ಬಾಗಲಕೋಟ: ಜಿಲ್ಲೆಯ ಜಮಖಂಡಿ ನಗರದ ಬಸ್ ನಿಲ್ದಾಣ ಮಳೆಯ ಪರಿಣಾಮ ನದಿಯಂತಾದ ಘಟನೆ ನಡೆದಿದ್ದು, ರಸ್ತೆಯಲ್ಲೇ ನೀರು ಹರಿದು ವಾಹನ ಸವಾರರು, ಸಾರ್ವಜನಿಕರು ಪರದಾಡುವಂತಾಗಿದೆ.
ದಿವಂಗತ ಶಾಸಕ ಸಿದ್ದು ನ್ಯಾಮಗೌಡ ಅವರ ಕಾಲದಲ್ಲಿ ನಿರ್ಮಾಣವಾದ ಜಮಖಂಡಿ ಬಸ್ ನಿಲ್ದಾಣದಲ್ಲಿ ಪ್ರತೀ ವರ್ಷ ನೀರು ರಸ್ತೆಯಲ್ಲೇ ಹರಿಯುವುದು ಮತ್ತು ರಸ್ತೆಯಲ್ಲಿ ನೀರು ನಿಂತು ಈಜುಕೊಳದಂತೆ ಮಾರ್ಪಡುವುದು ಸರ್ವೇ ಸಾಮಾನ್ಯ ಎಂಬಂತಾಗಿದೆ.
ಸತತವಾಗಿ ಮಳೆ ಸುರಿದರೆ ಸಾಕು, ಈ ರಸ್ತೆ ನದಿಯಂತಾಗಿ ಬಿಡುತ್ತದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರವೇ ಇಲ್ಲವೇ ಎನ್ನುವ ಪ್ರಶ್ನೆಗಳು ಕೂಡ ಇದೀಗ ಕೇಳಿ ಬಂದಿದೆ.
ಬಸ್ ನಿಲ್ದಾಣದೊಳಗೆ ಇಂತಹದ್ದೊಂದು ಸಮಸ್ಯೆ ಇದ್ದರೂ ಬಸ್ ನಿಲ್ದಾಣ ನಿರ್ವಹಣೆ ಮಾಡುವವರು ಈ ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಿಲ್ಲ. ಇದಕ್ಕೆ ಯಾರು ಜವಾಬ್ದಾರಿ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ವರದಿ: ಬಂದೇನವಾಜ ನದಾಪ , ಜಮಖಂಡಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5