ತುಮಕೂರು: ಮೊದಲ ಬಾರಿಗೂ ಈ ಬಾರಿಗೂ ಸಿದ್ದರಾಮಯ್ಯ ಸರ್ಕಾರದಲ್ಲಿ ವ್ಯತ್ಯಾಸ ಇದೆ, ಶಿಕ್ಷಣ ಕ್ಷೇತ್ರದಲ್ಲಿ ಅಜಗಜಾಂತರ ವ್ಯತ್ಯಾಸ ಆಗಿದೆ, ಶಿಕ್ಷಣ ಕ್ಷೇತ್ರದಲ್ಲಿ ಏನು ತಿಳಿಯದವರನ್ನ ಸಚಿವರನ್ನಾಗಿ ಮಾಡಿದೆ ಎಂದು ಮಾಜಿ ಶಾಸಕ ಸಿ.ಟಿ.ರವಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಆಗ್ನೇಯ ಶಿಕ್ಷಕರ ಕ್ಷೇತ್ರದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಎಸ್ ಎಸ್ ಎಲ್ ಸಿ ಮಕ್ಕಳಿಗೆ 20 Marks ಗ್ರೇಸ್ ಮಾರ್ಕ್ಸ್ ನೀಡಿದೆ. ಊರು ಕೊಳ್ಳೆ ಹೊಡೆದ ಮೇಲೆ ಬಾಗಿಲು ಹಾಕಿದ್ರು ಅನ್ನೊ ಹಾಗೇ. ಎಕ್ಸಾಂ ಆಗಿ ರಿಸಲ್ಟ್ ಬಂದ್ಮೇಲೆ ಸಿದ್ದರಾಮಯ್ಯ ಯಾವನ್ನಯ್ಯ ಗ್ರೇಸ್ ಮಾರ್ಕ್ಸ್ ಕೊಡೊಕೆ ಹೇಳಿದ್ದು ಅಂದ್ರು ಎಂದು ಟೀಕಿಸಿದರು.
ಶಿಕ್ಷಣ ಭವಿಷ್ಯ ಭಾರತವನ್ನ ಕಟ್ಟಬೇಕು, NEP ಪರವಾಗಿ ಆಗಿದ್ದ ಕರ್ನಾಟಕ ಸರ್ಕಾರ ಅನುಮೋದನೆ ನೀಡಿತ್ತು. ಆದರೆ ಈಗ NEP ತರಲ್ಲ SEP ತರ್ತಿವಿ ಅಂದ್ರು. ಇದರಲ್ಲಿ ಏನು ಕೆಟ್ಟದ್ದು ಇದೆ. ಶಿಕ್ಷಣ ಸಚಿವರಿಗೆ ಕನ್ನಡ ಓದಲು ಬರಲ್ಲ,ಅವರೇ ಒಪ್ಪಿಕೊಂಡಿದ್ದಾರೆ. 1983 ರಲ್ಲಿ ಸಿದ್ದರಾಮಯ್ಯ ಗೆದ್ದಾಗ ಕನ್ನಡ ಕಾವಲು ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ರು. ಅವರು ಮಾಡಿದ ಸಚಿವರಿಗೆ ಕನ್ನಡ ಸರಿಯಾಗಿ ಓದಲು ಬರೆಯಲು ಬರಲ್ಲ. ಅಬಕಾರಿನೋ ಬೇರೆ ಏನೋ ಖಾತೆ ಕೊಟ್ಟಿದ್ದರೆ ನಮಗೆ ಬೇಜಾರು ಇರುತ್ತಿರಲಿಲ್ಲ ಎಂದು ವ್ಯಂಗ್ಯವಾಡಿದರು.
ಶಿಕ್ಷಣ ಕ್ಷೇತ್ರ ಹಳ್ಳ ಹಿಡಿದಿದೆ. ತುಘಲಕ್ ನೀತಿ ಮಾಡಿದ್ದಾರೆ. ಎಕ್ಸಾಂನಲ್ಲಿ ಸಿಸಿಟಿವಿ ಹಾಕಲಿ ಬೇಡ ಅನ್ನಲ್ಲ. ಮಕ್ಕಳು ಕಾಪಿ ಹೊಡೆದರೆ ಶಿಕ್ಷಕರಿಗೆ ಶಿಕ್ಷೆ, ನಾವು ಬರೆಯುವಾಗ ಮಕ್ಕಳನ್ನ ಡಿಬಾರ್ ಮಾಡುತ್ತಿದ್ದರು. ಈಗ ಶಿಕ್ಷಕರಿಗೆ ಶಿಕ್ಷೆ ನೀಡಲಾಗುತ್ತಿದೆ, ಇದು ತುಘಲಕ್ ನೀತಿ ಎಂದು ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.
ಅನುದಾನಿತ ಶಾಲೆಗಳಿಗೆ ಮೂರು ತಿಂಗಳಿನಿಂದ ಸಂಬಳ ಇಲ್ಲ. ಖಜಾನೆಯಲ್ಲಿ ಹಣ ಇದೆ ಅಂತಾರೆ ಶಿಕ್ಷಕರಿಗೆ ಸಂಬಳ ಇಲ್ಲ. 7ನೇ ವೇತನ ಆಯೋಗ ಕಮಿಷನ್ 17% ಬಸವರಾಜ್ ಬೊಮ್ಮಾಯಿ ಮಾಡಿದ್ದರು. ನಮ್ಮ ಸರ್ಕಾರ ಬಂದ ಕೂಡಲೇ ops ಮಾಡ್ತಿವಿ ಅಂದರು. ಒಂದು ವರ್ಷ ಆದರೂ ಜಾರಿ ಮಾಡಿದ್ದರಾ? ಶಿಕ್ಷಕರ ಜೊತೆ ಮಕ್ಕಳ ಭವಿಷ್ಯ ಜೊತೆ ಸರ್ಕಾರ ಆಟವಾಡುತ್ತಿದೆ. ಹೀಗಾಗಿ ಎನ್ ಡಿಎ ಅಭ್ಯರ್ಥಿ ಗಳನ್ನ ಗೆಲ್ಲಿಸಿಬೇಕಿದೆ ಎಂದರು.
ಆರಕ್ಕೆ ಆರು ಎನ್ ಡಿ ಎ ಅಭ್ಯರ್ಥಿ ಗಳನ್ನ ಗೆಲ್ಲಿಸಬೇಕಿದೆ. 4 ರಂದು ಲೋಕಸಭಾ ಚುನಾವಣೆ ಫಲಿತಾಂಶ ಬರುತ್ತೆ. ದಾವಣಗೆರೆಯಲ್ಲಿ ಯಾರೋ ಒಂದು ಮನವಿ ಮಾಡಿದ್ರು. ನಾವು ಏನಾದ್ರು ಸಂಬಳ ಹೆಚ್ಚು ಮಾಡೋಕೋ ಅಥವಾ ಅನುದಾನಕ್ಕೋ ಅಂದುಕೊಂಡ್ವಿ. ಆದರೇ ಅವರು ಏನಾದ್ರೂ ಮಾಡಿ ಶಿಕ್ಷಣ ಸಚಿವರನ್ನ ಬದಲಾಯಿಸಿ ಅಂದ್ರು. ರಿಟೈಲ್ ಆಗಿ ಒಬ್ಬೊಬ್ಬರನ್ನ ಬದಲಾಯಿಸೋ ಬದಲು. ಹೋಲ್ ಸೆಲ್ ಆಗಿ ಎಲ್ಲರನ್ನ ಬದಲಾಯಿಸಿಬಿಡೋಣ. ಶಿಕ್ಷಣ ಸಚಿವರನ್ನ ಬದಲಾಯಿಸೋದಲ್ಲ ಎಂಟೈರ್ ಸರ್ಕಾರನೇ ಬದಲಾಯಿಸಿಬಿಡೋಣ. ಹೇಗೋ ಜೂ.4 ರಂದು ಲೋಕಸಭಾ ಚುನಾವಣೆಯ ರಿಸಲ್ಟ್ ಬರುತ್ತೆ. ರಿಸಲ್ಟ್ ಬಳಿಕ ಸರ್ಕಾರವನ್ನೇ ಬದಲಾಯಿಸಿಬಿಡೋಣ ಎಂದರು.
ವೈದ್ಯರು, ಶಿಕ್ಷಕರ ವರ್ಗಾವಣೆಗೂ ಹಣ ಕೇಳುತ್ತಿದ್ದಾರಂತೆ. ಇದೆಲ್ಲಾ ಬದಲಾವಣೆಗೆ ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣ ಸ್ವಾಮಿಯನ್ನ ಗೆಲ್ಲಿಸಿ ಎಂದು ಅವರು ಇದೇ ವೇಳೆ ಮನವಿ ಮಾಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA