nammatumakuru

    Subscribe to Updates

    Get the latest creative news from FooBar about art, design and business.

    What's Hot

    ತುಮಕೂರು | ನವೆಂಬರ್ 21—22ರಂದು ವಿಜ್ಞಾನ ವಸ್ತು ಪ್ರದರ್ಶನ

    November 19, 2025

    ಸಾಲಬಾಧೆ:  ರೈತ ಸಾವಿಗೆ ಶರಣು

    November 19, 2025

    ನವೆಂಬರ್ 22: ತಲ್ಲಣಿಸದಿರು ಮನವೆ ಕಾರ್ಯಕ್ರಮ

    November 19, 2025
    Facebook Twitter Instagram
    ಟ್ರೆಂಡಿಂಗ್
    • ತುಮಕೂರು | ನವೆಂಬರ್ 21—22ರಂದು ವಿಜ್ಞಾನ ವಸ್ತು ಪ್ರದರ್ಶನ
    • ಸಾಲಬಾಧೆ:  ರೈತ ಸಾವಿಗೆ ಶರಣು
    • ನವೆಂಬರ್ 22: ತಲ್ಲಣಿಸದಿರು ಮನವೆ ಕಾರ್ಯಕ್ರಮ
    • ವೈ.ಎನ್.ಹೊಸಕೋಟೆಯಲ್ಲಿ ಸಾಂಪ್ರದಾಯಿಕ ಗೋವಿನ ಹಬ್ಬ
    • ವಿಜೃಂಭಣೆಯಿಂದ ನೆರವೇರಿದ ಬೇಲದಕುಪ್ಪೆ ಶ್ರೀಮಹದೇಶ್ವರಸ್ವಾಮಿ ದೇವಸ್ಥಾನ ಜಾತ್ರಾ ಮಹೋತ್ಸವ
    • ಸರ್ಕಾರಿ ಶಾಲೆಗಳು ಬೇಡವಾಗಿದೆ, ಕಾರಣ ಅರಿಯಬೇಕಿದೆ: ಶಾಸಕ ಎಂ.ಟಿ.ಕೃಷ್ಣಪ್ಪ
    • ಸಾಹಿತಿಗಳು ಸರ್ಕಾರದ ಆಶ್ರಯ ಪಡೆಯುವುದನ್ನು ನಿಲ್ಲಿಸಬೇಕು: ಬಂಜಗೆರೆ ಜಯಪ್ರಕಾಶ್
    • ದುಪ್ಪಟ್ಟು ಹಣ ಲಾಭ ಗಳಿಸುವ ಆಮಿಷಕ್ಕೆ ಬಲಿಯಾಗಿ 14 ಲಕ್ಷ ರೂ. ಕಳೆದುಕೊಂಡ ಹೊಟೇಲ್ ಸಿಬ್ಬಂದಿ!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಡಿಜಿಟಲ್ ಯುಗದಲ್ಲಿ ಎಲ್ಲವೂ ಅಂಗೈಯಲ್ಲೇ ಸಿಗುವ ಕಾಲಘಟ್ಟ ಗಾಣದ ಎಣ್ಣೆ: ಇ-ಕಾಮರ್ಸ್ ಉದ್ಯಮ
    ರಾಜ್ಯ ಸುದ್ದಿ March 3, 2023

    ಡಿಜಿಟಲ್ ಯುಗದಲ್ಲಿ ಎಲ್ಲವೂ ಅಂಗೈಯಲ್ಲೇ ಸಿಗುವ ಕಾಲಘಟ್ಟ ಗಾಣದ ಎಣ್ಣೆ: ಇ-ಕಾಮರ್ಸ್ ಉದ್ಯಮ

    By adminMarch 3, 2023No Comments2 Mins Read
    ganada yenne

    ಡಿಜಿಟಲ್ ಯುಗದಲ್ಲಿ ಎಲ್ಲವೂ ಅಂಗೈಯಲ್ಲೇ ಸಿಗುವ ಕಾಲಘಟ್ಟದಲ್ಲಿ ನಾವಿದ್ದೇವೆ. ಈ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ಎರಡನೇ ದರ್ಜೆಯ ಪಟ್ಟಣದಲ್ಲಿದ್ದುಕೊಂಡೇ ಉದ್ಯಮವನ್ನು ಎಲ್ಲೆಡೆಗೆ ಕೊಂಡೊಯ್ಯಬಹುದು ಎಂಬುದನ್ನು ಸಾಬೀತು ಪಡಿಸಿದ್ದಾರೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದ ಯುವಕ ಬಸವಂತ್ ಕುಮಾರ್ ಎಂ.ಪಿ.

    ಮೇಧಾವಿ ಸೂಪರ್ ಫುಡ್ ಡಾಟ್ ಕಾಮ್ ವೆಬ್ ಸೈಟ್ ಮೂಲಕ ಈ ಕಾಮರ್ಸ್ ಉದ್ಯಮ ಆರಂಭಿಸಿರುವ ಬಸವಂತ್ ಕುಮಾರ್ ಅವರು ಕೊಳ್ಳೇಗಾಲದಂತಹ ಚಿಕ್ಕ ಪಟ್ಟಣದಲ್ಲಿದ್ದುಕೊಂಡೇ ತಮ್ಮ ಉದ್ಯಮವನ್ನು ದೇಶದ ಮೂಲೆ ಮೂಲೆಗೆ ಕೊಂಡೊಯ್ಯಬಹುದು ಎಂಬುದನ್ನು ನಿರೂಪಿಸುತ್ತಿದ್ದಾರೆ. ಇದರೊಂದಿಗೆ ಈ ಕಾಮರ್ಸ್ ಉದ್ಯಮದಲ್ಲಿ ಬೆಳೆಯುತ್ತಿರುವ ದೇಶದ ಟಾಪ್ 10 ಉದಯೋನ್ಮುಖ ಉದ್ಯಮಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.


    Provided by
    Provided by

    ಪ್ರಸ್ತುತ ಅನ್ನದಿಂದ ಹಿಡಿದು ಎಲ್ಲ ಆಹಾರ ಪದಾರ್ಥಗಳಿಗೂ ರಾಸಾಯನಿಕಗಳು ಸೇರುತ್ತಿವೆ. ಇದರಿಂದ ಆಹಾರದ ಗುಣಮಟ್ಟ ಕುಸಿದು ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಎದುರಿಸಬೇಕಾದ ಪರಿಸ್ಥಿತಿ ಉದ್ಭವಿಸಿದೆ. ಇನ್ನೂ ಅಡುಗೆ ಎಣ್ಣೆ ವಿಷಯದಲ್ಲಿ ಪರಿಸ್ಥಿತಿ ಕೈಮೀರುವ ಹಂತ ತಲುಪಿದೆ. ಇಂತಹ ದಿನಗಳಲ್ಲಿ ಸಾಂಪ್ರದಾಯಿಕವಾಗಿ ಈ ಹಿಂದೆ ನಮ್ಮ ಹಿರಿಯರು ಅನುಸರಿಸುತ್ತಿದ್ದ ಗಾಣದ ಎಣ್ಣೆ ಬಳಕೆಯನ್ನು ಮತ್ತೆ ಮುನ್ನಲೆಗೆ ತರುವ ಪ್ರಯತ್ನದಲ್ಲಿದ್ದಾರೆ ಬಸವಂತ್.

    ಸ್ಥಳೀಯ ರೈತರಿಂದ ಗುಣಮಟ್ಟದ ಬೀಜಗಳನ್ನು ಪಡೆದು ಅದರಿಂದ ಗುಣಮಟ್ಟದ ಗಾಣದ ಎಣ್ಣೆಯನ್ನು ತಯಾರಿಸಿ ಅದನ್ನು ಗ್ರಾಹಕರಿಗೆ ತಲುಪಿಸುವ ಕೆಲಸವನ್ನು ಆರಂಭಿಸಿ ಆರಂಭದಲ್ಲೇ ಯಶಸ್ಸು ಗಳಿಸಿದ್ದಾರೆ. ಆರಂಭಿಕವಾಗಿ ಕೊಳ್ಳೇಗಾಲದಲ್ಲಿ ಮೊದಲ ಮಳಿಗೆ ಆರಂಭಿಸಿ ಇಲ್ಲಿಂದಲೇ ಆನ್ ಲೈನ್ ಮೂಲಕ ದೇಶದ ಎಲ್ಲ ನಗರಗಳಿಗೆ ಗುಣಮಟ್ಟದ ಗಾಣದ ಎಣ್ಣೆ ಪೂರೈಸುವ ಕೆಲಸ ಮಾಡುತ್ತಿದ್ದಾರೆ.

    ಮೂಲತಃ ಸಾಫ್ಟವೇರ್ ಆರ್ಕಿಟೆಕ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಬಸವಂತ್ ಕುಮಾರ್ ಅವರು ಮೇಧಾವಿ ಸೂಪರ್ ಫುಡ್ ಈ ಕಾಮರ್ಸ್ ಸಂಸ್ಥೆಗಾಗಿ ಕೆಲಸ ತೊರೆದು ಸಂಪೂರ್ಣವಾಗಿ ತಮ್ಮನ್ನು ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಮೂಲಕ ಸಣ್ಣ ಉದ್ಯಮವೊಂದನ್ನು ಆರಂಭಿಸಲು ಮೆಟ್ರೋ ನಗರಗಳೇ ಆಗಬೇಕಿಲ್ಲ. ಪ್ರಪಂಚವೇ ಪುಟ್ಟ ಹಳ್ಳಿಯಾಗಿ ಮಾರ್ಪಡಿಸಿರುವ ತಂತ್ರಜ್ಞಾನದ ಸಹಾಯದಿಂದ ಸಣ್ಣ ಪಟ್ಟಣದಲ್ಲಿ ಕುಳಿತುಕೊಂಡೇ ಉದ್ಯಮವನ್ನು ಯಶಸ್ವಿಯಾಗಿ ನಡೆಸಬಹುದು ಎಂಬುದನ್ನು ತೋರಿಸುವ ಮೊದಲ ಹೆಜ್ಜೆ ಇಟ್ಟಿದ್ದಾರೆ.

    ಈ ಮೂಲಕ ತಮ್ಮಸಂಸ್ಥೆ ಮೂಲಕ ಸ್ಥಳೀಯ ರೈತರಿಗೂ ನೆರವಾಗಬಹುದು. ಜತೆಗೆ ಉದ್ಯೋಗ ಅರಸಿ ದೊಡ್ಡ ಪಟ್ಟಣ ಸೇರುವ ಯುವಕರಿಗೂ ತಮ್ಮ ಊರಿನಲ್ಲಿಯೇ ಉತ್ತಮ ವೇತನದ ಉದ್ಯೋಗ ದೊರಕಿಸಬಹುದು ಎಂಬುದನ್ನು ಬಸವಂತ್ ಅವರು ತೋರಿಸಿದ್ದಾರೆ.

    ಮೊದಲ ಹಂತವಾಗಿ ಗಾಣದ ಎಣ್ಣೆ ಪೂರೈಕೆ ಆರಂಭಿಸಿರುವ ಬಸಂತ್ ಅವರು ಮುಂದಿನ ದಿನಗಳಲ್ಲಿ ತುಪ್ಪ, ಮಸಾಲೆ ಪದಾರ್ಥಗಳು ಸೇರಿದಂತೆ ಗುಣಮಟ್ಟ ನೈಸರ್ಗಿಕ ಉತ್ಪನ್ನಗಳ ಮಾರಾಟವನ್ನು ಆರಂಭಿಸುವ ಯೋಜನೆ ಹೊಂದಿದ್ದಾರೆ. ಜತೆಗೆ ವಿವಿಧ ನಗರಗಳಲ್ಲಿ ತಮ್ಮ ಸಂಸ್ಥೆಯ ಮಾರಾಟ ಮಳಿಗೆಗಳನ್ನು ತೆರೆಯುವ ಯೋಜನೆ ಹೊಂದಿದ್ದಾರೆ.

    ಸಂಸ್ಥೆಯ ಉತ್ಪನ್ನಗಳಲ್ಲಿ ಗುಣಮಟ್ಟದ ಕಾಯ್ದುಕೊಳ್ಳವ ಜತೆಗೆ ಪ್ಯಾಕಿಂಗ್ ಸಂದರ್ಭದಲ್ಲಿ ಪ್ಲಾಸ್ಟಿಕ್ ಬಳಕೆ ತ್ಯಜಿಸಿ ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕು. ಇತ್ತೀಚಿನ ದಿನಗಳಲ್ಲಿ ನೈಸರ್ಗಿಕ ಆಹಾರ ಪೂರೈಕೆ ಹೆಸರಿನಲ್ಲೂ ಗ್ರಾಹಕರನ್ನು ವಂಚಿಸುವ ಕೆಲಸ ನಡೆಯುತ್ತಿದೆ. ಇದನ್ನು ತಪ್ಪಿಸಿ ಜನರ ಆರೋಗ್ಯದ ಮೇಲೆ ಪರಿಣಾಮ ಬೀರದ ಅಡುಗೆ ಎಣ್ಣೆಯನ್ನು ಪೂರೈಸಿಸುವುದು ಜತೆಗೆ ಸ್ಥಳೀಯ ರೈತರಿಗೂ ನೆರವಾಗುವುದು ನಮ್ಮ ಉದ್ದೇಶ ಎನ್ನುತ್ತಾರೆ ಬಸವಂತ್.

    ನೈಸರ್ಗಿಕ ಗಾಣದ ಎಣ್ಣೆ ಕೊಳ್ಳಲು ಬಯಸುವವರು www.medhavisuperfoods.com ವೆಬ್ ಸೈಟ್ ಗೆ ಭೇಟಿ ನೀಡಿ ಆರ್ಡರ್ ಮಾಡಬಹುದಾಗಿದೆ.

    Medhavi Superfoods
    #7-1535(A) Jaya Institute Road, Southern Extension, Kollegal-571440
    Phone Number 91-9886889637


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

    admin
    • Website

    Related Posts

    ಕಬ್ಬು ಬೆಳೆಗಾರರ ಸಮಸ್ಯೆ ಸೇರಿ ಹಲವು ಸಮಸ್ಯೆ ಬಗ್ಗೆ ಪ್ರಧಾನಿಗಳ ಜತೆ ಸಿಎಂ ಚರ್ಚೆ: ಸಚಿವ ಪರಮೇಶ್ವರ್

    November 16, 2025

    ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ನಿಧನ

    November 14, 2025

    ಪ್ರತಿ ಟನ್ ಕಬ್ಬಿಗೆ ₹3,300 ದರ ನಿಗದಿಗೆ ತೀರ್ಮಾನ:  ಸಿಎಂ ಸಿದ್ದರಾಮಯ್ಯ

    November 8, 2025

    Comments are closed.

    Our Picks

    ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!

    November 14, 2025

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ತುಮಕೂರು | ನವೆಂಬರ್ 21—22ರಂದು ವಿಜ್ಞಾನ ವಸ್ತು ಪ್ರದರ್ಶನ

    November 19, 2025

    ತುಮಕೂರು: ನಗರದ ಸರಸ್ವತಿಪುರಂ ಬಡಾವಣೆಯಲ್ಲಿರುವ ವಿದ್ಯಾನಿಕೇತನ ಪ್ರೌಢಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ನ.21ರಂದು ಮತ್ತು 22 ರಂದು ಬೆಳಗ್ಗೆ…

    ಸಾಲಬಾಧೆ:  ರೈತ ಸಾವಿಗೆ ಶರಣು

    November 19, 2025

    ನವೆಂಬರ್ 22: ತಲ್ಲಣಿಸದಿರು ಮನವೆ ಕಾರ್ಯಕ್ರಮ

    November 19, 2025

    ವೈ.ಎನ್.ಹೊಸಕೋಟೆಯಲ್ಲಿ ಸಾಂಪ್ರದಾಯಿಕ ಗೋವಿನ ಹಬ್ಬ

    November 19, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.