ಬೆಳಗಾವಿ ತಾಲ್ಲೂಕಿನ ಪಂಥಬಾಳೇಕುಂದ್ರಿಯಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಸಿದ್ಧರಾಮಯ್ಯ, ದೇಶದಲ್ಲಿ ದಿನೇ ದಿನೇ ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಳವಾಗುತ್ತಿದೆ. ಇವತ್ತು ಕೂಡ 50 ರೂ ಹೆಚ್ಚಳ ಮಾಡಿದ್ದಾರೆ. ಮಜ್ಜಿಗೆ ಪೆನ್ಸಿಲ್ ಮೇಲೂ ಟ್ಯಾಕ್ಸ್ ಹಾಕಿದ್ದಾರೆ. ಹೆಣ್ಣು ಮಕ್ಕಳು ಬೆಲೆ ಏರಿಕೆಯಿಂದ ಹೈರಾಣಾಗಿದ್ದಾರೆ ಎಂದು ಕಿಡಿಕಾರಿದರು.
ರೈತರಗೆ 6 ಸಾವಿರ ಕೊಟ್ಟಿದ್ದೇವೆ ಎಂದಿದ್ದಾರೆ. ರೈತರ ರಕ್ತ ಹೀರಿ ಸುಲಿಗೆ ಮಾಡಿದ್ದೀರಿ. ರೈತರ ರಕ್ತ ಹೀರಿ ಸುಲಿಗೆ ಮಾಡಿ ಹಣ ನೀಡುತ್ತಿದ್ದೀರಿ. ಮಿಸ್ಟರ್ ಮೋದಿ ಯಾಕೆ ಸುಳ್ಳು ಹೇಳ್ತಿರಾ..? ಎಂದು ವಾಗ್ದಾಳಿ ನಡೆಸಿದರು.
ದೇಶದಲ್ಲಿ ಮತ್ತೆ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾಗಿದ್ದು ಗೃಹಬಳಕೆಯ ಗ್ಯಾಸ್ ಬೆಲೆ 50 ರೂ., ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ 350 ರೂ. ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ದ ಸಿದ್ಧರಾಮಯ್ಯ ಗುಡುಗಿದ್ದಾರೆ.
ಮುರುಳಿ ಮನೋಹರ್ ಜೋಶಿ, ಅಡ್ವಾಣಿ ಅವರನ್ನ ಸೈಡ್ಲೈನ್ ಮಾಡಿದ್ದು ಯಾರು..? ಬಿಎಸ್ ಯಡಿಯೂರಪ್ಪರನ್ನ ಸಿಎಂ ಸ್ಥಾನದಿಂದ ಕೆಳಗೆ ಇಳಿಸಿದ್ದು ಮೋದಿ ಅಮಿತ್ ಶಾ. ಈಗ ಮೋದಿ ಅಮಿತ್ ಶಾ ನಾಟಕ ಮಾಡುತ್ತಿದ್ದಾರೆ. ಮೋದಿ ಮಹಾದಾಯಿ ಬಗ್ಗೆ ಮಾತನಾಡಿದ್ದಾರಾ..? ದುಡ್ಡುಕೊಟ್ಟು ಜನರನ್ನ ಕರೆತಂದು ರೋಡ್ ಶೋ ಮಾಡಿದರು. ಅಕ್ಸಿಜನ್ ಕೊಡಲಿಲ್ಲ. ನೆರೆ ಬಂದಾಗ ಪ್ರಧಾನಿ ಮೋದಿ ಬರಲಿಲ್ಲ.ಈಗ ವಾರಕ್ಕೊಂದು ರೋಡ್ ಶೋ ಮಾಡುತ್ತಿದ್ದಾರೆ. ಕೆಲವರನ್ನ ಇಟ್ಟುಕೊಂಡು ರಸ್ತೆಯುದ್ದಕ್ಕೂ ಮೋದಿ ಮೋದಿ ಅಂತಾರೆ ಎಂದು ಸಿದ್ಧರಾಮಯ್ಯ ಕಿಡಿಕಾರಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


