ಜಿರಳೆ ಭಾರತದ ಪ್ರತಿಯೊಂದು ಮನೆಯಲ್ಲೂ ಕಂಡುಬರುವ ಅನಗತ್ಯ ಜೀವಿ. ಇದು ಕೊಳಚೆಯಲ್ಲಿ ವಾಸಿಸುತ್ತದೆ. ಈ ಜಿರಳೆಗಳು (Cockroach)ಅನೇಕ ರೋಗಗಳ ಅಪಾಯವನ್ನು ತಂದೊಡ್ಡುತ್ತದೆ. ಮನೆಯ ಅಡಿಗೆ ಮನೆ ಮತ್ತು ಸಿಂಕ್ ಜಿರಳೆಗಳ ನೆಚ್ಚಿನ ಸ್ಥಳಗಳಾಗಿರುತ್ತವೆ. ಅವು ಆಹಾರ ಪದಾರ್ಥಗಳನ್ನು ಕಲುಷಿತಗೊಳಿಸುತ್ತವೆ.
ಜಿರಳೆಗಳನ್ನು ತೊಡೆದುಹಾಕಲು 5 ಸುಲಭ ಮಾರ್ಗಗಳು :
ಜಿರಳೆಗಳ (Cockroach)ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಅವುಗಳನ್ನು ಸಮಯಕ್ಕೆ ಸರಿಯಾಗಿ ನಿಯಂತ್ರಿಸುವುದು ಅವಶ್ಯಕ. ಇಲ್ಲದಿದ್ದರೆ ಫುಡ್ ಪಾಯಿಸನ್ (Food Poisoning)ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.
1. ಲವಂಗ
ಲವಂಗವು (Clove) ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಇದು ಬಾಯಿಯ ದುರ್ವಾಸನೆ, ಶೀತಗಳನ್ನು ಗುಣಪಡಿಸಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಜಿರಳೆಯನ್ನು (Cockroach) ಸಹ ಅದರಿಂದ ಓಡಿಸಬಹುದು ಎನ್ನುವುದು ಬಹುಶಃ ಬಹಳಷ್ಟು ಮಂದಿಗೆ ತಿಳಿದಿರಲಿಕ್ಕಿಲ್ಲ. ಲವಂಗದ ಕೆಲವು ತುಂಡುಗಳನ್ನು ಮನೆಯ ಮೂಲೆಗಳಲ್ಲಿ ಇರಿಸಿದರೆ ಜಿರಳೆಗಳು ಓಡಿಹೋಗುತ್ತವೆ.
2. ಸೀಮೆ ಎಣ್ಣೆ
ಜಿರಳೆಗಳೂ ಸೀಮೆ ಎಣ್ಣೆಯ (Kerosene Oil) ವಾಸನೆಯನ್ನು ಇಷ್ಟಪಡುವುದಿಲ್ಲ ಮತ್ತು ಅವು ಅದರಿಂದ ಓಡಿಹೋಗುತ್ತವೆ. ಮನೆಯಲ್ಲಿ ಜಿರಳೆಗಳು ಕಾಣಿಸಿಕೊಳ್ಳದಂತೆ, ನೆಲ ಒರೆಸುವಾಗ ಸ್ವಲ್ಪ ಸೀಮೆ ಎಣ್ಣೆಯನ್ನು ಸೇರಿಸಿಕೊಳ್ಳಿ. ಮನೆಯ ಮೂಲೆ ಮೂಲೆಗೂ ಇದನ್ನೂ ಸಿಂಪಡಿಸಿ. ಇಲ್ಲಿ ಜಿರಳೆಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತವೆ.
3. ಪಲಾವ್ ಎಲೆ
ಆಹಾರದ ರುಚಿಯನ್ನು ಹೆಚ್ಚಿಸಲು ಪಲಾವ್ ಎಲೆಯನ್ನು (Bay leaf) ಬಳಸಲಾಗುತ್ತದೆ, ಆದರೆ ಜಿರಳೆಗಳನ್ನು ತೊಡೆದುಹಾಕಲು ಇದು ರಾಮಬಾಣ. ಜಿರಳೆಗಳು ಈ ಎಲೆಗಳ ವಾಸನೆಯನ್ನು ಸಹಿಸುವುದಿಲ್ಲ. ಈ ಎಲೆಗಳನ್ನು ಪುಡಿಮಾಡಿ ಮತ್ತು ಅವುಗಳನ್ನು ಮನೆಯಲ್ಲಿ ಅಲ್ಲಲ್ಲಿ ಇರಿಸಿದರೆ ಮನೆಯೊಳಗೆ ಜಿರಳೆಗಳು ಬರುವುದಿಲ್ಲ.
4. ಹೌಸ್ ಕ್ಲೀನಿಂಗ್
ಜಿರಳೆಗಳು ಕೊಳಕು ಸ್ಥಳಗಳಲ್ಲಿ ವಾಸಿಸುತ್ತವೆ ಮತ್ತು ಅವುಗಳು ತಮ್ಮ ಮೊಟ್ಟೆಗಳನ್ನು ಇಡುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಅಡುಗೆ ಮನೆಯ ಸಿಂಕ್, ಬಾತ್ ರೂಂ, ಮನೆಯ ಮೂಲೆಗಳನ್ನು ಸ್ವಚ್ಛಗೊಳಿಸಿದರೆ ಅಲ್ಲಿ ಜಿರಳೆ ಕಾಣಿಸುವುದಿಲ್ಲ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB