ತುಮಕೂರು: 4 ಕರ್ನಾಟಕ ಬೆಟಾಲಿಯನ್ ಎನ್ ಸಿಸಿಯಲ್ಲಿ ನಡೆದ ಪಿಪ್ಪಿಂಗ್ ಕಾರ್ಯಕ್ರಮದಲ್ಲಿ ಅಸೋಸಿಯೆಟ್ ಎನ್ ಸಿಸಿ ಆಫಿಸರ್ ಗಳಾದ ತುಮಕೂರು ವಿವಿ ವಿಜ್ಞಾನ ಕಾಲೇಜಿನ ಡಾ.ಅರುಣ್ ಕುಮಾರ್ ಡಿ.ಬಿ. ಅವರಿಗೆ ಕ್ಯಾಪ್ಟನ್ ರ‍್ಯಾಂಕ್ ನಿಂದ ಮೇಜರ್ ರ‍್ಯಾಂಕ್ ನ್ನು ಹಾಗೂ ಶ್ರೀನಿವಾಸಮೂರ್ತಿ ಎಲ್. ರವರಿಗೆ ಲೆಫ್ಟಿನೆಂಟ್ ರ‍್ಯಾಂಕನ್ನು ಕಮ್ಯಾಂಡಿಂಗ್ ಆಫಿಸರ್ ಕರ್ನಲ್ ಗುರ್ಮಿತ್ ಎಸ್. ಗುಜ್ರಾಲ್ ರವರು ಪ್ರಧಾನ ಮಾಡಿದರು.
ಈ ಸಂದರ್ಭದಲ್ಲಿ ಆಸೋಸಿಯೇಟ್ ಆಫಿಸರ್ ಕರ್ನಲ್ ನರೇಂದ್ರ ಭಂಡಾರಿ, ಸುಭೇದರ್ ಮೇಜರ್ ದಿನೇಶ್ ಸಿಂಗ್, ತುಮಕೂರು ವಿವಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಶೇಟ್ ಪ್ರಕಾಶ್, ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಹೇಮಲತಾ, ಸುಭೇದಾರ್ ಯೋಗೀಶ್, ಜಿಸಿಐ ಭವ್ಯ, ತೇಜಸ್ವಿನಿ, ಮಂಜುಳ, ಡಾ.ನಿವೇದಿತ ದೇಸಾಯಿ, ದಿವ್ಯಶ್ರೀ ಎಲ್.ವಿ., ಪ್ರದೀಪ್ ಕುಮಾರ್, ತುಮಕೂರು ವಿವಿ ವಿಜ್ಞಾನ ಕಾಲೇಜಿನ ಹಾಗೂ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನ ಕೆಡೆಟ್ಸ್ ಗಳು ಉಪಸ್ಥಿತರಿದ್ದರು.
ವರದಿ: ನಂದೀಶ್ ನಾಯ್ಕ ಪಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4