ದೇಶೀಯ ಮದ್ಯ ಸೇವಿಸಿದ 24 ಆನೆಗಳು ಗಂಟೆಗಟ್ಟಲೆ ಮೈಮರೆತು ಮಲಗಿದ ಘಟನೆ ಅಸ್ಸಾಂನಲ್ಲಿ ನಡೆದಿದೆ.
ಸಾಂಪ್ರದಾಯಿಕ ಮವುಹಾ ದೇಶೀಯ ಮದ್ಯ ಸೇವಿಸಿದ ಆನೆಗಳು ಗಂಟೆಗಟ್ಟಲೆ ಸುಖವಾಗಿ ನಿದ್ರಿಸಿ ಎಂಜಾಯ್ ಮಾಡಿವೆ.
ಗ್ರಾಮಸ್ಥರು ಗ್ರಾಮದ ಸಮೀಪದ ಕಾಡಿನಲ್ಲಿ ಸಾಂಪ್ರದಾಯಿಕ ಮದ್ಯ ತಯಾರಿಸುತ್ತಿದ್ದರು ಹೀಗೆ ತಯಾರಿಸಿದ ಮದ್ಯ ತರಲು ಹೋದಾಗ ಹೂವಿನ ವಾಸನೆ ನೋಡಿ ಬಂದ ಆನೆಗಳನ್ನು ನೋಡಿ ಓಡಿ ಹೋಗಿದ್ದಾರೆ. ಆದರೆ ಸ್ಥಳಕ್ಕೆ ಬಂದ ಆನೆಗಳು ಎಣ್ಣೆ ಹೊಡೆದು ಮತ್ತು ಏರಿ ಮಲಗಿವೆ.
ಕೆಂಜೊಹರ್ ಜಿಲ್ಲೆಯಲ್ಲಿ ಮಹುವಾ ಹೂವುಗಳನ್ನು ನೀರು ತುಂಬಿದ ಹೊಂಡದಲ್ಲಿ ಕೆಲವು ಸಮಯ ಮುಚ್ಚಿಡಲಾಗುತ್ತದೆ. ನಂತರ ಅವರು ಹೋದಾಗ ಆನೆಗಳು ಮಡಿಕೆ ಒಡೆದು ಕುಡಿದು ಮಲಗಿವೆ.
ನಾವು ಬೆಳಿಗ್ಗೆ 6 ಗಂಟೆಗೆ ಕಾಡಿಗೆ ಹೋದಾಗ ಮಡಿಕೆಗಳು ಒಡೆದು ಹೋಗಿದ್ದವು. ಅಲ್ಲದೇ ಸುಮಾರು 24 ಆನೆಗಳು ಮತ್ತಿನಲ್ಲಿ ಮಲಗಿದ್ದವು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy