ಏಕದಾಂಪತ್ಯ ನಿರ್ಧಾರ ಮಾಡಿರುವ ವಡೋದರದ ಯುವತಿ ಕ್ಷಮಾ ಬಿಂಧು ನಿರ್ಧಾರ ಹುಚ್ಚುತನದ್ದು ಎಂದು ಟೀಕಿಸಿರುವ ಬಿಜೆಪಿ ಮುಖಂಡರು, ಆಕೆ ದೇವಸ್ಥಾನದಲ್ಲಿ ಮದುವೆಯಾಗಲು ಬಿಡುವುದಿಲ್ಲ ಎಂದು ಘೋಷಿಸಿದ್ದಾರೆ. ಸಮಾಜಶಾಸ್ತ್ರದಲ್ಲಿ ಪದವಿ ಪಡೆದು ಖಾಸಗಿ ಕಂಪೆನಿಯಲ್ಲಿ ಹಿರಿಯ ನೇಮಕಾತಿ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ಕ್ಷಮಾರ ತಂದೆ ದಕ್ಷಿಣ ಆಫ್ರಿಕಾದಲ್ಲಿ ಇಂಜಿನಿಯರ್ ಆಗಿದ್ದು, ತಾಯಿ ಅಹಮದಾಬಾದ್‍ನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಪ್ರತಿಯೊಂದು ಹುಡುಗಿಗೂ ತನ್ನ ಮದುವೆಯ ಬಗ್ಗೆ ಕನಸುಗಳು ಇರುತ್ತವೆ. ವರ ಕುದುರೆಯ ಮೇಲೆ ಬಂದು ಆಕೆಯನ್ನು ಕರೆದುಕೊಂಡು ಹೋಗಬೇಕು ಎಂಬ ನಾನಾ ರೀತಿಯ ಕಲ್ಪನೆಗಳಿರುತ್ತವೆ. ಆದರೆ ಕ್ಷಮಾ ಭಿನ್ನವಾದ ಆಲೋಚನೆ ಹೊಂದಿದ್ದಾಳೆ. ಅಂದರೆ ಆಕೆ ಬೇರೆಯವರನ್ನು ಮದುವೆಯಾಗಲು ಇಷ್ಟ ಪಟ್ಟಿಲ್ಲ. ಬದಲಾಗಿ ತನ್ನಲ್ಲೇ ತನ್ನ ವರನನ್ನು ಕಂಡುಕೊಂಡಿದ್ದಾಳೆ. ಬಹಳ ದಿನಗಳಿಂದ ತನ್ನಲ್ಲೇ ಉಳಿದುಕೊಂಡಿದ್ದ ಆಲೋಚನೆಗಳನ್ನು ಜಾರಿಗೆ ತರಲು ಅಂಜಿ ಮೌನವಾಗಿದ್ದಳು. ಅಂತಿಮವಾಗಿ ದೃಢ ನಿರ್ಧಾರ ಮಾಡಿ ಏಕದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾಳೆ.
ಅಂತಿಮವಾಗಿ ಜೂನ್ 11ರಂದು ವಡೋದರದ ದೇವಸ್ಥಾನದಲ್ಲಿ ಎಲ್ಲಾ ಸಂಪ್ರದಾಯಗಳ ಪ್ರಕಾರ ಮದುವೆಯಾಗಲು, ಗೋವಾಕ್ಕೆ ಮಧುಚಂದ್ರಕ್ಕೆ ಹೋಗಲು ನಿರ್ಧರಿಸಿದ್ದಾರೆ. ಆಕೆಯ ನಿರ್ಧಾರ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿಯ ಅಹಮದಾಬಾದ್‍ನ ಬಿಜೆಪಿ ನಗರ ಘಟಕದ ಅಧ್ಯಕ್ಷೆ ಸುನೀತಾ ಶುಕ್ಲಾ ಯುವತಿಯ ನಿರ್ಧಾರವನ್ನು ವಿರೋಧಿಸಿದ್ದಾರೆ.
ಹಿಂದು ಧರ್ಮದಲ್ಲಿ ಏಕದಾಂಪತ್ಯ ಪದ್ಧತಿಗೆ ಅವಕಾಶ ಇಲ್ಲ. ಯುವಕ-ಯುವಕನನ್ನೇ, ಯುವತಿ ಯುವತಿಯನ್ನೇ ಮದುವೆಯಾಗಲು ಅವಕಾಶ ಇಲ್ಲ. ಅನ್ಯಲಿಂಗ ದಾಂಪತ್ಯ ರೂಢಿ, ಸಂಪ್ರದಾಯವಾಗಿದೆ.
ಕ್ಷಮಾಳ ರೀತಿ ಏಕದಾಂಪತ್ಯಕ್ಕೆ ಮುಂದಾದರೆ ಹಿಂದುಗಳ ಜನಸಂಖ್ಯೆ ಕಡಿಮೆಯಾಗಲಿದೆ ಎಂದು ಆತಂಕ ವ್ಯಕ್ತ ಪಡಿಸಿದ್ದಾರೆ.ಆಕೆ ನಿರ್ಧಾರ ಹುಚ್ಚುತನದ್ದು, ಮದುವೆಯಾಗಲು ದೇವಸ್ಥಾನವನ್ನು ಆಯ್ಕೆ ಮಾಡಿಕೊಂಡಿರುವ ಆಕೆಯ ನಿರ್ಧಾರವನ್ನು ನಾನು ವಿರೋಧಿಸುತ್ತೇನೆ. ಆಕೆ ಹಿಂದು ಧರ್ಮದ ವಿರುದ್ಧವಾಗಿ ಯಾವುದೇ ಕ್ರಮಕ್ಕೆ ಮುಂದಾದರೂ ನಾವು ವಿರೋಧಿಸುತ್ತೇನೆ. ಕಾನೂನು ತನ್ನ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB