ಆರೋಗ್ಯ ಸಚಿವರಾಗಿ ಕಾರ್ಯನಿರ್ವಹಣೆ ಮಾಡಿದ್ದ ಡಾ.ಕೆ.ಸುಧಾಕರ್, ಚಿಕ್ಕಬಳ್ಳಾಪುರದಲ್ಲಿ ಮೆಡಿಕಲ್ ಕಾಲೇಜು ಕಟ್ಟಡ ಕಾಮಗಾರಿಯಲ್ಲಿ ಡೂಮ್ ಕಟ್ಟಲು 20 ಕೋಟಿ ರೂಪಾಯಿಗಳನ್ನು ವ್ಯಯಿಸಿದ್ದು, ಇದರಲ್ಲಿ ಅಕ್ರಮ ನಡೆದಿದೆ ಎಂಬ ಅನುಮಾನಗಳು ಮೂಡಿದೆ ಎಂದು ಶಾಸಕ ಪ್ರದೀಪ್ ಈಶ್ವರ್ ಆರೋಪಿಸಿದ್ದಾರೆ.
ಇಂದು ಸುಧಾಕರ್ ಅವರ ಕಾಲದಲ್ಲಿ ನಡೆದಿರುವ ಚಿಕ್ಕಬಳ್ಳಾಪುರ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್, ಸುಧಾಕರ್ ಅವರು ಕ್ಷೇತ್ರದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣ ಮಾಡಿಸಿದ್ದಾರೆ. ಅದರಲ್ಲಿ ಕಾಲೇಜಿನ ವಿನ್ಯಾಸಕ್ಕಾಗಿ ಡೂಮ್ ಕಟ್ಟಲು 20 ಕೋಟಿ ವೆಚ್ಚವಾಗಿದೆ ಎಂದು ತೋರಿಸಿದ್ದಾರೆ. ಡೂಮ್ ಕಟ್ಟಲು ಅಷ್ಟು ಹಣ ವೆಚ್ಚವಾಗುತ್ತಾ? ಇದರಲ್ಲಿ ಅವ್ಯವಹಾರ ನಡೆದಿರುವ ಸಾಧ್ಯಾಸಾಧ್ಯತೆ ಇದೆ ಎಂದು ಶಾಸಕ ಪ್ರದೀಪ್ ಈಶ್ವರ್ ಆರೋಪಿಸಿದ್ದಾರೆ.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ನನ್ಮ ವಿರುದ್ಧ ಪರಾಭವಗೊಂಡಿರುವ ಮಾಜಿ ಸಚಿವ ಡಾ.ಕೆ.ಸುಧಾಕರ್, ಕಾಂಗ್ರೆಸ್‌ನ ಕದ ತಟ್ಟುತ್ತಿದ್ದಾರೆ ಎಂದು, ಶಾಸಕ ಪ್ರದೀಪ್ ಈಶ್ವರ್, ಸುಧಾಕರ್ ಗೆ ಟಕ್ಕರ್ ಕೊಟ್ಟಿದ್ದಾರೆ.
ಮಾಧ್ಯಮಗಳ ಮುಂದೆ ಮಾತನಾಡಿದ ಪ್ರದೀಪ್ ಈಶ್ವರ್, ಸುಧಾಕರ್ ಅವರಿಗೆ ಸೋಲನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಈಗಾಗಲೇ ಸುಧಾಕರ್ ಮೂರ್ನಾಲ್ಕು ಮಂದಿ ಸ್ಥಳೀಯ ಕಾಂಗ್ರೆಸ್ ನ ನಾಯಕರ ಸಂಪರ್ಕ ಮಾಡಿಕೊಂಡು, ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ಸಂಪರ್ಕಕ್ಕೆ ಅವರು ಪ್ರಯತ್ನ ಮಾಡುತ್ತಿದ್ದಾರೆ. ಅದು ಸಾಧ್ಯವೇ ಇಲ್ಲ ಎಂದು ಸುಧಾಕರ್ ವಿರುದ್ಧ ಶಾಸಕ ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಪೆರೇಸಂದ್ರ ಸುಧಾಕರ್ ಅವರ ಹುಟ್ಟೂರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ, ಡಾ. ಕೆ. ಸುಧಾಕರ್ ಅವರಿಗೆ ಸಿಕ್ಕಿದ್ದು 600 ಮತಗಳು. ನಾನು ಕೂಡ ಅದೇ ಊರಿನವನು. ನನಗೆ ಸಿಕ್ಕಿದ್ದು 1600 ಮತಗಳು. ಅಲ್ಲಿಗೆ ಏನು ಅರ್ಥ ಇದು? ಈ ಬಾರಿ ಅವರ ಹುಟ್ಟೂರಿನ ಜನರೇ ಸುಧಾಕರ್ ಅವರನ್ನು ವಿರೋಧಿಸಿದ್ದಾರೆ ಎಂದು ಅರ್ಥ ಅಲ್ಲವೇ? ಎಂದು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ನ ಶಾಸಕ ಪ್ರದೀಪ್ ಈಶ್ವ ವ್ಯಂಗ್ಯವಾಡಿದ್ದಾರೆ.
ಮಾಜಿ ಡಾ.ಕೆ.ಸುಧಾಕರ್ ಕಾಂಗ್ರೆಸ್‌ಗೆ ಬರಲು ಹರಸಾಹಸ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಅವರಿಗೆ ಕಾಂಗ್ರೆಸ್ ಗೆ ಬರಲು ಅವಕಾಶ ಇಲ್ಲ ಎಂದು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವ ಹೇಳಿದ್ದಾರೆ. ಸುಧಾಕರ್ ಅವರು ಕಾಂಗ್ರೆಸ್‌ಗೆ ಬಂದು, ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ಕೇಳುತ್ತಿದ್ದಾರೆ. ಅದ್ರೆ ಲೋಕಸಭಾ ಚುನಾವಣೆಯ ಟಿಕೆಟ್ ಅಲ್ಲ, ಸುಧಾಕರ್ ಅವರಿಗೆ ಜಿಲ್ಲಾ ಪಂಚಾಯತ್‌ನ ಟಿಕೆಟ್ ಕೂಡ ನೀಡಿಲ್ಲ ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


