ತುಮಕೂರು : ಎಕ್ಸ್ಪ್ರೆಸ್ ಕೆನಾಲ್ ಮಾಡೋದ್ರಿಂದ ನಮ್ಮ ಜಿಲ್ಲೆಗೆ ಅನ್ಯಾಯ ಆಗಲಿದೆ. ವಿರೋಧ ಪಕ್ಷದ ಹೋರಾಟಕ್ಕೆ ನನ್ನ ಸಹಮತ ಇದೆ ಎಂದು ಗುಬ್ಬಿ ಕಾಂಗ್ರೆಸ್ ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಅವರು ಎಕ್ಸ್ಪ್ರೆಸ್ ಕೆನಾಲ್ ಯೋಜನೆಯನ್ನು ನಾನು ಹಿಂದೆಯೂ ವಿರೋಧಿಸಿದ್ದೇನೆ. ಈಗಲೂ ವಿರೋಧಿಸುತ್ತೇನೆ ಎಂದರು.
ಟೆಕ್ನಿಕಲ್ ಕಮಿಟಿ ವರದಿ ಇನ್ನೂ ಬಿಡುಗಡೆ ಆಗಿಲ್ಲ. ಕಮಿಟಿ ವರದಿ ಆಧರಿಸಿ ನಾವೂ ಹೋರಾಟ ರೂಪಿಸುತ್ತೇವೆ ಎಂದರು.
ನಾನು ಸರ್ಕಾರದ ಭಾಗ ಆಗಿರೋದ್ರಿಂದ ನಮ್ಮದೇ ಚೌಕಟ್ಟಿನಲ್ಲಿ ವಿರೋಧಿಸುತ್ತೇನೆ ಎಂದರು. ವಿರೋಧ ಪಕ್ಷದವರು ಹೋರಾಟ ಮಾಡಲಿ. ಆದರೆ ರಕ್ತಪಾತ ಆಗುತ್ತದೆ ಎಂದು ಜನರನ್ನು ಎತ್ತಿಕಟ್ಟುವ ಕೆಲಸ ಬೇಡ ಎಂದರು.
ಡಿಸಿಎಂ ಡಿಕೆಶಿ ಪ್ರತಿಕ್ರಿಯೆಗೆ ಸಹಮತ ಸೂಚಿಸಿದ ಎಸ್.ಆರ್.ಶ್ರೀನಿವಾಸ್, ಹೌದು ರಕ್ತಪಾತ ಆಗುತ್ತದೆ ಅನ್ನುವಂತ ಮಾತು ವಿರೋಧ ಪಕ್ಷದವರು ಹೇಳಬಾರದಿತ್ತು. ಜನರನ್ನು ಎತ್ತಿಕಟ್ಟುವ ಕೆಲಸಕ್ಕೆ ಡಿಸಿಎಂ ವಿರೋಧಿಸಿದ್ದಾರೆ ಎಂದರು.
ಗಲಭೆ ದೊಂಬಿ ಆದರೆ ಸರ್ಕಾರದ ಕೆಲಸ ಸರ್ಕಾರದ ಮಾಡುತ್ತದೆ ಎಂದು ಹೇಳಿದ್ದಾರೆಯೇ ಹೊರತು, ಎಕ್ಸ್ಪ್ರೆಸ್ ಕೆನಾಲ್ ಮಾಡಿಯೇ ಮಾಡುತ್ತೇವೆ ಎಂದು ಹೇಳಿಲ್ಲ ತಿಳಿಸಿದ್ದಾರೆ.ಎಕ್ಸ್ಪ್ರೆಸ್ ಕೆನಾಲ್ ಯೋಜನೆ ರದ್ದಾಗುವ ಎಲ್ಲಾ ವಿಶ್ವಾಸ ನನಗಿದೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296