ಹಿಂದೂಸ್ತಾನ್ ಯೂನಿಲಿವರ್ (HUL) ಮತ್ತು ನೆಸ್ಲೆ ತಮ್ಮ ಹಲವು ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಿವೆ. ಚಹಾ (Tea), ಕಾಫಿ, ಹಾಲು ಮತ್ತು ನೂಡಲ್ಸ್‌ಗಳ ಬೆಲೆಯನ್ನು (Noodles price)ಮಾರ್ಚ್ 14 ರಿಂದ ಅಂದರೆ ಇಂದಿನಿಂದ ಹೆಚ್ಚಿಸಲಾಗಿದೆ. ಎಚ್ ಯುಎಲ್ ಬ್ರೂ ಕಾಫಿಯ ಬೆಲೆಯನ್ನು 3-7% ಮತ್ತು ಬ್ರೂ ಗೋಲ್ಡ್ ಕಾಫಿ ಜಾರ್ ನ ಬೆಲೆಯನ್ನು 3-4% ಹೆಚ್ಚಿಸಿದೆ. ಇನ್ ಸ್ಟಂಟ್ ಕಾಫಿ ಪೌಚ್ ಗಳ ಬೆಲೆಯೂ ಶೇ.3ರಿಂದ ಶೇ.6.66ಕ್ಕೆ ಏರಿಕೆಯಾಗಿದೆ.
ಇದಲ್ಲದೇ ತಾಜ್ ಮಹಲ್ (Taj Mahal) ಟೀ ಬೆಲೆ ಶೇ.3.7ರಿಂದ ಶೇ.5.8ಕ್ಕೆ ಏರಿಕೆಯಾಗಿದೆ (Tea price hike). ಬ್ರೂಕ್ ಬಾಂಡ್‌ನ (Brooke Bond) ಎಲ್ಲಾ ವಿಧದ ಚಹಾಗಳ ಬೆಲೆಗಳು 1.5% ರಿಂದ 14% ಕ್ಕೆ ಏರಿದೆ. ನಿರಂತರವಾಗಿ ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ (Price hike) ಕಂಪನಿಯು ಈ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ ಎಂದು HUL ಹೇಳಿದೆ.
ಮ್ಯಾಗಿ ದರದಲ್ಲಿ ಶೇ.9ರಿಂದ 16ರಷ್ಟು ಏರಿಕೆ :
ನೆಸ್ಲೆ ಇಂಡಿಯಾ (Nestle India) ಕೂಡ ಮ್ಯಾಗಿ (Maggi) ಬೆಲೆಯನ್ನು 9 ರಿಂದ 16% ರಷ್ಟು ಹೆಚ್ಚಿಸಿದೆ. ಇದಲ್ಲದೇ ಕಂಪನಿಯು ಹಾಲು ಮತ್ತು ಕಾಫಿ ಪುಡಿಯ ಬೆಲೆಯನ್ನು ಕೂಡ ಹೆಚ್ಚಿಸಿದೆ (cofee price). ದರ ಹೆಚ್ಚಳದ ನಂತರ 70 ಗ್ರಾಂ ಮ್ಯಾಗಿ ಪ್ಯಾಕ್‌ಗೆ 12 ರೂ. ಬದಲಿಗೆ 14 ರೂ. ನೀಡಬೇಕಾಗುತ್ತದೆ. 40 ಗ್ರಾಂ ಮ್ಯಾಗಿ ಮಸಾಲಾ ನೂಡಲ್ಸ್‌ಗೆ 3 ರೂಪಾಯಿ ಹೆಚ್ಚು ಪಾವತಿಸಬೇಕಾಗುತ್ತದೆ. ಈ ಹಿಂದೆ 560 ಗ್ರಾಂ ಮ್ಯಾಗಿ ಪ್ಯಾಕ್‌ಗೆ 96 ರೂ. ಪಾವತಿಸಬೇಕಾಗಿತ್ತು ಆದರೆ ಈಗ ಇದಕ್ಕೆ 105 ರೂ.
ನೀಡಬೇಕಾಗುತ್ತದೆ.
ಈ ವಸ್ತುಗಳ ಬೆಲೆಯೂ ಹೆಚ್ಚಿದೆ :
ನೆಸ್ಲೆ ಒಂದು ಲೀಟರ್ ಎ+ ಹಾಲಿನ ಬೆಲೆಯನ್ನೂ ಹೆಚ್ಚಿಸಿದೆ. ಇದಕ್ಕೆ ಮೊದಲು 75 ರೂಪಾಯಿ ಪಾವತಿಸಬೇಕಾಗಿತ್ತು. ಆದರೆ ಈಗ 78 ರೂಪಾಯಿ ಪಾವತಿಸಬೇಕಾಗಿದೆ. ನೆಸ್ಕೆಫೆ ಕ್ಲಾಸಿಕ್ ಕಾಫಿ ಪೌಡರ್ ಬೆಲೆ ಶೇ.3-7ರಷ್ಟು ಹೆಚ್ಚಾಗಿದೆ. ನೆಸ್ಕೆಫೆಯ 25 ಗ್ರಾಂ ಪ್ಯಾಕ್ ಈಗ 2.5% ರಷ್ಟು ದುಬಾರಿಯಾಗಿದೆ. ಇದಕ್ಕೆ 78 ರೂಪಾಯಿ ಬದಲು ಈಗ 80 ರೂಪಾಯಿ ಪಾವತಿಸಬೇಕಾಗುತ್ತದೆ. ಇದರೊಂದಿಗೆ 50 ಗ್ರಾಂ ನೆಸ್ಕೆಫೆ ಕ್ಲಾಸಿಕ್‌ಗೆ 145 ರೂಪಾಯಿ ಬದಲಿಗೆ 150 ರೂಪಾಯಿ ಪಾವತಿಸಬೇಕಾಗುತ್ತದೆ.
ವರದಿ: ಆಂಟೋನಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB