ತಿಪಟೂರು: ತಾಲೂಕಿನ ನೊಣವಿನಕೆರೆ ಹೋಬಳಿ, ಗುಂಗುರು ಮಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂಗುರು ಮಳೆ ಗ್ರಾಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಿ. ಡಾ.ಎನ್.ಮೂರ್ತಿ ಸ್ಥಾಪಿತ ಸಂಘಟನೆಯ ಗ್ರಾಮ ಶಾಖೆಯನ್ನು ಡಿಎಸ್ ಎಸ್ ತಾಲೂಕು ಉಪಾಧ್ಯಕ್ಷರಾದ ಮತಿಘಟ್ಟ ಶಿವಕುಮಾರ್ ಉದ್ಭಾಟಿಸಿದರು.
ಬಳಿಕ ಮಾತನಾಡಿದ ಅವರು, ಬರೀ ಉದ್ಘಾಟನೆ ಆದರೆ ಸಾಲದು ಇದರ ಜೊತೆಗೆ ಕೆಳ ಸಮುದಾಯದ ಜನರು ಪರಿಶಿಷ್ಟ ಜಾತಿ, ಪಂಗಡದ ಜನರ ಶೈಕ್ಷಣಿಕ ಅಭಿವೃದ್ಧಿಗೆ ಕಾರ್ಯಕರ್ತರು ಶ್ರಮಿಸಬೇಕು ಎಂದು ಕರೆ ನೀಡಿದರು.
ಆರ್ಥಿಕ ಸಾಮಾಜಿಕ ರಾಜಕೀಯ ಕ್ಷೇತ್ರದಲ್ಲಿ ಶೋಷಿತರು ಮುಂದೆ ಬರಲು ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಸ್ಪರ್ಧಿಸಬೇಕು ಸರ್ಕಾರದಿಂದ ಸಿಗುವ ಎಸ್ಸಿ ಎಸ್ಟಿ ಸಮುದಾಯದ ಮೂಲಭೂತ ಸೌಕರ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಪಿಡಿಒ ತಾಲೂಕು ಅಧ್ಯಕ್ಷ ಅಶೋಕ್ ಗೌಡನಕಟ್ಟೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಟ್ಟಸ್ವಾಮಿ, ವಿಭಾಗಿಯ ಉಪಾಧ್ಯಕ್ಷ ಪ್ರಸನ್ ಕುಮಾರ್, ಕಾರ್ಮಿಕ ಘಟಕದ ಅಧ್ಯಕ್ಷ ಹೊನ್ನಪ್ಪ, ಯುವ ಘಟಕದ ಅಧ್ಯಕ್ಷ ಗುರುಗದಹಳ್ಳಿ ಮಂಜು, ತಾಲೂಕ್ ಕಾರ್ಯದರ್ಶಿ ಬೆನ್ನಾಕನಹಳಿ ಪ್ರಕಾಶ್, ಹೋಬಳಿ ಅಧ್ಯಕ್ಷರ ವನವಳ್ಳಿ ಚಂದ್ರು , ಬಳ್ಳಕೆರೆ ಅಶೋಕ್ ರಾಜೇಂದ್ರ, ಪ್ರಸಾದ್ ಕೆರಗೋಡಿ, ಭರತ್ ಕುಮಾರ್ ಸೇರಿದಂತೆ ಪ್ರಮುಖ ಮುಖಂಡರು ಗ್ರಾಮಸ್ಥರು ಹಾಜರಿದ್ದರು.
ವರದಿ: ಮಂಜು ಗುರುಗದಹಳ್ಳಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz