ವಿಧಾನಸೌಧ ಪೂರ್ವ ಪ್ರವೇಶ ದ್ವಾರದ ಬಳಿ ಅಕ್ರಮವಾಗಿ ಡ್ರೋನ್ ಹಾರಿಸಿ ವಿಡಿಯೊ ಚಿತ್ರೀಕರಣ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
‘ಕಾರ್ಯಕ್ರಮ ಸಂಘಟನೆ ಕಂಪನಿಯೊಂದರ ಉದ್ಯೋಗಿಗಳಾದ ಅರುಣ್ ಹಾಗೂ ಬಾಬು ಅವರು ಶುಕ್ರವಾರ (ಜುಲೈ 28) ಬೆಳಿಗ್ಗೆ ವಿಧಾನಸೌಧದ ಪೂರ್ವ ಪ್ರವೇಶ ದ್ವಾರದ ಬಳಿ ಡೋನ್ ಹಾರಿಸಿದ್ದರು. ಅದನ್ನು ನೋಡಿದ್ದ ಗಸ್ತು ಸಿಬ್ಬಂದಿ, ಇಬ್ಬರನ್ನೂ ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ವಿಧಾನಸೌಧ ಹಾಗೂ ಹೈಕೋರ್ಟ್ ಸುತ್ತಮುತ್ತ ಡ್ರೋನ್ ಹಾರಾಟ ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸಿ ಆರೋಪಿಗಳು ಡ್ರೋನ್ ಹಾರಿಸುತ್ತಿದ್ದರು. ಅತಿಕ್ರಮ ಪ್ರವೇಶ ಮತ್ತು ನಿರ್ಲಕ್ಷ್ಯದ ಆರೋಪದಡಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.’
‘ಕಂಪನಿ ಸ್ಥಾಪಿಸಿ 15 ವರ್ಷವಾಗಿದ್ದು, ಅದರ ನೆನಪಿಗಾಗಿ ವಿಶೇಷ ವಿಡಿಯೊ ಸಿದ್ಧಪಡಿಸಲಾಗುತ್ತಿದೆ. ಈ ವಿಡಿಯೊಗೆ ವಿಧಾನಸೌಧದ ದೃಶ್ಯ ಅಗತ್ಯವಿತ್ತು. ಹೀಗಾಗಿ, ಡ್ರೋನ್ ಮೂಲಕ ದೃಶ್ಯ ಸೆರೆಹಿಡಿಯಲಾಗುತ್ತಿದೆ’ ಎಂದು ಆರೋಪಿಗಳು ಹೇಳಿಕೆ ನೀಡಿದ್ದಾರೆ. ಠಾಣೆ ಜಾಮೀನು ಮೇಲೆ ಆರೋಪಿಗಳನ್ನು ಬಿಟ್ಟು ಕಳುಹಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EAp8zUqF6y43cTFbQE5jEU
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


