ತುಮಕೂರು/ಚಿಕ್ಕಬಳ್ಳಾಪುರ: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ಚಿಕ್ಕಬಳ್ಳಾಪುರ ಶಾಖೆ ವತಿಯಿಂದ 6ನೇ ತರಗತಿಗೆ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆ, ಮನೆ ಭೇಟಿ ಮತ್ತು ಹಿನ್ನೆಲೆಯ ಪರಿಶೀಲನೆಯ ಮೂಲಕ ಆಯ್ಕೆ ಮಾಡಲಾಗುವುದು.
2026-27ನೇ ಸಾಲಿಗೆ ಚಿಕ್ಕಬಳ್ಳಾಪುರ, ಕೋಲಾರ ಮತ್ತು ತುಮಕೂರು ಜಿಲ್ಲೆಯ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಪ್ರವೇಶಾತಿಯನ್ನು ಆರಂಭಿಸಲಾಗಿದೆ.
ಜ.8 ರಿಂದ ಮಾರ್ಚ್ 14ರವರೆಗೆ ಚಿಕ್ಕಬಳ್ಳಾಪುರ, ಗೌರಿಬಿದನೂರು, ಬಾಗೇಪಲ್ಲಿ, ಶಿಡ್ಲಘಟ್ಟ, ಮಾಲೂರು, ಶ್ರೀ ನಿವಾಸಪುರ ಮತ್ತು ಕೋಲಾರದ ಬಿಜಿಎಸ್ ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ತುಮಕೂರು ಜಿಲ್ಲೆ ತಿಪಟೂರಿನ ಠಾಗೂರ್ ಶಾಲೆ, ಕುಣಿಗಲ್ ನ ಬಿಜಿಎಸ್ ಶಾಲೆ, ಮಧುಗಿರಿಯ ಚೇತನ ಇಂಗ್ಲಿಷ್ ಶಾಲೆಗಳಲ್ಲಿ ಅರ್ಜಿಗಳನ್ನು ವಿತರಿಸಲಾಗುವುದು.
ಅರ್ಜಿ ಸಲ್ಲಿಸಲು ಮಾ.14 ಕಡೆಯ ದಿನವಾಗಿರುತ್ತದೆ. ಏಪ್ರಿಲ್ 5 ರಂದು ಪ್ರವೇಶ ಪರೀಕ್ಷೆಯಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರಗಳ ಬಿಜಿಎಸ್ ಸಂಸ್ಥೆಗಳಲ್ಲಿ ಹಾಗೂ ತುಮಕೂರಿನ ಶೆಟ್ಟಿಹಳ್ಳಿ ಮುಖ್ಯ ರಸ್ತೆಯ ನಳಂದ ಶಾಲೆಯಲ್ಲಿ ನಡೆಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ 9611130481 (ತುಮಕೂರು), 9611568306 (ಕುಣಿಗಲ್), 9632352946 (ತಿಪಟೂರು), 9620390372 (ಮಧುಗಿರಿ), 9980767096 (ಶಿರಾ) ಇವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


