ಸರಗೂರು: ತಾಲ್ಲೂಕಿನ ನೇಮ್ಮನಹಳ್ಳಿ ಗ್ರಾಮದಲ್ಲಿ ದುಂಡಿ ಮಾರಮ್ಮ ದೇವಿ ಜಾತ್ರಾ ವಾರ್ಷಿಕೋತ್ಸವ ಎರಡು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಿತು.
ಗ್ರಾಮದ ಮಹಿಳೆಯರು ಹೊಂಬಾಳೆಯಿಂದ ಸಿಂಗರಿಸಿದ ಆರತಿಗಳನ್ನು ದೇವಿಗೆ ಅರ್ಪಿಸಿದರು. ರಾತ್ರಿಯಿಡೀ ದೇವಿಯ ಉತ್ಸವ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು.
ಗ್ರಾಮದಲ್ಲಿ ದೇವಸ್ಥಾನದ ಆವರಣದಲ್ಲಿ ಸುಣ್ಣ ಬಣ್ಣ ಬಳಿದು ಸಿಂಗಾರಗೊಳಿಸಿ ಕಡೆ ಕಾರ್ತಿಕ ಮಾಸದಲ್ಲಿ ನುಗು ಜಲಾಶಯ ಹಿನ್ನೀರಿನಿಂದ ಗ್ರಾಮಸ್ಥರು ಸೇರಿಕೊಂಡು ಗಂಗೆ ಪೂಜೆ ಸಲ್ಲಿಸಿ ಬೆಳ್ಳಿ ರಥ ಮೂಲಕ ಮೆರವಣಿಗೆ ಮೂಲಕ ಮೂರುದಿನಗಳ ಕಾಲ ನಡೆದ ಜಾತ್ರಾ ಮಹೋತ್ಸವದಲ್ಲಿ ನೂರಾರು ಭಕ್ತರು ಭಾಗವಹಿಸಿದ್ದರು.ದುಂಡಿ ಮಾರಮ್ಮ ದೇವಿ, ದೇವರುಗಳ ಮೆರವಣಿಗೆ ನಡೆದವು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಮುಖಂಡ ಕೆ.ಎಂ.ಕೃಷ್ಣನಾಯಕ ಭೇಟಿ ನೀಡಿ ತಾಯಿಯ ದರ್ಶನ ಪಡೆದು ಪುನೀತದರು.
ಈ ಸಂದರ್ಭದಲ್ಲಿ ಗ್ರಾಮದ ಯಜಮಾನರು ಮಹದೇವನಾಯಕ,ಮಲ್ಲೇಶನಾಯಕ, ಯೋಗೇಶ್, ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಗೋಪಾಲಸ್ವಾಮಿ ಜಿ., ಒಕ್ಕಲಿಗ ಸಂಘದ ಅಧ್ಯಕ್ಷ ಸುಧೀರ್ ಗೌಡ,ತಾಪಂ ಮಾಜಿ ಅಧ್ಯಕ್ಷ ಹನು, ಜೆಡಿಎಸ್ ಪಕ್ಷದ ಕಾರ್ಯದರ್ಶಿ, ಮಹೇಂದ್ರ, ಮುಖಂಡರು ಪುಟ್ಟ ಹನುಮಯ್ಯ, ಉದಯಕುಮಾರ್, ಇನ್ನೂ ಮುಖಂಡರು ಸೇರಿದಂತೆ ಭಾಗಿಯಾಗಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


