ಕಾರ್ಮೆಲರಾಮ್-ಗುಂಜೂರು ಲೆವೆಲ್ ಕ್ರಾಸಿಂಗ್‌ನಲ್ಲಿ ಮೇಲ್ವೇತುವೆ ಕಾಮಗಾರಿಯನ್ನು ನೈರುತ್ಯ ರೈಲ್ವೆ ಆರಂಭಿಸಿದೆ.ವಾಹನ ದಟ್ಟಣೆಯಿಂದ ನಿತ್ಯ ಗಿಜಿಗುಟ್ಟುವ ಈ ರಸ್ತೆಯು ರೈಲ್ವೆ ಹಳಿ ದಾಟಿ ಹೋಗಬೇಕು. ಹಲವು ರೈಲುಗಳು ಇಲ್ಲಿ ಸಂಚರಿಸುವುದರಿಂದ ವಾಹನಗಳು ಕಾಯುವುದು ಅನಿವಾರ್ಯವಾಗಿತ್ತು. ಇದನ್ನು ತಪ್ಪಿಸಲು ಮೇಲ್ಸ್ತುವೆ ನಿರ್ಮಿಸಬೇಕು ಎಂದು ಸ್ಥಳೀಯರು ಹಲವು ವರ್ಷಗಳಿಂದ ಆಗ್ರಹಿಸುತ್ತಾ ಬಂದಿದ್ದರು.
ಇದೀಗ ಅದಕ್ಕೆ ಸ್ಪಂದನೆ ಸಿಕ್ಕಿದೆ. 280 ಮೀಟರ್ ಉದ್ದ ಮತ್ತು 7.5 ಮೀಟರ್ ಅಗಲ ಇರುವ ದ್ವಿಪಥ ಮೇಲ್ವೇತುವೆ ನಿರ್ಮಾಣಗೊಳ್ಳಲಿದೆ. 2025ರ ಏಪ್ರಿಲ್‌ವರೆಗೆ ಕಾಮಗಾರಿ ಅವಧಿ: ಕಾರ್ಮೆಲರಾಮ್-ಗುಂಜೂರು ಜಂಕ್ಷನ್‌ನಲ್ಲಿ 1 30 ಕೋಟಿ ವೆಚ್ಚದಲ್ಲಿ ರಸ್ತೆ ಮೇಲ್ಲೇತುವೆ ಕಾಮಗಾರಿ ನಡೆಸಲಾಗುತ್ತಿದೆ. 2025ರ ಏಪ್ರಿಲ್ ಒಳಗೆ ಕಾಮಗಾರಿ ಮುಗಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೈರುತ್ಯ ರೈಲ್ವೆ ಕಾಮಗಾರಿ ನಿರ್ವಹಣೆ ಮಾಡಿದರೆ, ಸಂಚಾರ ಪೊಲೀಸರು ವಾಹನಗಳ ಸಂಚಾರಕ್ಕೆ ಬದಲಿ ವ್ಯವಸ್ಥೆಯನ್ನು ಮಾಡಿದೆ. ಗುಂಜೂರು ಭಾಗದಲ್ಲಿ ಸೌತ್ ಇಂಡಿಯನ್ ಬ್ಯಾಂಕ್ ಬಳಿಯಿಂದ ಕಾಮಗಾರಿ ಆರಂಭಗೊಂಡಿದೆ.
ರಸ್ತೆ ಬದಲಾವಣೆ: ವರ್ತೂರು ರಸ್ತೆಯಿಂದ ಸರ್ಜಾಪುರ ರಸ್ತೆ ಕಡೆಗೆ ಹೋಗುವ ವಾಹನಗಳು ಕಾರ್ಮೆಲರಾಮ್ 100 ಅಡಿ ರಸ್ತೆ ಕಡೆಗೆ ಸಾಗಬೇಕು. ಸರ್ಜಾಪುರ ರಸ್ತೆಯಿಂದ ವರ್ತೂರು ಕಡೆಗೆ ಹೋಗುವ ವಾಹನಗಳು ಕಾರ್ಮೆಲರಾಮ್ 100 ಅಡಿ ರಸ್ತೆ, ಗುಂಜೂರು ರಸ್ತೆ ಮೂಲಕ ಹೋಗಬೇಕು.
ಕಾಮಗಾರಿಗಾಗಿ ರಸ್ತೆಯನ್ನು ಮುಚ್ಚಲಾಗಿದ್ದು, ಪರ್ಯಾಯ ರಸ್ತೆಗಳ ಬಗ್ಗೆ ಸೂಚನಾ ಫಲಕ ಅಳವಡಿಸಲಾಗಿದೆ. ಇದನ್ನು ನೋಡಿಕೊಂಡು ವಾಹನಗಳನ್ನು ಚಾಲಕರು ಚಲಾಯಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


