ಪರಿಸರ ಮಾಲಿನ್ಯದಿಂದಾಗಿ ವಾತಾವರಣದಲ್ಲಿರುವ ಓಝೇನ್ ಪದರ ನಿರಂತರವಾಗಿ ಹಾನಿಗೊಳಗಾಗುತ್ತಿದೆ.ಹೀಗಾಗಿ ಓಝೇನ್ ಅನ್ನು ರಕ್ಷಿಸುವ & ಸಮಸ್ಯೆ ನಿವಾರಿಸುವ ಸಲುವಾಗಿ ಜಾಗೃತಿ ಮೂಡಿಸಲು ಪ್ರತಿವರ್ಷ ಸೆ.16ರಂದು ವಿಶ್ವ ಓಝೇನ್ ದಿನವನ್ನಾಗಿ ಆಚರಿಸಲಾಗುತ್ತದೆ. ಸೂರ್ಯನ ವಿಕಿರಣ ಭೂಮಿಗೆ ನೇರವಾಗಿ ಅಪ್ಪಳಿಸಿ, ಜೀವಸಂಕುಲಗಳಿಗೆ ಹಾನಿಯನ್ನುಂಟುಮಾಡುತ್ತದೆ. ಸೂರ್ಯನ ಕಿರಣ ನೇರವಾಗಿ ಭೂಮಿಗೆ ಬೀಳದಂತೆ ಓರೋನ್ ಪದರ ನೋಡಿಕೊಳ್ಳುತ್ತದೆ. ಹೀಗಾಗಿ ಪರಿಸರ ರಕ್ಷಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ.
ನಮಗೆ ಚಳಿಯಾದಾಗ ಯಾರಾದರೂ ಬೆಚ್ಚನೆಯ ಹೊದಿಕೆ ಕೊಟ್ಟರೇ, ಮಳೆಯಲ್ಲಿ ನೆನೆಯುವಾಗ, ಬಿಸಿಲಿನ ತಾಪ ತಡೆಯದಾದಾಗ ಯಾರಾದರೂ ಕೊಡೆ ಹಿಡಿದರೆ ಅದೆಷ್ಟು ಖುಷಿ, ಸುರಕ್ಷತಾ ಭಾವ ಅಲ್ಲವೇ.. ನಾವೇನೋ ಮನುಷ್ಯರು ಒಬ್ಬರಲ್ಲ ಒಬ್ಬರು ಸಹಾಯ ಮಾಡುತ್ತಾರೆ. ಕುಟುಂಬ, ಸಂಬಂಧಿಕರು, ಸ್ನೇಹಿತರು ಯಾರಾದರೂ… ಆದರೆ ಭೂಮಿಗೆ…?
ಇರುವುದೊಂದೇ ಭೂಮಿ…ಆದರೆ ನಿಮಗೆ ಗೊತ್ತೇ ಭೂಮಿಯನ್ನೂ ಕೂಡ ಒಂದು ಪದರ ಸೂರ್ಯನ ನೇರಳಾತೀತ ಕಿರಣಗಳಿಂದ ರಕ್ಷಿಸುತ್ತದೆ. ಅದೇ ಓಝೋನ್ ಪದರ. ಇಂದು ವಿಶ್ವ ಓಝೋನ್ ದಿನ. ಈ ದಿನದ ನೆಪದಲ್ಲಾದರೂ ಓಝೋನ್ ಪದರದ ಬಗ್ಗೆ ತಿಳಿದುಕೊಳ್ಳಲೇ ಬೇಕು.
ವಾಯುಮಂಡಲದ ಸ್ಟ್ರಾಟೋಸ್ಫಿಯರ್‌ನ 15-20 ಕಿ.ಮೀ ಮೇಲ್ಪಟ್ಟ ಪ್ರದೇಶದಲ್ಲಿರುವ ಓಝೋನ್ ಪದರ ಭೂಮಿಯ ಮೇಲೆ ಸೂರ್ಯನಿಂದ ಹೊರಹೊಮ್ಮುವ ಅತಿನೇರಳಾತೀತ ವಿಕಿರಣಗಳನ್ನು ಹೀರಿಕೊಳ್ಳುತ್ತದೆ. ಈ ಪದರವೇ ಇಲ್ಲದಿದ್ದರೇ, ಭೂಮಿಯ ಮೇಲೆ ಜೀವ ಸಂಕುಲವೇ ನಾಶವಾಗಿರುತ್ತಿತ್ತು. ಜೀವ ಸಂಕುಲದಲ್ಲಿ ಅಷ್ಟು ಪ್ರಮುಖ ಪಾತ್ರ ಓಝೋನ್ ಪಡೆದುಕೊಂಡಿದೆ.
ವಿಶ್ವ ಓಝೋನ್ ದಿನದ ಇತಿಹಾಸ
ಡಿಸೆಂಬರ್ 19, 1994 ರಂದು, ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಸೆಪ್ಟೆಂಬರ್ 16 ರಂದು ಓಝೋನ್ ಪದರದ ಸಂರಕ್ಷಣೆಗಾಗಿ ಅಂತರರಾಷ್ಟ್ರೀಯ ದಿನವನ್ನು ಘೋಷಿಸಿತು. ಸೆಪ್ಟೆಂಬರ್ 16, 1987 ರಂದು, ವಿಶ್ವಸಂಸ್ಥೆ ಮತ್ತು ಇತರ 45 ದೇಶಗಳು ಮಾಂಟ್ರಿಯಲ್ ಪ್ರೊಟೋಕಾಲ್‌ಗೆ ಸಹಿ ಹಾಕಿದ್ದವು.
ಪ್ರತಿ ವರ್ಷ ಈ ದಿನವನ್ನುಓಝೋನ್ ಪದರದ ಸಂರಕ್ಷಣೆಗಾಗಿ ಅಂತರರಾಷ್ಟ್ರೀಯ ದಿನವೆಂದು ಆಚರಿಸಲಾಗುತ್ತದೆ. ಓಝೋನ್ ಪದರದ ಸವಕಳಿಗೆ ಕಾರಣವಾಗುವ ವಸ್ತುಗಳ ಉತ್ಪಾದನೆಯನ್ನು ಕಡಿಮೆ ಮಾಡುವ ಮೂಲಕ ಪದರವನ್ನು ರಕ್ಷಿಸುವುದು ಇದರ ಉದ್ದೇಶವಾಗಿದೆ.
ಓಝೋನ್ ಫಾರ್ ಲೈಫ್’ ಎಂಬುದು ವಿಶ್ವ ಓಝೋನ್ ದಿನ 2020 ರ ಘೋಷಣೆಯಾಗಿತ್ತು. ಈ ವರ್ಷದ ಓಜೋನ್ ದಿನದ ಘೋಷವಾಕ್ಯ, ‘ನಮ್ಮನ್ನು, ನಮ್ಮ ಆಹಾರ ಮತ್ತು ಲಸಿಕೆಗಳನ್ನು ತಂಪಾಗಿರಿಸುವುದು!’ ಎಂಬುವುದಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy