ಬೆಂಗಳೂರು ನಗರದ ಕಾಟನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡನೇ ವಿವಾಹದ ನೆಪದಲ್ಲಿ ವೃದ್ಧರೊಬ್ಬರಿಗೆ ವಂಚಿಸಿ 2.30 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಮಹಿಳೆ ಪರಾರಿಯಾಗಿರುವ ಘಟನೆ ನಡೆದಿದೆ.
ಕಾಟನ್‌ಪೇಟೆ ಒಟಿಸಿ ರಸ್ತೆಯ ಷಣ್ಮುಗಂ (62) ಎಂಬುವವರು ಮೋಸ ಹೋಗಿದ್ದು, ತಮಿಳುನಾಡು ಮೂಲದ ಮಲ್ಲಿಕಾ ಅಲಿಯಾಸ್ ಮಲ್ಗರ್ (35) ಈ ಕೃತ್ಯವೆಸಗಿ ನಾಪತ್ತೆಯಾಗಿದ್ದಾಳೆ.
ಬ್ರೋಕರ್ ಮೂಲಕ ಷಣ್ಮುಗಂ ಅವರನ್ನು ಪರಿಚಯ ಮಾಡಿಕೊಂಡು ಬಳಿಕ ಎರಡನೇ ಮದುವೆ ಮಾಡಿಕೊಂಡು ಆರೋಪಿ ವಂಚಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಮೊದಲ ಪತ್ನಿ ವಿಚ್ಛೇದನ ನೀಡಿದ್ದ ಷಣ್ಮುಗಂ, ತಮ್ಮ 10 ವರ್ಷದ ಮಗನ ಜೊತೆ ನೆಲೆಸಿದ್ದರು. ಮೆಕ್ಯಾನಿಕ್ ಆಗಿ ಜೀವನ ಸಾಗಿಸುತ್ತಿದ್ದ ಅವರು, ಇತ್ತೀಚೆಗೆ ಎರಡನೇ ವಿವಾಹವಾಗಿದ್ದರು. ಇನ್ನು ಆರೋಪಿ ಪತ್ತೆಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


