ಬೆಂಗಳೂರು : ಅಪರಾಧಿಗಳ ಪತ್ತೆ ಸಂಬಂಧ ಪೊಲೀಸರಿಗೆ ಸುಳಿವು ನೀಡುವ ಖಾಸಗಿ ವ್ಯಕ್ತಿಗಳಿಗೆ ರಾಜ್ಯ ಸರ್ಕಾರವು ಇನ್ಮುಂದೆ ಬರೋಬ್ಬರಿ 5 ಲಕ್ಷ ರೂ. ಬಹುಮಾನ ನೀಡಲಿದೆ.
ಮಹಿಳೆ ಮತ್ತು ಮಕ್ಕಳ ಮೇಲೆ ದೌರ್ಜನ್ಯ , ಮಾದಕ ವಸ್ತು ಸಾಗಾಣಿಕೆ, ಸೇರಿದಂತೆ ಹಲವು ಸಮಾಜಘಾತುಕ ಚಟುವಟಿಕೆಗಳ ಮಾಹಿತಿ ನೀಡಿದರೆ ಭಾರೀ ಬಹುಮಾನ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಈ ಕುರಿತು ಗೃಹ ಸಚಿವ ಅರಗಜ್ಞಾನೇಂದ್ರ ಮಾಹಿತಿ ನೀಡಿದ್ದು , ಮಹಿಳೆ ಮತ್ತು ಮಕ್ಕಳ ಮೇಲೆ ದೌರ್ಜನ್ಯ , ಕಳ್ಳಸಾಗಾಣಿಕೆ , ಮಾದಕ ವಸ್ತು ಸಾಗಾಣಿಕೆ, ಆಯುಧ ಕಳ್ಳಸಾಗಾಣಿಕೆ ಸೇರಿದಂತೆ ಹಲವು ಸಮಾಜಘಾತುಕ ಚಟುವಟಿಕೆಗಳ ಮಾಹಿತಿ ನೀಡಿದರೆ ಪ್ರಕರಣದ ತೀವ್ರತೆ ಆಧಾರದ ಮೇಲೆ ಕನಿಷ್ಠ 20 ಸಾವಿರ ರೂ.ನಿಂದ 5 ಲಕ್ಷ ರೂ.ರವರೆಗೆ ಬಹಮಾನ ಘೋಷಿಸುವ ಪ್ರಸ್ತಾವನೆಗೆ ಅನುಮತಿ ನೀಡಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy