ಚಿಕ್ಕನಂದಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಗುದ್ದಲಿ ಪೂಜೆಯನ್ನು ಆದಿ ಕರ್ನಾಟಕ ಮಹಾಸಭಾ ಅಧ್ಯಕ್ಷರು ಹೆಚ್.ಸಿ.ನರಸಿಂಹಮೂರ್ತಿ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, “ಇವತ್ತಿನ ದಿನ ಪ್ರತಿಯೊಂದು ಹಳ್ಳಿಗಳಲ್ಲಿ ದೇವಸ್ಥಾನದ ಬದಲು ನಮ್ಮ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಮಾಡುತ್ತಿರುವುದು ಹೆಚ್ಚಾಗಿ ಕಾಣುತ್ತಿದ್ದೇವೆ. ಏಕೆಂದರೆ ನಾವು ಇವತ್ತು ಸಮಾನತೆಯಿಂದ ವಿದ್ಯೆಯನ್ನು ಕಲಿತು ಒಳ್ಳೆಯ ಹುದ್ದೆಯನ್ನು ಪಡೆದು ಸ್ವತಂತ್ರವಾಗಿ ಬದುಕುತ್ತಿದ್ದೇವೆ ಅಂದ್ರೆ ಅದಕ್ಕೆ ಸಂವಿಧಾನವೇ ಕಾರಣ ಎಂದರು.
ಸಂವಿಧಾನ ಕೊಟ್ಟ ಡಾ.ಬಿ.ಆರ್.ಅಂಬೇಡ್ಕರ್ ರವರ ಪುತ್ಥಳಿ ಮಾಡುತ್ತಿರುವುದು ನಮಗೆ ಹೆಮ್ಮೆಯ ವಿಚಾರ, ಚಿಕ್ಕನಂದಿ ಗ್ರಾಮದ ಅಂಬೇಡ್ಕರ್ ಪುತ್ಥಳಿಗೆ ನನ್ನ ಕೈಲಿ ಆದ ಸಹಾಯ ಮಾಡ್ತೀನಿ, ಇವತ್ತು ನಾವು ಸಮಾನತೆಯಿಂದ ಎಲ್ಲರಂತೆ ಬದುಕಬೇಕೆಂದರೆ ಅದೊಂದೇ ಅಸ್ತ್ರ. ವಿದ್ಯಾ, ನಿಮ್ಮ ಮಕ್ಕಳನ್ನ ಹೆಚ್ಚು ವಿದ್ಯಾವಂತರಾಗಿ ಮಾಡಿ, ಒಳ್ಳೆಯ ಹುದ್ದೆಗೆ ಹೋಗುವುದಕ್ಕೆ ಸಂಪೂರ್ಣ ಬೆಂಬಲ ಕೊಡಿ ಹಾಗೂ ಅಂಬೇಡ್ಕರ್ ಭವನಕ್ಕೆ ಅನುದಾನ ತರಿಸುವಲ್ಲಿ ಸಂಪೂರ್ಣ ಬೆಂಬಲ ಕೊಡುತ್ತೇನೆ ನಿಮ್ಮ ಗ್ರಾಮದ ಕಷ್ಟ ಸುಖಗಳಿಗೆ ಭಾಗಿಯಾಗುತ್ತೇನೆ ಎಂದು ಭರವಸೆ ನೀಡಿದರು.
ಪುರಸಭೆ ಸದಸ್ಯ ಪ್ರೇಮ್ ಸಾಗರ್ ಮಾತನಾಡಿ, ಇದು ಶಾಶ್ವತವಾಗಿ ಉಳಿಯುವಂತ ಕೆಲಸ ಹಾಗೂ ದಿನ ಬೆಳಗ್ಗೆ ಎದ್ದು ಬಂದು ಅಂಬೇಡ್ಕರ್ ಪ್ರತಿಮೆ ನೋಡುವುದರಿಂದ ಅವರ ಮಾರ್ಗದಲ್ಲಿ ನಾವೆಲ್ಲರೂ ಹೋಗುವುದಕ್ಕೆ ಒಂದು ಸೂಚಕವಾಗಿದೆ ಎಂದರು.
ಈ ಸಂದರ್ಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ಗೌರವ ಅಧ್ಯಕ್ಷ ಸಿದ್ದೇಶ್ ಪಿ., ಅಧ್ಯಕ್ಷ ಮಾದೇಶ್, ಉಪಾಧ್ಯಕ್ಷ ಸಿದ್ದೇಶ್ ಎಸ್., ಕಾರ್ಯದರ್ಶಿ ದೇವರಾಜು, ಸಂಘಟನಾ ಕಾರ್ಯದರ್ಶಿ ಯೋಗೇಶ್, ಮಹೇಶ್ ಎಮ್., ಅಂಗಡಿ ಮಂಜು, C.M. ಸಿದ್ದರಾಜು, ಸುರೇಶ್, ತಮ್ಮಯ್ಯ, ದೊಡ್ಡರಾಜು ಹಾಗೂ ಸಂಘದ ಎಲ್ಲಾ ಪದಾಧಿಕಾರಿಗಳು, ಗ್ರಾಮದ ಯಜಮಾನರುಗಳಾದ ದೇವಣ್ಣ, ಕುಮಾರ, ದೇವಣ್ಣ, ಟಿ.ಗಣೇಶ್ ಹಾಗೂ ಗ್ರಾಮಸ್ಥರು ಹಾಜರಿದ್ದರು.
ವರದಿ: ಮಲಾರ ಮಹದೇವಸ್ವಾಮಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


