ತುರುವೇಕೆರೆ: ರಾಜ್ಯಾದ್ಯಂತ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ಇವರಿಂದ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೊಡಗಿಹಳ್ಳಿ ಹನುಮಂತಯ್ಯ ಹೇಳಿದರು.
ಕೊಡಗಿಹಳ್ಳಿ ಹನುಮಂತಯ್ಯ ನವರು ಬೆಮೆಲ್ ಕಾಂತರಾಜುರವರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ರಾಜ್ಯದಲ್ಲಿ 16 ದಲಿತ ಸಂಘಟನೆ ಒಕ್ಕೂಟಗಳ ವತಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸುವ ಕುರಿತಂತೆ ನಾವು ಈ ಬಾರಿ ಷರತ್ತು ಬದ್ಧವಾಗಿ ಬೆಂಬಲಿಸಲಿದ್ದೇವೆ ಎಂದರು.
ದಲಿತ ಸಂಘಟನೆಗಳ ಐಕ್ಯತ ಒಕ್ಕೂಟದ ಮುಖಂಡ ಮಾ.ನ. ಗುರುದತ್ ಮಾತನಾಡಿ ಸಂವಿಧಾನವನ್ನೇ ಬದಲಾಯಿಸುತ್ತೇವೆಂದು ಹೇಳಿಕೊಂಡವರನ್ನು ನಾವು ಸೋಲಿಸಬೇಕಿದೆ. 223 ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ನ್ನು ಬೆಂಬಲಿಸಲು ಕೇಂದ್ರ ಸಮಿತಿಯು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಆದೇಶ ನೀಡಿದೆ ಎಂದರು.
ಕಾರಣ ಇಷ್ಟೇ ದಲಿತರನ್ನು ತುಳಿಯುತ್ತಿರುವಂತಹ ಸಮಾಜ ವಿರೋಧಿ ಬಿಜೆಪಿಯನ್ನು ಬೆಂಬಲಿಸದಿರಲು ಕೇಂದ್ರ ಸಮಿತಿಯಿಂದ ಸೂಚನೆ ಬಂದಿರುವ ಹಿನ್ನೆಲೆಯಲ್ಲಿ ನಾವು ಪತ್ರಿಕಾ ಹೇಳಿಕೆಯನ್ನು ನೀಡುತ್ತಿದ್ದೇವೆ ಎಂದು ತಿಳಿಸಿದರು.
ಚಲವಾದಿ ಮಹಾಸಭಾಧ್ಯಕ್ಷ ಡೊಂಕಿಹಳ್ಳಿ ರಾಮಣ್ಣ ಮಾತನಾಡಿ, ಅಂಬೇಡ್ಕರ್ ಕೊಟ್ಟಿರುವ ಮತದಾನದ ಹಕ್ಕನ್ನು ಚಲಾಯಿಸಿ ದೇಶ ವಿರೋಧಿಗಳಿಗೆ ತಕ್ಕ ಪಾಠ ಕಲಿಸಿ ಸಂವಿಧಾನವನ್ನು ಬದಲಾಯಿಸುವ ಹುನ್ನಾರ ನಡೆಯುತ್ತಿದೆ. ಆದ್ದರಿಂದ ನೀವುಗಳೆಲ್ಲರೂ ಕಾಂಗ್ರೆಸ್ಸನ್ನು ಬೆಂಬಲಿಸಿ ಪ್ರೊಫೆಸರ್ ಬಿ. ಕೃಷ್ಣಪ್ಪ ಸ್ಥಾಪಿತ 12 ಸಂಘಟನೆಗಳು ಒಗ್ಗೂಡಿ ರುವುದರಿಂದ ಈ ಸರ್ಕಾರವನ್ನು ತಿರಸ್ಕರಿಸಿ ದಲಿತ ಮುಖಂಡರುಗಳು ಹಾಗೂ ಸಮಾಜ ಬಾಂಧವರು ಯಾವುದೇ ಪಕ್ಷದಲ್ಲಿದ್ದರೂ ಸಹ ಕಾಂಗ್ರೆಸ್ಸನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಮುಖಂಡ ನೆಮ್ಮದಿ ಗ್ರಾಮ ಮೂರ್ತಿ ಸಿ.ಎಸ್. ಮಾತನಾಡಿ, ಕಾಂಗ್ರೆಸ್ ಪಕ್ಷದ ಮುಖಂಡರುಗಳು ಪ್ರಚಾರ ಭಾಷಣಗಳಲ್ಲಿ ಬಜರಂಗದಳ ಸಂಘಟನೆಗಳ ನಿಷೇಧ ಏರಿಕೆ ವಿರುದ್ಧ ಮಾತನಾಡಿರುತ್ತಾರೆ. ಕೆಲವು ಕೋಮುವಾದಿಯ ಸಂಘಟನೆಗಳು ಇವರ ಹೇಳಿಕೆಯ ವಿರುದ್ಧ ಪ್ರತಿಭಟನೆಗಳನ್ನು ನಡೆಸುತ್ತಿದೆ ಮುಂದಿನ ದಿನಗಳಲ್ಲಿ ಇವರ ಆಟಗಳು ಏನು ನಡೆಯದು ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಿಡಿಕಾರಿದರು.
ಈ ಸಂದರ್ಭದಲ್ಲಿ ತಿಮ್ಮಯ್ಯ ಕಲ್ಲಬೋರನಹಳ್ಳಿ. ಪುರ ರಾಮಚಂದ್ರು. ಶಿಕ್ಷಣ ಇಲಾಖೆ ನಿವೃತ್ತ ಅಧಿಕಾರಿ ಹುಚ್ಚಪ್ಪ. ಕೋಳಘಟ್ಟ ಕೇಶವ್. ನಟರಾಜ್ ಮುಂತಾದವರಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy