nammatumakuru

    Subscribe to Updates

    Get the latest creative news from FooBar about art, design and business.

    What's Hot

    ವನ್ಯಜೀವಿಗಳ ಚಲನೆ ಬಗ್ಗೆ ಎಚ್ಚರಿಕೆ ನೀಡಲು AI ಸೈರನ್ ಅಳವಡಿಕೆ!

    June 1, 2025

    ಜನರ ತೆರಿಗೆ ಹಣ ಕಾಂಗ್ರೆಸ್ ಕಾರ್ಯಕರ್ತರನ್ನು ಸಾಕಲು ಬಳಕೆ: ಬಿ.ವೈ.ವಿಜಯೇಂದ್ರ ಕಿಡಿ

    June 1, 2025

    ಒಂದೇ ವರ್ಷದಲ್ಲಿ 700 ಬಾಲ್ಯ ವಿವಾಹ: ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡ ಸಿಎಂ ಸಿದ್ದರಾಮಯ್ಯ

    June 1, 2025
    Facebook Twitter Instagram
    ಟ್ರೆಂಡಿಂಗ್
    • ವನ್ಯಜೀವಿಗಳ ಚಲನೆ ಬಗ್ಗೆ ಎಚ್ಚರಿಕೆ ನೀಡಲು AI ಸೈರನ್ ಅಳವಡಿಕೆ!
    • ಜನರ ತೆರಿಗೆ ಹಣ ಕಾಂಗ್ರೆಸ್ ಕಾರ್ಯಕರ್ತರನ್ನು ಸಾಕಲು ಬಳಕೆ: ಬಿ.ವೈ.ವಿಜಯೇಂದ್ರ ಕಿಡಿ
    • ಒಂದೇ ವರ್ಷದಲ್ಲಿ 700 ಬಾಲ್ಯ ವಿವಾಹ: ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡ ಸಿಎಂ ಸಿದ್ದರಾಮಯ್ಯ
    • ಶಿಕ್ಷಕನ ಅಮಾನತು ಪ್ರಕರಣ: ಸರ್ಕಾರಿ ನೌಕರರಿಗೆ ಪ್ರತಿಭಟನೆ ಅವಕಾಶವಿಲ್ಲ: ಸಚಿವ ಮಧು ಬಂಗಾರಪ್ಪ
    • ಹೇಮಾವತಿ ಎಕ್ಸ್‌ ಪ್ರೆಸ್ ಲಿಂಕ್ ಕೆನಾಲ್ ವಿವಾದ ಸಿಎಂ ಸಿದ್ದರಾಮಯ್ಯ, ಸಚಿವ ಪರಮೇಶ್ವರ್ ಪ್ರತಿಕ್ರಿಯೆ
    • ಜನಿಸಿದ ಎರಡೇ ದಿನಕ್ಕೆ ಹೆಣ್ಣು ಮಗುವನ್ನು ಮಾರಾಟ ಮಾಡಿದ ತಂದೆ, ತಾಯಿ!
    • ನಿಷೇಧಾಜ್ಞೆ ಧಿಕ್ಕರಿಸಿ ಹೇಮಾವತಿ ಎಕ್ಸ್‌ ಪ್ರೆಸ್‌ ಲಿಂಕ್‌ ಕೆನಾಲ್‌ ಕಾಮಗಾರಿ ವಿರೋಧಿಸಿ ಹೋರಾಟ
    • ಹೇಮಾವತಿ ಲಿಂಕಿಂಗ್ ಕೆನಾಲ್ ಕಾಮಗಾರಿಗೆ ತಾತ್ಕಾಲಿಕ ಬ್ರೇಕ್
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಇಂದಿನಿಂದ ಎಸ್‌ ಎಸ್‌ ಎಲ್‌ ಸಿ ಪರೀಕ್ಷೆ
    ರಾಜ್ಯ ಸುದ್ದಿ March 28, 2022

    ಇಂದಿನಿಂದ ಎಸ್‌ ಎಸ್‌ ಎಲ್‌ ಸಿ ಪರೀಕ್ಷೆ

    By adminMarch 28, 2022No Comments2 Mins Read
    exam

    ಹಿಜಾಬ್ ಟೆನ್ಶನ್ ನಡುವೆ ಇಂದಿನಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗಲಿದ್ದು, ರಾಜ್ಯದಲ್ಲಿ ಒಟ್ಟು 8,73,846 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಜ್ಜಾಗಿದ್ದರೆ, ಯಾವುದೇ ಅಹಿತಕರ ಘಟನೆ ನಡೆಯದಂತೆ ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.‌

    ಕಳೆದ ಎರಡು ವರ್ಷಗಳಿಂದ ಕೊರೊನಾವೈರಸ್ (Coronavirus) ಭಯದ ನಡುವೆ ಕೇವಲ ಮೂರು ದಿನ ಮಾತ್ರ ಪರೀಕ್ಷೆ ನಡೆದಿತ್ತು. ಆದರೆ ಈ ವರ್ಷ ಯಾವುದೇ ಭಯವಿಲ್ಲದೆ ಪರೀಕ್ಷೆ ನಡೆಯಲಿದೆ. ಮಾರ್ಚ್ 28 ರಿಂದ ಏಪ್ರಿಲ್ 11ರವರೆಗೆ, ಬೆಳಗ್ಗೆ 10:30ಕರಿಂದ ಮಧ್ಯಾಹ್ನ 01:45ರವರೆಗೆ ಪರೀಕ್ಷೆ ನಡೆಯಲಿದೆ.


    Provided by

    ಪರೀಕ್ಷೆ ವೇಳಾಪಟ್ಟಿ:

    28-3-2022- ಪ್ರಥಮ ಭಾಷೆ
    30-3-2022- ದ್ವಿತೀಯ ಭಾಷೆ
    1-4-2022- ಅರ್ಥ ಶಾಸ್ತ್ರ, ಕೋರ್ ಸುಬ್ಜೆಕ್ಟ್ಸ್
    4-4-2022- ಗಣಿತ, ಸಮಾಜಶಾಸ್ತ್ರ
    6-4-2022- ಸಮಾಜ ವಿಜ್ಞಾನ
    8-4-2022- ತೃತೀಯ ಭಾಷೆ
    11-4-2022- ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ/ ಹಿಂದೂಸ್ತಾನಿ ಸಂಗೀತ.
    ಪರೀಕ್ಷೆಗೆ ತಯಾರಿ:
    ಮಾರ್ಚ್ 28 ರಿಂದ ಎಪ್ರಿಲ್ 11ರವರೆಗೆ ನಡೆಯಲಿರುವ ಪರೀಕ್ಷೆ
    * ಪರೀಕ್ಷೆ ಬರೆಯಲಿರುವ 8,73,846 ವಿದ್ಯಾರ್ಥಿಗಳು
    * ಗಂಡು ಮಕ್ಕಳು – 4,52,732
    * ಹೆಣ್ಣು ಮಕ್ಕಳು , 4,21,110
    * ತೃತಿಯ ಲಿಂಗಿಗಳು – 04
    * ವಿಭಿನ್ನ ಸಾಮಾರ್ಥ್ಯವುಳ್ಳ ವಿದ್ಯಾರ್ಥಿಗಳು – 5,307
    * ಒಟ್ಟು 8,73,846 ವಿದ್ಯಾರ್ಥಿಗಳು

    ಪರೀಕ್ಷೆಗೆ ನೋಂದಾಯಿತ ಒಟ್ಟು ಶಾಲೆಗಳ ಸಂಖ್ಯೆ – 15,387
    >> ಸರ್ಕಾರಿ – 5,717
    >> ಅನುದಾನಿತ – 3,412
    >> ಅನುದಾನ ರಹಿತ – 6,258
    >> ಒಟ್ಟು ಶಾಲೆಗಳು – 15,387
    ಪರೀಕ್ಷಾ ಕೇಂದ್ರಗಳ ಸಂಖ್ಯೆ – 3,444

    ಎಸ್‌ಎಸ್‌ಎಲ್‌ಸಿ ಪರೀಕ್ಷೆಗಾಗಿ (SSLC Exam) 45,289 ಪರೀಕ್ಷಾ ಕೊಠಡಿಗಳ ಸಿದ್ಧತೆ ಮಾಡಲಾಗಿದ್ದು, 3,444 ಮುಖ್ಯ ಅಧಿಕ್ಷಕರು ಹಾಗೂ 49,817 ಕೊಠಡಿ ಮೇಲ್ವಿಚಾರಕರ ನೇತೃತ್ವದಲ್ಲಿ ಪರೀಕ್ಷೆ ನಡೆಯಲಿದೆ.

    ಹಿಜಾಬ್ ಧರಿಸಿ ಬಂದ್ರೆ ಪರೀಕ್ಷೆಗೆ ಇಲ್ಲ ಅವಕಾಶ:

    ಹಿಜಾಬ್  ಧರಿಸಿ ಪರೀಕ್ಷೆ ಬರೆಯಲು ಬರುವ ಮುಸ್ಲೀಂ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಅವಕಾಶ ನೀಡಿಲ್ಲ. ನಿಯಮ‌ 1995 ರ ನಿಯಮ 11ರಲ್ಲಿ ಇರುವ ಅಧಿಕಾರದನ್ವಯ ಸಮವಸ್ತ್ರ ಜಾರಿ ಮಾಡಿದೆ. ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಶಾಲಾ ಸಮವಸ್ತ್ರ ಕಡ್ಡಾಯ ಹಾಗೂ ಖಾಸಗಿ ಶಾಲೆಗಳಲ್ಲಿ ಆಯಾ ಆಡಳಿತ ಮಂಡಳಿಗಳು ನಿರ್ಧರಿಸಿರುವ ಸಮವಸ್ತ್ರ ಕಡ್ಡಾಯವಾಗಿದೆ. ಇನ್ನು ಪರೀಕ್ಷೆಯಲ್ಲಿ ಗೈರಾದ ಹಾಗೂ ಫೇಲಾದ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಸಿಹಿ ಸುದ್ದಿ ನೀಡಿದೆ‌. ಪರೀಕ್ಷೆಯಲ್ಲಿ ಗೈರು ಹಾಜರಾಗುವ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಯಲ್ಲಿ ಅವಕಾಶ ಕಲ್ಪಿಸಿದೆ.

    ಇನ್ನೊಂದೆಡೆ ಪರೀಕ್ಷೆ ವೇಳೆ ಮಕ್ಕಳ ಆರೋಗ್ಯದ ಬಗ್ಗೆಯೂ ನಿಗಾ ವಹಿಸಲಾಗಿದ್ದು ಆರೋಗ್ಯ ಇಲಾಖೆಯ ಮಾರ್ಗಸೂಚಿಯಂತೆ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳು ಹಾಗೂ ಮೇಲ್ವಿಚಾರಕರು ಮಾಸ್ಕ್ ಧರಿಸುವುದರ ಜೊತೆಗೆ, ಸಾಮಾಜಿಕ ಅಂತರ ಕಡ್ಡಾಯ ಮಾಡಲಾಗಿದೆ. ಪರೀಕ್ಷೆ ಕೇಂದ್ರಗಳಲ್ಲಿ ರಿಜಿಸ್ಟರ್ ನಂಬರ್ ಸಾಮಾಜಿಕ ಅಂತರದ ಬಾಕ್ಸ್ ಗಳು ಹಾಕಿಕೊಂಡು ಸಿದ್ದತೆ ಮಾಡಿಕೊಂಡಿದ್ದಾರೆ. ಇದಲ್ಲದೆ, ಕೋವಿಡ್ ಪಾಸಿಟಿವ್ ಆಗಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಶಿಕ್ಷಣ ಇಲಾಖೆ ಪ್ರತ್ಯೇಕ ಕೊಠಡಿ ವ್ಯವಸ್ಥೆಯನ್ನು ಸಹ ಮಾಡಿದೆ.

    ವರದಿ: ಆಂಟೋನಿ


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

    admin
    • Website

    Related Posts

    ವನ್ಯಜೀವಿಗಳ ಚಲನೆ ಬಗ್ಗೆ ಎಚ್ಚರಿಕೆ ನೀಡಲು AI ಸೈರನ್ ಅಳವಡಿಕೆ!

    June 1, 2025

    ಜನರ ತೆರಿಗೆ ಹಣ ಕಾಂಗ್ರೆಸ್ ಕಾರ್ಯಕರ್ತರನ್ನು ಸಾಕಲು ಬಳಕೆ: ಬಿ.ವೈ.ವಿಜಯೇಂದ್ರ ಕಿಡಿ

    June 1, 2025

    ಒಂದೇ ವರ್ಷದಲ್ಲಿ 700 ಬಾಲ್ಯ ವಿವಾಹ: ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡ ಸಿಎಂ ಸಿದ್ದರಾಮಯ್ಯ

    June 1, 2025
    Our Picks

    ಅಡುಗೆ ಎಣ್ಣೆ ದರ ಇಳಿಕೆ ಸಾಧ್ಯತೆ

    May 31, 2025

    ನಾನು ಪ್ರೀತಿಯಿಂದ ಹೇಳಿದ್ದೇನೆ: ಕನ್ನಡ ಬಗ್ಗೆ ಹೇಳಿಕೆಗೆ ಕಮಲ್ ಹಾಸನ್ ವಿವರಣೆ

    May 29, 2025

    ಪುಟಿನ್ ಹುಚ್ಚ: ರಷ್ಯಾ ಅಧ್ಯಕ್ಷ ವಿರುದ್ಧ ಟ್ರಂಪ್ ಕಿಡಿ

    May 26, 2025

    ಆ್ಯಪಲ್ ಗೆ ಟ್ರಂಪ್ ಅಡ್ಡಗಾಲು: ಇಂಡಿಯಾ ಫ್ರೆಂಡ್ ಅಂತ ಹೇಳುತ್ತಲೇ ಟ್ರಂಪ್ ಮಾಡ್ತಿರೋದೇನು?

    May 24, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ವನ್ಯಜೀವಿಗಳ ಚಲನೆ ಬಗ್ಗೆ ಎಚ್ಚರಿಕೆ ನೀಡಲು AI ಸೈರನ್ ಅಳವಡಿಕೆ!

    June 1, 2025

    ಮಡಿಕೇರಿ: ವನ್ಯಜೀವಿಗಳ ಸಂಚಾರಕ್ಕೆ ಸಂಬಂಧಿಸಿದ ಅಹಿತಕರ ಘಟನೆಗಳನ್ನು ತಡೆಗಟ್ಟುವ ಸಲುವಾಗಿ ಕೊಡಗಿನಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಹೊಸ ಯೋಜನೆ ಕೈಗೊಳ್ಳಲಾಗುತ್ತಿದೆ.…

    ಜನರ ತೆರಿಗೆ ಹಣ ಕಾಂಗ್ರೆಸ್ ಕಾರ್ಯಕರ್ತರನ್ನು ಸಾಕಲು ಬಳಕೆ: ಬಿ.ವೈ.ವಿಜಯೇಂದ್ರ ಕಿಡಿ

    June 1, 2025

    ಒಂದೇ ವರ್ಷದಲ್ಲಿ 700 ಬಾಲ್ಯ ವಿವಾಹ: ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡ ಸಿಎಂ ಸಿದ್ದರಾಮಯ್ಯ

    June 1, 2025

    ಶಿಕ್ಷಕನ ಅಮಾನತು ಪ್ರಕರಣ: ಸರ್ಕಾರಿ ನೌಕರರಿಗೆ ಪ್ರತಿಭಟನೆ ಅವಕಾಶವಿಲ್ಲ: ಸಚಿವ ಮಧು ಬಂಗಾರಪ್ಪ

    June 1, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.