ಪಾವಗಡ: ತಾಲ್ಲೂಕಿನ ಅರಸೀಕೆರೆ ಗ್ರಾಮದಲ್ಲಿ ಭಾರೀ ಮಳೆಯ ಪರಿಣಾಮದಿಂದಾಗಿ ರೈತರು ಬೆವರು ಹರಿಸಿ ಬೆಳೆಸಿದ್ದ ಅಡಿಕೆ ಗಿಡಗಳು ನೆಲಕ್ಕುರುಳಿವೆ. ಫಸಲಿಗೆ ಬಂದಿದ್ದ ಅಡಿಕೆ ಗಿಡಗಳು ಮಳೆಯ ರಭಸಕ್ಕೆ ಮುರಿದು ಬಿದ್ದಿವೆ. ಅರಸೀಕೆರೆಯ ರೈತ ಪ್ರಕಾಶ್ ಎಂಬುವವರ ಸರ್ವೆ ನಂಬರ್ 127/ 2 ಜಮೀನಿನಲ್ಲಿ ಈ ಘಟನೆ ಸಂಭವಿಸಿದೆ.

10-12 ವರ್ಷದಿಂದ ಬೆಳೆದು ಫಸಲಿಗೆ ಬಂದಿದ್ದ ಅಡಿಕೆ ಗಿಡಗಳು ಉರುಳಿ ಬಿದ್ದ ಪರಿಣಾಮ ಅಂದಾಜು 2 ಲಕ್ಷ ರೂಪಾಯಿಯಷ್ಟು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಹೀಗೆ ಇದೇ ಗ್ರಾಮದ ಹಲವು ರೈತರು ಬೆಳೆಸಿದ್ದ ಅಡಿಕೆ ಮರಗಳ ಸ್ಥಿತಿಯು ಹೀಗೆಯೆ ಆಗಿದೆ. ಮಳೆ ಬಂದರು ರೈತರೇ ನಷ್ಟಕ್ಕೊಳಗಾಗುತ್ತಾರೆ. ಮಳೆ ಬರದಿದ್ದರೂ ರೈತರೆ ನಷ್ಟ ಅನುಭವಿಸುತ್ತಾರೆ. ರೈತರ ಗೋಳು ಮಾತ್ರ ಸರ್ಕಾರದ ಕಿವಿಗೆ ಕೇಳಿಸುವುದಿಲ್ಲ.
ವರದಿ: ನಂದೀಶ್ ನಾಯ್ಕ ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


