ಪಾವಗಡ: ಎಸ್ ಎಸ್ ಎಲ್ ಸಿ ಪರೀಕ್ಷೆಗಳಲ್ಲಿ ಹೆಚ್ಚಿನ ಫಲಿತಾಂಶವನ್ನು ತರಲು ಆಂಗ್ಲ ಮಾಧ್ಯಮದ ಶಾಲೆಗಳ ಕೊಡುಗೆ ಅಪಾರವಾಗಿರುತ್ತದೆ ಎಂದು ಕೋಟಗುಡ್ಡ ಸಹನಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಕಾರ್ಯದರ್ಶಿ ಸಹನಾ ಶ್ರೀನಿವಾಸ್ ತಿಳಿಸಿದ್ದಾರೆ.
ಅವರು ಪಾವಗಡ ತಾಲೂಕಿನ ಕೋಟಗುಡ್ಡ ಗ್ರಾಮದಲ್ಲಿರುವ ಸಹನಾ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಪಾವಗಡ ತಾಲೂಕು ಆಂಗ್ಲ ಮಾಧ್ಯಮ ಶಾಲೆಗಳ ಒಕ್ಕೂಟದಿಂದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗಾಗಿ ವಿಶೇಷ ರಸಪ್ರಶ್ನೆ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿ, ಪಾವಗಡ ತಾಲೂಕಿನ ಬಹುತೇಕ ಎಲ್ಲಾ ಆಂಗ್ಲ ಮಾಧ್ಯಮ ಶಾಲೆಗಳು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಉತ್ತಮ ಜೀವನ ರೂಪಿಸುವ ನಿಟ್ಟಿನಲ್ಲಿ ಅನೇಕ ಪ್ರಯತ್ನಗಳನ್ನು ಮಾಡಲಾಗುತ್ತಿದ್ದು, ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ತರಲು ಶ್ರಮಿಸಲಾಗುತ್ತಿದೆ ಎಂದರು
ಇಸಿಓ ಶಿವಕುಮಾರ್ ಮಾತನಾಡಿ, ಪಾವಗಡ ತಾಲೂಕಿಗೆ ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಸ್ಥಾನವನ್ನು ತರುವಂತಹ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಕೈಗೊಂಡಿದ್ದು, ವಿದ್ಯಾರ್ಥಿಗಳು ಶಿಕ್ಷಕರು ಹೆಚ್ಚಿನ ಶ್ರಮ ಹಾಕಿ ತಾಲೂಕಿಗೆ ಉತ್ತಮ ಹೆಸರು ತರುವಂತೆ ಕರೆಕೊಟ್ಟರು.
ರಸಪ್ರಶ್ನೆ ಕಾರ್ಯಕ್ರಮದಲ್ಲಿ ಪಾವಗಡ ತಾಲೂಕಿನ 14 ಆಂಗ್ಲ ಮಾಧ್ಯಮ ಶಾಲೆಗಳು ಪಾಲ್ಗೊಂಡಿದ್ದು, ಸ್ಪರ್ಧೆಯಲ್ಲಿ ಮೊದಲ ಸ್ಥಾನವನ್ನು ಶ್ರೀ ಶಾರದಾ ವಿದ್ಯಾಪೀಠ, ದ್ವಿತೀಯ ಸ್ಥಾನವನ್ನು ಸಹನಾ ಆಂಗ್ಲ ಮಾಧ್ಯಮ, ತೃತೀಯ ಸ್ಥಾನವನ್ನು ಜ್ಞಾನ ಬೋಧನಿ ಶಾಲೆ ಪಡೆದಿದೆ.
ಕಾರ್ಯಕ್ರಮವನ್ನು ಉದ್ದೇಶಿಸಿ ಪಾವಗಡ ತಾಲೂಕು ಆಂಗ್ಲ ಮಾಧ್ಯಮ ಶಾಲೆಗಳು ಒಕ್ಕೂಟದ ಅಧ್ಯಕ್ಷ ಶ್ಯಾ.ನ ಪ್ರಸನ್ನ ಮೂರ್ತಿ, ಮೇಡುಮಾ ಸಂಸ್ಥಾಪಕ ಅಧ್ಯಕ್ಷ ಬಿ.ಕೆ. ಮುನಿಸ್ವಾಮಿ ಮಾತನಾಡಿದರು,
ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ನಗದು ಬಹುಮಾನವನ್ನು ಗುರುಕುಲ ಶಾಲೆಯ ಕಾರ್ಯದರ್ಶಿ ಎನ್.ಸಿ. ನಾಗಭೂಷಣ್ ಒದಗಿಸಿದ್ದು, ಕಾರ್ಯಕ್ರಮದಲ್ಲಿ ಇಸಿಓ ವೇಣುಗೋಪಾಲ್ ರೆಡ್ಡಿ, ರಂಗನಾಥ್, ಜ್ಞಾನ ಬೋಧನಿ ಶಾಲೆಯ ಅಧ್ಯಕ್ಷ ಜಿ. ಅನಿಲ್ ಕುಮಾರ್, ಅಂಜನ್ ಶೆಟ್ಟಿ, ಜಿ ಶ್ರೀನಿವಾಸ್, ಈರಣ್ಣ ನರಸಿಂಹ ಗೌಡ ಮುಖ್ಯ ಶಿಕ್ಷಕ ನರಸಿಂಹಪ್ಪ ಸೇರಿದಂತೆ ಹಲವರು ಹಾಜರಿದ್ದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4