ತುಮಕೂರು: ಪಾಲಿಕೆ ವ್ಯಾಪ್ತಿಗೆ ಸೇರಿದ ಎಲ್ಲಾ ಆಸ್ತಿಗಳನ್ನು ಇ–ಆಸ್ತಿಯಲ್ಲಿ ಕಾಲೋಚಿತಗೊಳಿಸಲು ಆಗಸ್ಟ್ 6 ರಿಂದ 9ರವರೆಗೆ ಇ–ಆಸ್ತಿ ತ್ವರಿತ ಸೇವಾ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜ ತಿಳಿಸಿದ್ದಾರೆ.
ಪಾಲಿಕೆ ವ್ಯಾಪ್ತಿಯ 25, 26, 27ನೇ ವಾರ್ಡ್ ಹೊರತುಪಡಿಸಿ ಉಳಿದೆಲ್ಲಾ ವಾರ್ಡ್ ಗಳಲ್ಲಿ ಈ ಅಭಿಯಾನ ನಿಗಧಿತ ದಿನಾಂಕಗಳಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನಡೆಯಲಿದೆ.
ಆಸ್ತಿ ತೆರಿಗೆ ಹೊಣೆಗಾರಿಕೆಯ ವರ್ಗಾವಣೆಯನ್ನು ಸರಳೀಕರಣಗೊಳಿಸುವುದು, ಪಾಲಿಕೆ ವ್ಯಾಪ್ತಿಯ ಎಲ್ಲಾ ಆಸ್ತಿಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ಒಳಪಡಿಸುವುದು, ಆಸ್ತಿ ಸಂಪನ್ಮೂಲ ಕ್ರೋಢೀಕರಣಗೊಳಿಸುವುದು. ಕಾವೇರಿ ತಂತ್ರಾಂಶದೊಡನೆ ಇ–ಆಸ್ತಿ ತಂತ್ರಾಂಶವನ್ನು ಜೋಡಿಸುವುದು ಈ ಅಭಿಯಾನದ ಮೂಲ ಉದ್ದೇಶವಾಗಿದೆ.
ಈಗಾಗಲೇ ಪಾಲಿಕೆಯಲ್ಲಿ ಆಸ್ತಿ ತೆರಿಗೆ ಹಕ್ಕು ದಾಖಲಿಸಿಕೊಂಡಿರುವ ಆಸ್ತಿ ಮಾಲೀಕರು ಇ–ಆಸ್ತಿಯಲ್ಲಿ ಕಾಲೋಚಿತಗೊಳಿಸಲು ಕ್ರಯಪತ್ರ/ದಾನಪತ್ರ/ವಿಭಾಗ ಪತ್ರ/ಹಕ್ಕು ಪತ್ರ, ಇ.ಸಿ, ಭೂಪರಿವರ್ತನೆ ಆದೇಶ, ಅನುಮೋದಿತ ಲೇಔಟ್ ನಕ್ಷೆ, ನಮೂನೆ-3, ಸ್ವತ್ತಿನ ಭಾವಚಿತ್ರ, ಮಾಲೀಕರ ಭಾವಚಿತ್ರ, ಪಾನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಕಟ್ಟಡ ಪರವಾನಿಗೆ ಪತ್ರಗಳನ್ನು ಸ್ವಯಂ ದೃಢೀಕರಣದೊಂದಿಗೆ ಇ–ಆಸ್ತಿ ಅಭಿಯಾನದ ಸ್ಥಳದಲ್ಲಿ ಸಲ್ಲಿಸಬೇಕು.
2001-02ನೇ ಸಾಲಿನ ಹಿಂದೆ ಪಾಲಿಕೆಯಲ್ಲಿ ದಾಖಲಾಗಿರುವ ಸ್ವತ್ತುಗಳ ಕುರಿತು ಇ.ಸಿ ಹಾಗೂ ಎಂ.ಎ.ಆರ್-19ರ ದಾಖಲೆಗಳನ್ನು ಪಾಲಿಕೆಯಿಂದ ಒದಗಿಸಲಾಗುವುದು.
ಸ್ವಯಂ ದೃಢೀಕರಣದೊಂದಿಗೆ ಸಲ್ಲಿಸಿದ ಉಳಿದ ದಾಖಲೆಗಳನ್ನು ಕರ್ತವ್ಯದ 7 ದಿನಗಳೊಳಗೆ ಅನುಮೋದನೆಯಾದ ಇ-ಆಸ್ತಿ ನಮೂನೆ-2ನ್ನು ಅರ್ಜಿದಾರರ ಮೊಬೈಲ್ ಸಂಖ್ಯೆಗೆ ಸಂದೇಶ ರವಾನಿಸಲಾಗುವುದು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲಾ ಆಸ್ತಿ ಮಾಲೀಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296