ಕೊರಟಗೆರೆ: ಕಲ್ಲುಬಂಡೆ ಕ್ರಷರ್ ಲಾರಿಗಳ ಹಾವಳಿಯಿಂದ ಕೊರಟಗೆರೆಯ ಪಿಡ್ಲ್ಯೂಡಿ ಮುಖ್ಯ ರಸ್ತೆಯೇ ಮಾಯವಾಗಿದೆ. ಹಗಲಿನಲ್ಲಿ ಅಪಘಾತ ಆದ್ರೆ ಸಣ್ಣ–ಪುಟ್ಟ ಗಾಯ ಆಗುತ್ತೇ..!! ರಾತ್ರಿವೇಳೆ ಸಂಚರಿಸಿದ್ರೇ ಸಾವು ಖಚಿತವಾಗುತ್ತೆ ಎನ್ನುವಂತಿದೆ ಈ ರಸ್ತೆ.
ಜೆಟ್ಟಿಅಗ್ರಹಾರದಿಂದ ಜಂಪೇನಹಳ್ಳಿ ಮಾರ್ಗವಾಗಿ ತೋವಿನಕೆರೆ ಮುಖ್ಯರಸ್ತೆಯಲ್ಲಿ ಪ್ರತಿನಿತ್ಯ 250 ಲಾರಿಗಳು ಸಂಚಾರ ನಡೆಸುತ್ತಿದೆ. ಜಂಪೇನಹಳ್ಳಿ ಕ್ರಾಸಿನಿಂದ ಗಟ್ಲಗೊಲ್ಲಹಳ್ಳಿಯ ವರೆಗಿನ 4 ಕಿ.ಮೀ. ರಸ್ತೆಯಲ್ಲಿ 40ಕ್ಕೂ ಅಧಿಕ ಗುಂಡಿಗಳು ಕಾಣುತ್ತದೆ.
ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿಯ ತೋವಿನಕೆರೆ–ಜಂಪೇನಹಳ್ಳಿ ಮುಖ್ಯರಸ್ತೆಯಲ್ಲಿ ಇಂತಹದ್ದೊಂದು ಅವ್ಯವಸ್ಥೆ ಕಂಡು ಬಂದರೂ ಸಾರಿಗೆ, ಪಿಡ್ಲ್ಯೂಡಿ ಹಾಗೂ ಗಣಿ, ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ತಂಡ ಕಚೇರಿಯಲ್ಲೇ ಕಣ್ಮುಚ್ಚಿ ಕುಳಿತಿದ್ದಾರೆ.
ಕೊರಟಗೆರೆಯಲ್ಲಿ ಎಗ್ಗೀಲ್ಲದೇ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಗೆ ಕಡಿವಾಣವೇ ಇಲ್ಲವೇ.! ಮಳೆ ಬಂದರೆ ರಸ್ತೆಯಲ್ಲಿ ಗುಂಡಿಗಳ ದರ್ಬಾರ್, ಬಿಸಿಲು ಬಂದರೇ ಸಾರ್ವಜನಿಕರಿಗೆ ಧೂಳಿನ ಶಾಪ. ಸಾರ್ವಜನಿಕರು ಪ್ರಶ್ನೆ ಮಾಡಿದರೇ ಗಣಿಗಾರಿಕೆ ಮಾಲೀಕರ ಸಹಚರರಿಂದ ಬೆದರಿಕೆ ಹಾಕಲಾಗುತ್ತಿದೆ ಎನ್ನುವ ಆರೋಪ ಕೂಡ ಇದೆ.
ಪಿಡ್ಲ್ಯೂಡಿ ಇಲಾಖೆಗೆ ಸ್ಥಳೀಯರು ದೂರು ನೀಡಿದ್ರೇ ಗಣಿ ಮಾಲೀಕರಿಗೆ ಅಧಿಕಾರಿಗಳೇ ಕರೆ ಮಾಡ್ತಾರೇ.. ವಾಹನಗಳ ಸಂಚಾರಕ್ಕೆ ಕಲ್ಲು ಗಣಿಗಾರಿಕೆಯ ಕ್ರಷರ್ ಲಾರಿಗಳ ಹಾವಳಿ ಸಂಚಕಾರ ತಂದಿದೆ.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q