ಉತ್ತರಪ್ರದೇಶದ ಶಾಮ್ಲಿಯಲ್ಲಿ ಕುತೂಹಲಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ವ್ಯಕ್ತಿಯೊಬ್ಬ ಎಮ್ಮೆ ಕರುವನ್ನು ಕಳ್ಳತನ ಮಾಡಿರುವ ಆರೋಪ ಮಾಡಿದ್ದಾನೆ. ಆದರೆ, ಯಾರ ಮೇಲೆ ಆರೋಪ ಮಾಡಲಾಗಿದೆಯೋ ಆ ವ್ಯಕ್ತಿ ಕೂಡಾ ಆರೋಪವನ್ನು ತಳ್ಳಿ ಹಾಕಿದ್ದಾನೆ. ಹೀಗಾಗಿ ಪೊಲೀಸರು ಸತ್ಯವನ್ನು ಕಂಡು ಹಿಡಿಯಲು ಮಾರ್ಗವೊಂದನ್ನು ಕಂಡು ಕೊಂಡಿದ್ದಾರೆ. ಎಮ್ಮೆಯ ಡಿಎನ್‌ಎ ಪರೀಕ್ಷೆ ನಡೆಸಿ ನಿಜವಾದ ಮಾಲೀಕನ ಪತ್ತೆ ಹಚ್ಚಲು ಪೊಲೀಸರು ತೀರ್ಮಾನಿಸಿದ್ದಾರೆ.
2020 ರಲ್ಲಿ ಕಳುವಾಗಿದ್ದ ಕರು :
ಕೂಲಿ ಕೆಲಸ ಮಾಡುವ ಚಂದ್ರಪಾಲ್ ಕಶ್ಯಪ್ ಎಂಬ ವ್ಯಕ್ತಿ ಪೊಲೀಸರೆದುರು ಎಮ್ಮೆ ಕರು ಕಳ್ಳತನದ ದೂರನ್ನು ತೆಗೆದುಕೊಂಡು ಬಂದಿದ್ದಾರೆ. ಅವರ ಪ್ರಕಾರ 2020 ರ ಆಗಸ್ಟ್ 25 ರಂದು, 3 ವರ್ಷದ ಎಮ್ಮೆ ಕರುವನ್ನು ಕೊಟ್ಟಿಗೆಯಿಂದ ಕಳ್ಳತನ ಮಾಡಲಾಗಿದೆ. ನಂತರ ಆ ಕರುವಿಗಾಗಿ ಎಲ್ಲಾ ಕಡೆಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಇದಾದ ಬಳಿಕ 2020 ರ ನವೆಂಬರ್ ನಲ್ಲಿ ಸಹರಾನ್‌ಪುರದಲ್ಲಿ ಎಮ್ಮೆ ಕರು ಪತ್ತೆಯಾಗಿದೆ. ಆದರೆ ಪತ್ತೆಯಾದ ಕರು ತಮ್ಮದು ಎನ್ನುವುದು ಸಹರಾನ್‌ಪುರದ ಸತ್ಬೀರ್ ಸಿಂಗ್ ಅವರ ವಾದ.
ಡಿಎನ್ಎ ಪರೀಕ್ಷೆ ಗೆ ಎಸ್ಪಿ ಆದೇಶ :
ಆ ಸಮಯದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ, ಈ ವಿಷಯವನ್ನು ಅಲ್ಲಿಗೆ ನಿಲ್ಲಿಸಲಾಗಿತ್ತು. ಇದೀಗ ಶಾಮ್ಲಿ ಎಸ್ಪಿ ಸುಕೃತಿ ಮಾಧವ್ ಅವರು ಚಂದ್ರಪಾಲ್ ಅವರ ಎಮ್ಮೆ ಮತ್ತು ಕರುವಿನ ಡಿಎನ್ಎ ಪರೀಕ್ಷೆ ನಡೆಸಿ ನಿಜವಾದ ಮಾಲೀಕರನ್ನು ಪತ್ತೆಹಚ್ಚಲು ಆದೇಶಿಸಿದ್ದಾರೆ.
ಸತ್ಬೀರ್ ಸಿಂಗ್ ಬಾಲಿ ಇರುವ ಕರು ನಿಮ್ಮದೇ ಎಂದು ಹೇಗೆ ಹೇಳುತ್ತೀರಿ ಎಂದು ಕಶ್ಯಪ್ ಅವರನ್ನು ಪೊಲೀಸರು ಪ್ರಶ್ನಿಸಿದಾಗ ಅವರ ಬಾಲಿ ಉತ್ತರವೂ ಸಿದ್ದವಾಗಿತ್ತು. ಕಶ್ಯಪ್ ಹೇಳುವ ಪ್ರಕಾರ, ಮನುಷ್ಯರಂತೆ ಪ್ರಾಣಿಗಳನ್ನು ಕೂಡಾ ಬೇರೆ ಬೇರೆ ವಿಶೇಷತೆಗಳ ಮೂಲಕ ಗುರುತಿಸಬಹುದು. ಕರುವಿನ ಎಡ ಕಾಲಿನ ಮೇಲೆ ಒಂದು ಗುರುತು ಇದೆ. ಇದರ ಬಾಲದ ತುದಿಯಲ್ಲಿ ಬಿಳಿ ತೇಪೆಯೂ ಇದೆ. ಮಾತ್ರವಲ್ಲ ತಾನು ಕರುವಿನ ಬಳಿಗೆ ಹೋದಾಗ ಅದು ತನ್ನನ್ನು ಗುರುತಿಸಿ ತನ್ನ ಬಾಲಿ ಬರಲು ಪ್ರಯತ್ನಿಸಿದೆ ಎನ್ನುತ್ತಾರೆ ಕಶ್ಯಪ್.
ಅದೇನೇ ಇರಲಿ ಒಟ್ಟಿನಲ್ಲಿ ಎಮ್ಮೆ ಮತ್ತು ಕರುವಿನ ಡಿಎನ್ ಎ ಪರೀಕ್ಷೆ ಮೂಲಕ ಅದರ ಅಸಲಿ ಮಾಲೀಕರನ್ನು ಪತ್ತೆ ಹಚ್ಚುವಂತಾಗಿ ಕರು ತನ್ನ ತಾಯಿ ಬಳಿಗೆ ಸೇರುವಂತಾಗಲಿ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB