ನವದೆಹಲಿ: ರೈಲು ಹಳಿ ಮೇಲೆ ಮಲಗಿದ್ದ ಕುಡುಕನಿಗೆ ರೈಲು ಡಿಕ್ಕಿ ಹೊಡೆದರೂ ಆತ ಪ್ರಾಣಾಪಾಯದಿಂದ ಪಾರಾದ ಘಟನೆ ಪೆರುವಿನಲ್ಲಿ ನಡೆದಿದೆ.
ಶನಿವಾರ ಸರಕು ರೈಲು ಡಿಕ್ಕಿ ಹೊಡೆದರೂ ಕುಡುಕ ಹೇಗೋ ಬದುಕಿ ಉಳಿದಿದ್ದಾನೆ. ಕುಡಿದ ಮತ್ತಿನಲ್ಲಿ ಹಳಿ ಮೇಲೆ ಮಲಗಿದ್ದ ವ್ಯಕ್ತಿ ಮೇಲೆ ರೈಲು ಹಾದು ಹೋದರೂ ಆತ ಪವಾಡ ಸದೃಶ್ಯದಂತೆ ಬದುಕುಳಿದ್ದಾನೆ ಎಂದು ಲಿಮಾ ಪ್ರಾಂತ್ಯದ ಅಟೆ ಪಟ್ಟಣದ ಭದ್ರತಾ ಅಧಿಕಾರಿ ಜನರಲ್ ಜೀವಿಯರ್ ಅವಲೋಸ್ ತಿಳಿಸಿದ್ದಾರೆ.
ರೈಲು ಹಳಿಗಳ ಮಧ್ಯೆ ಕುಡುಕ ನಿದ್ರೆಗೆ ಜಾರಿದ್ದ. ರೈಲು ಸಮೀಪಕ್ಕೆ ಬಂದರೂ ಆತನಿಗೆ ಎಚ್ಚರವಾಗಿಲ್ಲ. ಈ ವೇಳೆ ಕುಡುಕನಿಗೆ ರೈಲು ಡಿಕ್ಕಿ ಹೊಡೆದಿದೆ. ಆದರೂ ಆತ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾನೆ.
28 ವರ್ಷದ ಜುವಾನ್ ಕಾರ್ಲೋಸ್ ಟೆಲೊ ಎಂಬಾತ ಅಪಾಯದಿಂದ ಪಾರಾದ ವ್ಯಕ್ತಿಯಾಗಿದ್ದಾನೆ. ಘಟನೆಯಲ್ಲಿ ಆತನ ಎಡಗೈ ಮತ್ತು ಎಡಕಣ್ಣಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4