ಸರಗೂರು: ಕೋರೆಗಾಂವ್ ಘಟನೆಯು ಮಹರ್ ಸೈನಿಕರ ಹೋರಾಟವನ್ನು ಸ್ಮರಿಸುತ್ತದೆ. ಇತಿಹಾಸದಲ್ಲಿ ಹುದುಗಿದ್ದ ಮಹರ್ ಸೈನಿಕರ ಚರಿತ್ರೆಯನ್ನು ಅಂಬೇಡ್ಕರ್ ಅವರು ಅಧ್ಯಯನ ನಡೆಸಿ ಮುನ್ನಲೆಗೆ ತಂದರು’ ಎಂದು ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ ಸ್ಮರಿಸಿದರು.
ತಾಲೂಕಿನ ಹಾದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾದನೂರು ಗ್ರಾಮದಲ್ಲಿ ಬುಧವಾರದಂದು ವಿಶ್ವ ಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಬಳಗವತಿಯಿಂದ ಬುಧವಾರ ದಂದು ಭೀಮಾ ಕೋರೆಗಾಂವ್ ವಿಜಯೋತ್ಸವ ವಿಜೃಂಭಣೆಯಿಂದ ನಡೆಸಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪೋಟೋ ಪುಷ್ಪಾರ್ಚನೆ ಸಲ್ಲಿಸಿ ನಂತರ ಮಾತನಾಡಿದರು.
ಪೇಶ್ವೆ ಸೈನ್ಯದ ವಿರುದ್ಧ ದಲಿತ ಮಹರ್ ಸೈನಿಕರ ಗೆಲುವನ್ನು ಈ ವಿಜಯೋತ್ಸವವು ಸ್ಮರಿಸುತ್ತದೆ. ಈ ಹೋರಾಟವು ಇಂದಿಗೂ ದಲಿತ ಸಮುದಾಯಕ್ಕೆ ಮಾದರಿಯಾಗಿದೆ. ಆತ್ಮವಿಶ್ವಾಸವನ್ನು ತುಂಬಲಿದೆ ಎಂದು ಹೇಳಿದರು.
ದೇಶದಲ್ಲಿ ಕೆಲವರು ಜ.1ರಂದು ಹೊಸ ವರ್ಷವಾಗಿ ಸಂಭ್ರಮಿಸುವರು. ನಾವು ಪೇಶ್ವೆಗಳ ವಿರುದ್ಧ ಮಹರ್ ಸೈನಿಕರು ಹೋರಾಟ ನಡೆಸಿ ವಿಜಯ ಸಾಧಿಸಿದ ದಿನವಾಗಿ ಆಚರಿಸುತ್ತೇವೆ’ ಎಂದು ಹೇಳಿದರು.
ದಲಿತ ಸಮುದಾಯವನ್ನು ಅವಮಾನಿಸಿದ ಪೇಶ್ವೆಗಳ ವಿರುದ್ಧ ಆತ್ಮಗೌರವಕ್ಕಾಗಿ ಹೋರಾಡಿದ ದಿನವೇ ಕೋರೆಗಾಂವ್ ವಿಜಯೋತ್ಸವದ ದಿನವಾಗಿದೆ. ಇತಿಹಾಸದಲ್ಲಿ ಮುಚ್ಚಿ ಹೋಗಿದ್ದ ಈ ವಿಚಾರವನ್ನು ಅಂಬೇಡ್ಕರ್ ಅವರು ಗುರುತಿಸಿದರು ಎಂದು ಹೇಳಿದರು.
ದಲಿತ ಮುಖಂಡ ಚಾ ನಂಜುಂಡಮೂರ್ತಿ ಮಾತನಾಡಿ, ಭೀಮ ಕೋರೆಗಾಂವ್ ವಿಜಯೋತ್ಸವ ದೇಶದಾದ್ಯಂತ ನಡೆಯುತ್ತಿರುವ ಸ್ಮರಣೆ. 1818ರಲ್ಲಿ ದಲಿತ ಮಹರ್ ಸೈನಿಕರ ವಿಜಯವನ್ನು ಇದು ಸ್ಮರಿಸುತ್ತದೆ. ಸಂವಿಧಾನ ರಚನೆಯಾಗಿ ಇಷ್ಟು ವರ್ಷಗಳು ಸಂದರೂ ಜಾತಿಯ ತಾರತಮ್ಯಗಳು ನಮ್ಮಲ್ಲಿ ತೊಲಗಿಲ್ಲ. ಮರ್ಯಾದೆಗೇಡು ಹತ್ಯೆಗಳು ನಡೆಯುತ್ತಲೇ ಇವೆ’ ಎಂದು ಬೇಸರ ವ್ಯಕ್ತಪಡಿಸಿದರು.
ವಿಶ್ವಜ್ಞಾನಿ ಡಾ ಬಿ ಆರ್ ಅಂಬೇಡ್ಕರ್ ಬಳಗ ಅಧ್ಯಕ್ಷ ಎಚ್ ಕೆ ಸಿದ್ದರಾಜು ಮಾತನಾಡಿ ಅಂಬೇಡ್ಕರ್ ಅವರ ಸಮಾನತೆಯ ಆಶಯಗಳು ಇಂದಿಗೂ ಈಡೇರಿಲ್ಲ. ಜಾತಿಯ ತಾರತಮ್ಯಗಳು ನಮ್ಮ ಸಮಾಜವನ್ನು ಬಾಧಿಸುತ್ತಿವೆ. ಅಸಮಾನತೆ, ಅಸ್ಪೃಶ್ಯತೆ, ಕಂದಾಚಾರ ಸೇರಿದಂತೆ ಸಾಮಾಜಿಕ ಪಿಡುಗಳು ದೇಶ ಮತ್ತು ಸಮಾಜದ ಅಭಿವೃದ್ಧಿಗೆ ಅಡ್ಡಿಯಾಗಿವೆ’ ಎಂದು ಹೇಳಿದರು.
ಗ್ರಾಮದ ಅಂಬೇಡ್ಕರ್ ಭವನದಿಂದ ಮೆರವಣಿಗೆ ನಡೆಸಿದ ಕಾರ್ಯಕರ್ತರು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಕೋರೆಗಾಂವ್ ವಿಜಯಸ್ಥಂಭಕ್ಕೆ ಪುಷ್ಪಾರ್ಚನೆ ಮಾಡಿದರು. ಮಹರ್ ರೆಜಿಮೆಂಟಿನ ಯೋಧರ ಹೋರಾಟವನ್ನು ಸ್ಮರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಶಿವರಾಜು, ರತ್ನಮ್ಮ ರಾಜೇಶ್, ಭಾಗ್ಯ ಕೆಂಪಸಿದ್ದ,ಅಧಿಕರ್ನಾಟಕ ಮಹಾಸಭಾ ಅಧ್ಯಕ್ಷ ಇಟ್ನ ರಾಜಣ್ಣ, ಭೀಮಾ ಆರ್ಮಿ ರಾಜ್ಯ ಅದ್ಯಕ್ಷ ಸರ್ವೇಶ್, ರಾಜ್ಯ ಉಪಾಧ್ಯಕ್ಷ ಕುಮಾರ್, ಜಿಲ್ಲಾ ಕಾರ್ಯದರ್ಶಿ ಮಹೇಶ್, ನಂಜನಗೂಡು ತಾಲ್ಲೂಕು ಅದ್ಯಕ್ಷ ನಿಂಗಯ್ಯ, ಪಿರಿಯಾಪಟ್ಟಣ ತಾಲೂಕು ಅಧ್ಯಕ್ಷ ಶೇಖರ್, ಗ್ರಾಮೀಣ ಮಹೇಶ್, ಮುಖಂಡರಾದ ಮಹಾದೇವಯ್ಯ, ಪುಟ್ಟಸ್ವಾಮಿ, ಶಿವಮೂರ್ತಿ, ಚಿದ್ದಾನಂದ, ಚಲುವರಾಜು, ಚಿಕ್ಕಸಿದ್ದಯ್ಯ,ಬಳಗ ಪದಾಧಿಕಾರಿಗಳು ಬಸವಣ್ಣ, ನಾಗೇಂದ್ರ, ಚಿಕ್ಕಣ್ಣ, ಪುಟ್ಟರಾಜು, ನಂಜುಂಡಿ, ನಾಗೇಂದ್ರ, ಮುನಿಯ್ಯ, ಕೆಂಪಸಿದ್ದ, ರವಿಕುಮಾರ್, ಚಿಕ್ಕಣ್ಣ, ಕುಮಾರ್, ಮಣಿಕಂಠ, ಮಹೇಶ್, ಲಕ್ಷಣ್, ಇನ್ನೂ ಮುಖಂಡರು ಸೇರಿದಂತೆ ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


