಗಣರಾಜ್ಯೋತ್ಸವವನ್ನು ಆಚರಿಸಬೇಕು. ಹಾಗೆಯೇ ನೀವು ಮುಂದೆ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವಾಗ ಹಣಕ್ಕೆ, ಜಾತಿಗೆ, ಧರ್ಮಕ್ಕೆ ನಿಮ್ಮ ಮೌಲ್ಯಯುತವಾದ ಮತಗಳನ್ನು ಮಾರಿಕೊಳ್ಳಬೇಡಿ. ಕೈ ಬಾಯಿ ಶುದ್ಧವಾಗಿರಿಸಿಕೊಂಡು, ಆತ್ಮ ಸಾಕ್ಷಿಗೆ ಅನುಗುಣವಾಗಿ, ಭ್ರಷ್ಟಾನಿಗಿರದ ಪ್ರಜಾನಾಯಕರನ್ನು ಆಯ್ಕೆ ಮಾಡಿ. ಗಣರಾಜ್ಯೋತ್ಸವದ ಪವಿತ್ರತೆಯನ್ನು ಕಾಪಾಡಿಕೊಳ್ಳಿ ಎಂದು ಮಕ್ಕಳಿಗೆ ಕಿವಿಮಾತನ್ನು ಹೇಳಿದರು.
ಕಲಿಕೆಯ ದಿನಗಳಲ್ಲಿ ಸ್ಕೌಟ್ ನಲ್ಲಿ ಭಾಗವಹಿಸಿದ್ದನ್ನು ನೆನೆಯುತ್ತಾ, ಉತ್ತಮ ವಕೀಲರಾಗಿರುವುದಕ್ಕೆ ನಮ್ಮ ಸಂಸ್ಥೆಯ ಶಿಕ್ಷಕರೇ ಕಾರಣ ನೀವೂ ಇದರ ಸದ್ಬಳಕೆಯನ್ನು ಮಾಡಿಕೊಳ್ಳಿ. ಇದು ನನ್ನ ಸಾರ್ಥಕದ ಕ್ಷಣ, ಸೌಭಾಗ್ಯದ ಕ್ಷಣ, ನಾನು ಕಲಿತ ಶಾಲಾ ವೇದಿಕೆಯಲ್ಲಿ ಮಾತನಾಡುತ್ತಿರುವುದಕ್ಕೆ ಎಂದು ಹೆಮ್ಮೆಯಿಂದ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು.
ನಂತರ ವೇದಿಕೆಯಲ್ಲಿ ಅತಿಥಿಗಳಿಗೆ ಪುರಸ್ಕರಿಸಲಾಯಿತು. ಉತ್ತಮ ಪಥಸಂಚಲನ ಮಾಡಿರುವ ತಂಡಗಳಿಗೆ ಪ್ರಶಸ್ತಿ ನೀಡಲಾಯಿತು. ಕ್ರೀಡಾಕೂಟಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿ ರಾಷ್ಟ್ರಮಟ್ಟದವರೆಗೆ ಭಾಗವಹಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಗೌರವಾನ್ವಿತ ಜಿ.ಸೀತಾರಾಮ್ ರವರು ವಹಿಸಿದ್ದರು. ಸರ್ವೋದಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಟಿ.ಜಿ.ಜಮುನಾರಾಜು ಸ್ವಾಗತಿಸಿದರು. ಪದವಿ ಕಾಲೇಜಿನ ಪ್ರಾಂಶುಪಾಲರಾದ ಹೆಚ್.ಆರ್.ಕಮಲಾ ಗಣ್ಯರನ್ನು ವಂದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಜಿ.ಎಸ್.ಶ್ರೀನಿವಾಸಮೂರ್ತಿ ನಡೆಸಿಕೊಟ್ಟರು.
ಸಂಸ್ಥೆಯ ಗೌರವ ಅಧ್ಯಕ್ಷರಾದ ಜಿ ಸೀತಾರಾಮ್, ಕಾರ್ಯದರ್ಶಿಗಳಾದ ಕೆ.ವಿ.ಸುಬ್ಬರಾವ್, ಜಂಟಿ ಕಾರ್ಯದರ್ಶಿಗಳಾದ ಬಿ.ಹೆಚ್.ವಾರದರಾಜ ಪೈ, ಆಡಳಿತ ಮಂಡಳಿಯ ಸದಸ್ಯರುಗಳಾದ ಸಿ.ವಿ.ಕೇಶವಮೂರ್ತಿ, ಎಸ್.ಆರ್.ಕೃಷ್ಣನ್, ಹರಿನಾರಾಯಣ, ಚೇತನ ಮಂದಿರದ ಪ್ರಾಂಶುಪಾಲರಾದ ಕೆ.ನಾಗರಾಜ ರಾವ್ ರವರು, ಕ್ಯಾಪ್ಟನ್ ಪ್ರದೀಪ್, ಹಾಗೂ ಸರ್ವೋದಯ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿರುವ ಎಲ್ಲಾ ಶಾಲಾ ಕಾಲೇಜುಗಳ ಮುಖ್ಯಸ್ಥರುಗಳು ವೇದಿಕೆಯಲ್ಲಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


