ತುಮಕೂರು: ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ(ರಿ) ತುಮಕೂರು ಇವರು ಅಕ್ಟೋಬರ್ 29 ರ ಬುಧವಾರ ಸಂಜೆ 6.30 ಗಂಟೆಗೆ ಡಾ.ಗುಬ್ಬಿವೀರಣ್ಣ ಕಲಾಕ್ಷೇತ್ರದಲ್ಲಿ ಸಾಹಿತಿ ಡಾ.ಚಂದ್ರಶೇಖರ ಪಾಟೀಲರ ಗೋಕರ್ಣದ ಗೌಡಶಾನಿ ರಂಗ ಪ್ರಯೋಗ ಹಮ್ಮಿಕೊಳ್ಳಲಾಗಿದೆ.
ಕಳೆದ 20 ವರ್ಷಗಳಿಂದ ಗ್ರಾಮೀಣ ಭಾಗದಲ್ಲಿ ಹೊಸ ನಾಟಕಗಳ ಪ್ರಯೋಗ ಹೊಸ ಕಲಾವಿದರಿಗೆ ತರಬೇತಿ ಮತ್ತು ನಾಟಕಗಳ ಪ್ರಯೋಗ, ನಾಟಕಗಳ ಕುರಿತ ಕಾರ್ಯಾಗಾರ, ವಿಚಾರ ಸಂಕಿರಣ ಹೀಗೆ ಹಲವು ಕಾರ್ಯಕ್ರಮಗಳ ಮೂಲಕ ರಂಗಭೂಮಿ ಉಳಿವಿಗೆ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ ನಿರಂತರವಾಗಿ ತೊಡಗಿಕೊಂಡಿದೆ. ಇದರ ಮುಂದುವರಿದ ಭಾಗವಾಗಿ ಅಕ್ಟೋಬರ್ 29ರ ಬುಧವಾರ ಗೋಕರ್ಣದ ಗೌಡಶಾನಿ ನಾಟಕದ ಪ್ರಯೋಗವನ್ನು ಕೌಡುಮಾರನಹಳ್ಳಿ ಕಾಂತರಾಜು ಅವರ ಬೆಳಕು ಮತ್ತು ರಂಗವಿನ್ಯಾಸ ಹಾಗು ಶಿವಕುಮಾರ್ ತಿಮ್ಮಲಾಪುರ ಅವರ ನಿರ್ದೇಶನದಲ್ಲಿ ಆಯೋಜಿಸಲಾಗಿದೆ.
ಗೋಕರ್ಣದ ಗೌಡಶಾನಿ ರಂಗಪ್ರಯೋಗದ ಪ್ರೇರಕ ಗಣ್ಯರಾಗಿ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕೆ.ಎಸ್.ಸಿದ್ದಲಿಂಗಪ್ಪ, ಹೆಣ್ಣೂರು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎನ್.ಅಕ್ಕಮ್ಮ, ಕವಿಗಳು ಮತ್ತು ಕನ್ನಡ ಅಧ್ಯಾಪಕರಾದ ಡಾ.ಶಿವಣ್ಣ ತಿಮ್ಮಲಾರ, ತುಮಕೂರು ಮಹಾನಗರಪಾಲಿಕೆ ಕಾರ್ಯಪಾಲಕ ಇಂಜಿನಿಯರ್ ವಿನಯ್ ಕುಮಾರ್‌ಬಿ.ಜಿ., ತುಮಕೂರು ವಿವಿ ರಾಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಂಶೋಧನಾರ್ಥಿ ರಾಹುಲ್. ಆರ್, ಅವರುಗಳು ಭಾಗವಹಿಸಲಿದ್ದಾರೆ.
ರಂಗದ ಮೇಲೆ ಡಿ.ಸಿ.ಕುಮಾರ್, ದೊಮ್ಮನಕುಪ್ಪೆ, ಶಶಿಧರ್ ಕಟ್ಟೆಮನೆ, ಸಾಗರ, ಬಾಲಾಜಿ ಜಿ., ತುಳಿಸಿದೇವಿ.ಪಿ.ಸಿ, ಶಾಂತ, ಕೆ.ಎಂ.ತೇಜಸ್ ಅವರುಗಳು ವಿವಿಧ ಪಾತ್ರಗಳಿಗೆ ಬಣ್ಣ ಹಚ್ಚಲಿದ್ದಾರೆ. ಗ್ರಾಮೀಣ ಕ್ರೀಡಾತ್ಮಕ ರಂಗ ತಂಡ ಆಯೋಜಿಸಿರುವ ಗೋಕರ್ಣದ ಗೌಡಶಾನಿ, ರಂಗ ಪ್ರಯೋಗವನ್ನು ಕಲಾವಿದರು, ಕಲಾ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಪ್ರೋತ್ಸಾಹಿಸಲು ಗ್ರಾಮೀಣ ಕ್ರಿಯಾತ್ಮಕ ರಂಗ ತಂಡದ ಶಿವಕುಮಾರ್ ತಿಮ್ಮಲಾಪುರ ಮನವಿ ಮಾಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC



