ತುಮಕೂರು : ಪಾವಗಡ ಪಟ್ಟಣದ ಹೊರವಲಯದಲ್ಲಿ ಕುಡಿದ ಮತ್ತಿನಲ್ಲಿ ಕೆಪಿಟಿಸಿಎಲ್ ಎಂಜಿನಿಯರ್ ಗಳು ಬೀರ್ ಬಾಟಲಿಂದ ತಲೆ ಬುರುಡೆಗೆ ಪರಸ್ಪರ ಹೊಡೆದುಕೊಳ್ಳುವ ದೃಶ್ಯ ವಿಡಿಯೋ ವೈರಲ್ ಆಗಿದೆ.
ಕಳೆದ ಗುರುವಾರ ಪಾವಗಡ ಪಟ್ಟಣದ ತುಮಕೂರು ರಸ್ತೆಯ ಮಾರ್ಗದ ರಾಯಲ್ ರೆಸಾರ್ಟ್ ಹಿಂಭಾಗ ನಾಲ್ವರು ನೌಕರರು ಹಗಲೋತ್ತೆ ಪಾರ್ಟಿ ಮಾಡಿಕೊಂಡಿದ್ದರು. ಪಾರ್ಟಿ ಮಧ್ಯೆ ಮಾತಿಗೆ ಮಾತು ಬೆಳೆದು ತೀವ್ರವಾಗಿ ಬಡಿದಾಡಿಕೊಂಡಿದ್ದಾರೆ.
ಕೆ.ಪಿ.ಟಿ.ಸಿ.ಎಲ್. ಜೂನಿಯರ್ ಎಂಜಿನಿಯರ್ಗಳಾದ ಶ್ರೀನಿವಾಸ್, ವಾದಿರಾಜ್, ನಡುವೆ ಈ ಒಂದು ಭೀಕರ ಬೀರು ಬಾಟಲಿಂದ ಹೊಡೆದಾಡಿಕೊಳ್ಳುವ ದೃಶ್ಯವನ್ನು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿದೆ.
ಈ ವೇಳೆ ಈ ಇಬ್ಬರನ್ನು ಸಮಾಧಾನ ಮಾಡಲು ಬೆಸ್ಕಾಂ ಸಿಬ್ಬಂದಿ ನರಸಿಂಹಮೂರ್ತಿ ಮತ್ತು ಸಂತೋಷ್ ಹರಸಾಹಸದ ದೃಶ್ಯ ಕಾಣಬಹುದಾಗಿದೆ. ಇದೇ ಸಂದರ್ಭದಲ್ಲಿ ಇನ್ನೊಬ್ಬ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಮಾಲ್ಗುಂಡ ಇದ್ದರು.
ತಲೆಗೆ ಗಾಯವಾಗಿ ರಕ್ತ ಸುರಿಯುತ್ತಿದ್ದರೂ ಸಹ ತಲೆಗೆ ಹೊಡೆದವನನ್ನು ಹುಡುಕಿ ಹುಡುಕಿ ಮತ್ತೆ ಬೀರು ಬಾಟಲಿನಿಂದ ಓಡಿಸಿಕೊಂಡು ಹೋಗಿ ತಲೆಗೆ ಹೊಡೆಯುವ ದೃಶ್ಯವನ್ನು ಕಾಣಬಹುದಾಗಿದೆ.
ಈವರೆಗೂ ಘಟನೆ ಬಗ್ಗೆ ಈ ಬಡಿದಾಟದ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿಲ್ಲ, ಕೆಲಸಕ್ಕೆ ಕುತ್ತು ಬರಬಹುದು ಎಂಬ ಭೀತಿಯಿಂದ ಗಾಯದ ನೋವಿನಲ್ಲೇ ನಾಲ್ವರೂ ಕೆಲಸ ಮಾಡುತ್ತಿದ್ದಾರೆ.
ಸದ್ಯ ನಾಲ್ವರಿಗೂ, ಮೇಲಾಧಿಕಾರಿಗಳು, ನೋಟಿಸ್ ಕೊಟ್ಟಿದ್ದು, ಕಾರಣ ಕೇಳಿದ್ದಾರೆ. ಆದರೆ ಕಳೆದ ಒಂದು ವಾರದ ಹಿಂದೆ ಈ ಒಂದು ಘಟನೆ ನಡೆದಿದ್ದು ಬೆಸ್ಕಾಂ ನೌಕರರ ವಿಡಿಯೋ ಮಾಡಿದ್ದು ತಡವಾಗಿ ಒಂದು ವಿಡಿಯೋ ವೈರಲ್ ಮಾಡಿದ್ದಾನೆ ಎನ್ನಲಾಗಿದೆ.
ಏನೇ ಆಗಲಿ ಪಾವಗಡ ಬೆಸ್ಕಾಂ ಇಲಾಖೆಯಲ್ಲಿ ಪದೇ ಪದೇ ಇಂತಹ ಗಲಾಟೆಗಳು ನಡೆಯುತ್ತಿದ್ದು ಜಿಲ್ಲಾ ಮತ್ತು ರಾಜ್ಯಮಟ್ಟದ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕಾಗಿದೆ ಸ್ಥಳೀಯರೇ ಹೆಚ್ಚಾಗಿ ಇಲಾಖೆಯಲ್ಲಿದ್ದು ಇವರನ್ನ ದೂರದ ಪ್ರದೇಶಗಳಿಗೆ ಎತ್ತಂಗಡಿ ಮಾಡಬೇಕು ಎಂದು ಸ್ಥಳೀಯರು ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಏನೇ ಆಗಲಿ ಈ ಒಂದು ಘಟನೆಯಿಂದ ಪಾವಗಡ ತಾಲೂಕಿನ ಬೆಸ್ಕಾಂ ಇಲಾಖೆ ಮುಜುಗರಕ್ಕೆ ಒಳಗಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA