ತುಮಕೂರು: ಬಹುದಿನಗಳಿಂದ ಅಭಿವೃದ್ಧಿ ಕಾಣದೆ ಹಾಗೆಯೇ ಉಳಿದಿದ್ದ ಸುರಂಗ ಮಾರ್ಗ, ನಗರದ ಉಪ್ಪಾರಹಳ್ಳಿ ಗೇಟ್ ರೈಲ್ವೇ ಅಂಡರ್ ಪಾಸ್ ಇದೀಗ ಉದ್ಘಾಟನೆಗೊಂಡಿತು.
ಶಾಸಕ ಜ್ಯೋತಿ ಗಣೇಶ್ ಅವರು ಉಪ್ಪಾರಹಳ್ಳಿ ಗೇಟ್ ರೈಲ್ವೇ ಅಂಡರ್ ಪಾಸ್ ಉದ್ಘಾಟನೆ ನೆರವೇರಿಸಿದರು. ಮೇಯರ್ ಬಿ.ಜಿ.ಕೃಷ್ಣಪ್ಪ ಉಪಸ್ಥಿತರಿದ್ದರು.
ಪಾಲಿಕೆ ಸದಸ್ಯರಾದ ಗಿರಿಜಾ ಧನಿಯಾಕುಮಾರ್ ರವರ ಅವಿರತ ಶ್ರಮದ ಫಲವಾಗಿ ಅಂಡರ್ ಪಾಸ್ ಸಾರ್ವಜನಿಕ ಸೇವೆ ಮುಕ್ತವಾಗಿದೆ.
ಈ ಅಂಡರ್ ಪಾಸ್ ನಿಂದ ಎಸ್.ಎಸ್.ಪುರಂ, ಉಪ್ಪಾರಹಳ್ಳಿ, ವಿಜಯನಗರ ಶಿವಮೂಕಾಂಬಿಕಾ ನಗರ, ಮೊದಲಾದ ಬಡಾವಣೆಗಳ ನಾಗರಿಕರಿಗೆ ಅನುಕೂಲವಾಗಲಿದೆ.
ವರದಿ: ರಾಜೇಶ್ ರಂಗನಾಥ್, ವಿಶೇಷ ಪ್ರತಿನಿಧಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy