ಸರಗೂರು: ತಾಲ್ಲೂಕು ವಿದ್ಯುತ್ ದೀಪಾಲಂಕಾರ ಹಾಗೂ ಧ್ವನಿವರ್ಧಕ ಮತ್ತು ಶಾಮಿಯಾನ ಮಾಲಿಕರ ಸಂಘದ ನೂತನ ಅಧ್ಯಕ್ಷರಾಗಿ ವಾಸುಕಿ ನಾಗೇಶ್ ವರನ್ನು ಸಂಘದ ಪದಾಧಿಕಾರಿಗಳು ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು.
ಪಟ್ಟಣದ ಶಿವರಾತ್ರಿ ಶಿವಾನುಭವ ಮಂದಿರದ ಸೋಮವಾರದಂದು ಹೊರಾಂಗಣದಲ್ಲಿ ನಡೆಸಲಾದ ಪೂರ್ವಭಾವಿ ಸಭೆಯಲ್ಲಿ ಸರಗೂರು ತಾಲ್ಲೂಕು ವಿದ್ಯುತ್ ದೀಪಾಲಂಕಾರ ಹಾಗೂ ಧ್ವನಿವರ್ಧಕ ಮತ್ತು ಶಾಮಿಯಾನ ಮಾಲಿಕರು ಸೇರಿ ವಾಸುಕಿ ನಾಗೇಶ್ ರವರನ್ನು ಸರ್ವಾನುಮತದಿಂದ ಸಂಘದ ಅಧ್ಯಕ್ಷರಾಗಿ ಆಯ್ಕೆ ಮಾಡಿದರು,
ಗೌರವಾಧ್ಯಕ್ಷರಾಗಿ ಅನ್ನಪೂರ್ಣಶ್ವರಿ ಶಾಮಿಯಾನ ಮಾಲಿಕರಾದ ಎಸ್.ನಾರಾಯಣ್, ಉಪಾಧ್ಯಕ್ಷರಾಗಿ ಆದಿಶಕ್ತಿ ಗಣೇಶ್, ಬಸಾಪುರ ರೇವಣ್ಣ, ನ್ಯಾಷನಲ್ ಶಾಮಿಯಾನ ರಾಹೀಲ್ ಪಾಷ, ಕಾರ್ಯದರ್ಶಿ ಆಗತ್ತೂರು ಪಿ.ಜವರನಾಯಕ, ಸಹಕಾರ್ಯದರ್ಶಿ ಜನನಿ ವಿಜಯ್ ಕುಮಾರ್, ಎಸ್. ಖಜಾಂಚಿ ಚೌಡೇಶ್ವರಿ ರಂಗಸ್ವಾಮಿ, ನಿರ್ದೆಶಕರಾಗಿ ಇಟ್ನಾ ಸಿದ್ದನಾಯಕ, ಮುಳ್ಳೂರು [ಕಡಜೆಟ್ಟ]ಅಶ್ವತ್ ನಾರಾಯಣ, ಮುಳ್ಳೂರು ಪ್ರಕಾಶ್, ಮಹೇಶ್, ಬಿ.ಮಟಕೆರೆ ಮಂಜು, ಹಾಗೂ ನಂದಿಗೌಡ್ರು, ಬಸಾಪುರ ಶಿವಣ್ಣ, ಕಬಿನಿ ಸುರೇಂದ್ರ, ಶಾಂತಿಪುರ ಹರೀಶ್, ಹೊಸ ಬಿದರಹಳ್ಳಿ ಚಿನ್ನಯ್ಯ, ಬೆದ್ದಲಪುರ ಸೋಮೇಶ, ಕೊತ್ತೇಗಾಲ ನಂದಿ, ಹೊಸಬೀರ್ವಾಳ್ ಕೇಬಲ್ ಕುಮಾರ್, ಬಿದರಹಳ್ಳಿ ಕುಮಾರ್, ಕೊತ್ತೇಗಾಲ ನಂದೀಶ್ ಬುದ್ದಿ, ಆಗತ್ತೂರು ಎ.ಸಿ.ನಾಗರಾಜು, ಕೊತ್ತೇಗಾಲ ರಮೇಶ್, ಕಂದೇಗಾಲ ಸಚ್ಚೀನ್, ಮೂಳ್ಳೂರು ಹುಂಡಿ ಸತೀಶ್, ತೋರವಳ್ಳಿ ಸಿದ್ದಪ್ಪಾಜಿ, ನಿಲವಾಗಿಲು ನಾಗ, ಕಲ್ಲಾಂಬಾಳು ಸುರೇಶ್, ಬಡಗಲಪುರ ವೆಂಕಟೇಶ್, ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


