ತುಮಕೂರು: ತುಮಕೂರು ಜಿಲ್ಲೆ ತಿಪಟೂರು ಪಟ್ಟಣದ ಮತಗಟ್ಟೆ ಸಂಖ್ಯೆ 82 ರಲ್ಲಿ ಕುದುರೆ ಏರಿ ಬಂದು ವೈದ್ಯರೊಬ್ಬರು ಮತದಾನ ಮಾಡಿದರು.

ಕುದುರೆ ಏರಿ ಬಂದು ಮತದಾರರ ಗಮನಸೆಳೆದ ಡಾ. ಶ್ರೀಧರ್, ಈ ಮಧ್ಯೆ ಮತದಾನ ಮಾಡಿ ಬಂದವರಿಗೆ ಉಚಿತ ಸಮೋಸ ಹಾಗೂ ಟೀ ವಿತರಣೆ ಮಾಡಿದರು. ಇವರು ಮತದಾರರಿಗೆ ವಿನೂತನ ರೀತಿಯಲ್ಲಿ ಅರಿವು ಮೂಡಿಸುತ್ತಿರುವ ವೈದ್ಯರಾಗಿದ್ದಾರೆ.
ಸತ್ಯಕುಮಾರ್ ಫೌಡೇಂಶನ್ ಮೂಲಕ ಸಮಾಜ ಸೇವೆ ಮಾಡುತ್ತಿರುವ ಡಾ. ಶ್ರೀಧರ್, ಆಸ್ಪತ್ರೆ, ಉಚಿತ ದಾಸೋಹ ಸೇರಿದಂತೆ ಹಲವಾರು ಸೇವೆ ಒದಗಿಸುತ್ತಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


