ಧಾರವಾಡ: ಆ ಮನೆಯಲ್ಲಿ ದೇವಿಯ ಉದ್ಭವ ಮೂರ್ತಿ ಸೃಷ್ಡಿಯಾಗಿದೆ. ಹೀಗಾಗಿ ನಿತ್ಯ ಸಾವಿರಾರು ಜನ ಬಂದು ಸರತಿ ಸಾಲಿನಲ್ಲಿ ನಿಂತು ಪೂಜೆ ಮಾಡುತ್ತಿರುವ ಘಟನೆ ಜಿಲ್ಲೆಯ ಕಲಘಟಗಿ ತಾಲೂಕಿನ ಸುರಶೆಟ್ಟಿ ಕೊಪ್ಪ ಗ್ರಾಮದಲ್ಲಿ ನಡೆದಿದೆ.
ಬಸವರಾಜ್ ಕಲಭಾವಿ ಅವರ ಮನೆಯಲ್ಲಿ ದ್ಯಾಮಮ್ಮನ ಉದ್ಭವ ಮೂರ್ತಿ ಸೃಷ್ಟಿಯಾಗಿದೆ. ಮನೆಯ ಕೋಣೆಯೊಂದರ ಮೂಲೆಯಲ್ಲಿ ದೇವಿ ಮೂರ್ತಿ ಸೃಷ್ಟಿಯಾಗಿದೆ.
ಕಳೆದ ಹದಿನೈದು ದಿನಗಳ ಹಿಂದೆ ದ್ಯಾಮಮ್ಮನ ಉದ್ಭವ ಮೂರ್ತಿ ಉದ್ಭವವಾಗಿದ್ದು, ನಿತ್ಯ ದ್ಯಾಮಮ್ಮನಿಗೆ ಅಲಂಕಾರ ಮಾಡಿ ಪೂಜೆ ಮಾಡುತ್ತಿದ್ದಾರೆ. ಇನ್ನು ಈ ಪವಾಡ ನೋಡಿದ ಗ್ರಾಮದ ಜನರು, ಇಲ್ಲಿಗೆ ಬಂದು ಪೂಜೆ ಮಾಡಿಸಿಕೊಂಡು ಹೋಗ್ತಾ ಇದ್ದಾರೆ.
ಇನ್ನು ಬಸವರಾಜ್ ಅವರಿಗೆ ಕಳೆದ ಒಂದು ವರ್ಷದಿಂದ ಮೈಮೇಲೆ ದೇವಿ ಬರ್ತಿದ್ದಾಳಂತೆ. ದೇವರು ಬಂದ ಸಮಯದಲ್ಲಿ ದ್ಯಾವಮ್ಮ ದೇವಿ ನಾನು ನಿಮ್ಮ ಮನೆಯಲ್ಲಿ ಉದ್ಭವ ಮೂರ್ತಿಯಾಗ್ತೀನಿ ಎಂದು ಹೇಳ್ತಾ ಇದ್ದಳಂತೆ. ಜೊತೆಗೆ ನಾನು ಹೇಳೋವರೆಗೂ ಕೋಣೆ ತೆರೆಯಬೇಡಿ ಎಂದು ಹೇಳಿದ್ದಳಂತೆ. ತದನಂತರ ಕೋಣೆ ತೆರೆಯುವಂತೆ ಹೇಳಿದ್ದಳಂತೆ. ಕೋಣೆ ತೆರೆದು ನೋಡಿದಾಗ ಮೂರ್ತಿ ಸೃಷ್ಟಿಯಾಗಿದೆ.
ಅನೇಕರು ಇಲ್ಲಿಗೆ ಬಂದು ಕೈ ಮುಗಿದು ಹೋದ್ರೆ, ಬಸವರಾಜ್ ಅವರೇ ಜನರನ್ನು ಸೆಳೆಯಲು ಹೀಗೆ ಮಾಡಿದ್ದಾರೆ ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


