ತುರುವೇಕೆರೆ: ಡಿಸೆಂಬರ್ 6 ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಹಾಪರಿನಿಬ್ಬಾಣ ದಿನದಂದು ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ನಡೆಸುವ ಮೂಲಕ ನಮನ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ದಂಡಿನ ಶಿವರ ಕುಮಾರ್ ಮತ್ತು ಮಧು ಸಂಗಡಿಗರು ಭಾಗ್ಯವಿದಾತ ಗೀತೆ ಹಾಡಿದರು. ನಂತರ ಮಾತನಾಡಿದ ಡಿ.ಎಸ್.ಎಸ್. ತಾಲ್ಲೂಕು ಸಂಚಾಲಕ ದಂಡಿನ ಶಿವರ ಕುಮಾರ್ ಮಾತನಾಡಿ, ಈ ದಿನ ವಿಶ್ವಜ್ಞಾನಿ ಅಂಬೇಡ್ಕರರು ನಮ್ಮನ್ನೆಲ್ಲ ಅಗಲಿದಂತ ದಿನವಾಗಿದೆ. ಆದರೆ ಅಂಬೇಡ್ಕರ್ ಅವರು ಎಂದಿಗೂ ಜೀವಂತವಾಗಿ ನಮ್ಮೊಂದಿಗೆ ಸದಾ ಇದ್ದಾರೆ ಎಂದರು.
ಬೀಚನಹಳ್ಳಿ ರಾಮಣ್ಣ ಕುಣಿಕೆನಹಳ್ಳಿ ಜಗದೀಶ್, ತೋವಿನಕೆರೆ ರಂಗಸ್ವಾಮಿ, ಸಿದ್ದಾಪುರ ಮಧು, ಡೊಂಕಿಹಳ್ಳಿ ರಾಮಣ್ಣ, ಗೋವಿದರಾಜು, ಮಂಜು ಗ್ರಾಮ ಪಂಚಾಯ್ತಿ ಸದಸ್ಯರಾದ ಸುರೇಶ್, ಆದಿತ್ಯವಾಣಿ ಪತ್ರಿಕೆಯ ವರದಿಗಾರರಾದ ಮಂಜುಪುರ ರಾಮಚಂದ್ರು, ಪೌರ ಕಾರ್ಮಿಕರಾದ ಜಗದೀಶ್ ರಾಯ ಬಡಾವಣೆ, ಫ್ರೂಟ್ ಶಿವಣ್ಣ, ಎ.ಪಿ.ಎಂ.ಸಿ.ಸದಸ್ಯರಾದ ನರಸಿಂಹ, ಮಲ್ಲೂರು ತಿಮ್ಮೇಶ್ ಮತ್ತಿತರರು ಭಾಗವಹಿಸಿದ್ದರು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700