ಪಾವಗಡ: ತಾಲ್ಲೂಕಿನ ಗುಂಡಾರ್ಲಹಳ್ಳಿ ಗ್ರಾಮದ ಎಂಜಿಎಂ ಪ್ರೌಢಶಾಲೆಯಲ್ಲಿ 2019–20 ನೇ ಸಾಲಿನಲ್ಲಿ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡಿದ ಕೇಶವ ಕೆ.ಎನ್.ಅವರು ಪ್ರಸ್ತುತ ಅದೇ ಶಾಲೆಯಲ್ಲಿ ಈಗ 10ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಯನ್ನು ಸೋಮವಾರದಂದು ವಿತರಣೆ ಮಾಡಿದರು.
ಬಳಿಕ ಕೇಶವ ಕೆ.ಎನ್. ಅವರು ಮಾತನಾಡಿ, ನಾನು ಈಗ ಕರ್ನಾಟಕ ರಾಜ್ಯ ಸಹಕಾರ, ಮಹಾ ಮಂಡಳಿ ನಿಯಮಿತ, ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದೇನೆ. ಈ ಕಲಿಕಾ ಸಾಮಗ್ರಿಯನ್ನು ವಿತರಣೆ ಮಾಡುವ ಉದ್ದೇಶ ಏನಂದ್ರೆ, ನಾನು ಓದಿದಂತಹ ಶಾಲೆಗೆ ನನ್ನ ಕೈಲಾದ ಸಹಾಯವನ್ನು ಮಾಡಬೇಕು. ನೀವು ಕೂಡ ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ಮುಂದೆ ಬರುವ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶವನ್ನು ಪಡೆದು. ನಮ್ಮ ಶಾಲೆಗೆ, ನಮ್ಮ ಗುರುಗಳಿಗೆ, ನಿಮ್ಮ ಊರಿಗೆ ಮತ್ತು ನಿಮ್ಮ ತಂದೆ — ತಾಯಿಗೆ ಒಳ್ಳೆ ಹೆಸರು ತರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಶಿವಣ್ಣ, ಗಣಿತ ಶಿಕ್ಷಕರಾದ ಚಂದ್ರಶೇಖರಯ್ಯ,, ಹಿಂದಿ ಶಿಕ್ಷಕರಾದ ಕಾಳ ನಾಯಕ, ಸಮಾಜ ವಿಜ್ಞಾನ ಶಿಕ್ಷಕರಾದ ದತ್ತಾತ್ರೇಯ, ವಿಜ್ಞಾನ ಶಿಕ್ಷಕರಾದ ಶ್ರೀನಿವಾಸ್, ಇಂಗ್ಲಿಷ್ ಶಿಕ್ಷಕರಾದ ಸೋಮನಾಥ್ ಎಂ.ಎಸ್, ದೈಹಿಕ ಶಿಕ್ಷಕರಾದ ವೆಂಟಚಲಪತಿ ವೃತ್ತಿ ಶಿಕ್ಷಕರಾದ ಈರಣ್ಣ ಹೆಚ್. ಹಾಗೂ ವಿದ್ಯಾರ್ಥಿಗಳು ಇದ್ದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4