ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ನಡೆದ ಟಿ-20 ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ 5 ವಿಕೆಟ್ ಗಳಿಂದ ಜಯ ಗಳಿಸಿ ನೂತನ ಚಾಂಪಿಯನ್ ಆಗಿದೆ.
ಮೆಲ್ಬೋರ್ನ್ ಸ್ಟೇಡಿಯಂನಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಫೀಲ್ಡಿಂಗ್ ಆರಿಸಿಕೊಂಡಿತು. ಪಾಕಿಸ್ತಾನ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿತು. ಇಂಗ್ಲೆಂಡ್ 1 ಓವರ್ ಬಾಕಿ ಇರುವಂತೆಯೇ 5 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಪಾಕ್ ಪರ ನಾಯಕ ಬಾಬಾ ಅಜಂ 30 ರನ್ ಹಾಗೂ ಮಸೂದ್ 38 ರನ್ ಹೊಡೆದರು. ಅಂತ್ಯದಲ್ಲಿ ಶಾದಾಬ್ ಖಾನ್ 20 ರನ್ ಗಳಿಸಿದ್ದನ್ನು ಬಿಟ್ಟರೆ ಉಳಿದೆಲ್ಲ ಬ್ಯಾಟ್ಸ್‌ಮನ್ ಗಳು ತರಗಲೆಗಳಂತೆ ಔಟಾದರು.
ಇಂಗ್ಲೆಂಡ್ ಪರ ಸ್ಯಾಮ್ ಕರ್ರನ್ 3 ವಿಕೆಟ್ ಹಾಗೂ ಅದಿಲ್ ರಶೀದ್-ಕ್ರಿಸ್ ಜೋರ್ಡನ್ ತಲಾ 2 ವಿಕೆಟ್ ಪಡೆದರು.
ಬಳಿಕ ಇಂಗ್ಲೆಂಡ್ 19 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 138 ರನ್ ಹೊಡೆದು ಗೆಲುವು ಸಾಧಿಸಿತು.
ಇಂಗ್ಲೆಂಡ್ ನಾಯಕ ಓಪನರ್ ಜೋಸ್ ಬಟ್ಲರ್ 26 ರನ್, ಹ್ಯಾರಿ ಬ್ರೂಕ್ 20 ರನ್ ಹಾಗೂ ಕಡೆಯಲ್ಲಿ ಬೆನ್ ಸ್ಟೋಕ್ಸ್ ಅಜೇಯ 52 ರನ್ ಹೊಡೆದರು.
ಈ ಮೂಲಕ 5 ವಿಕೆಟ್ ಗಳಿಂದ ಗೆದ್ದು ಇಂಗ್ಲೆಂಡ್ ತಂಡ ಟಿ-20 ವಿಶ್ವಕಪ್ ಕ್ರಿಕೆಟ್ ಟ್ರೋಫಿ ಎತ್ತಿಹಿಡಿಯಿತು.ಇಂಗ್ಲೆಂಡ್ ನ ಸ್ಯಾಮ್ ಕುರ್ರನ್ ಪಂದ್ಯಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ಗಳಿಸಿ ಗೆಲುವಿನ ಕೇಕೆ ಹಾಕಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy